More

    ರೈತರಿಗೆ ಸೂಕ್ತ ಮಾಹಿತಿ ಒದಗಿಸಿ ಏಳಿಗೆಗೆ ಶ್ರಮಿಸಿ

    ವಿಜಯಪುರ: ಕೃಷಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ರೈತರಿಗೆ ಸೂಕ್ತ ಮಾಹಿತಿ ನೀಡಿ ಅವರ ಏಳಿಗೆಗೆ ಶ್ರಮಿಸಬೇಕೆಂದು ಜಂಟಿ ಕೃಷಿ ನಿರ್ದೇಶಕ ಡಾ.ರಾಜಶೇಖರ ವಿಲಿಯಮ್ಸ್ ಹೇಳಿದರು.

    ನಗರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೃಷಿ ವಿಸ್ತರಣಾ ಸೇವೆಗಳ ಡಿಪ್ಲೊಮಾ ಕೋರ್ಸ್‌ನ 2019-20 ನೇ ಸಾಲಿನ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

    ದೇಸಿ ಕೋರ್ಸ್ ಮುಗಿಸಿದ ಎಲ್ಲ ಪರಿಕರ ಮಾರಾಟಗಾರರು ವಿವಿಧ ವಿಷಯಗಳಲ್ಲಿ ಪಡೆದಿರುವ ಜ್ಞಾನವನ್ನು ರೈತರಿಗೆ ಒದಗಿಸಬೇಕು. ದೇಶದಲ್ಲಿ ಶೇ.50ರಷ್ಟು ರೈತರು ಕೃಷಿಗೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಕೃಷಿ ಪರಿಕರ ಮಾರಾಟಗಾರರಿಂದ ಪಡೆಯುತ್ತಿದ್ದಾರೆ. ಆದ್ದರಿಂದ ಈ ಕೋರ್ಸ್ ಆರಂಭಿಸಲಾಗಿದೆ. ಇಲ್ಲಿ ಪಡೆದ ಮಾಹಿತಿ ಮತ್ತು ಜ್ಞಾನವನ್ನು ರೈತರಿಗೆ ಉಣಬಡಿಸಬೇಕೆಂದರು.

    ಉಪ ಕೃಷಿ ನಿರ್ದೇಶಕ ಡಾ.ರಾಘವೇಂದ್ರ ದೇಸಿ ಕೋರ್ಸ್‌ನ ಮಹತ್ವ ತಿಳಿಸಿಕೊಟ್ಟರು. ಡಾ.ಎಂ. ಎಸ್. ಧನೆಲಪ್ಪಗೋಳ, ಡಾ. ಆರ್.ಬಿ. ಬೆಳ್ಳಿ ಮಾತನಾಡಿದರು. ಎಂ.ಎಂ. ಸಜ್ಜನ, ಎಂ.ಎಸ್. ನಿಂಬಾಳ, ಆನಂದ ಹೊಸಮನಿ, ರಮೇಶ ನಿಂಗನೂರ, ಲೋಹಿತ ಕೊಪ್ಪದ, ದ್ಯಾಮಣ್ಣ ಗುಳಬಾಳ ಮತ್ತಿತರರಿದ್ದರು. ಬಿ.ಟಿ.ಈಶ್ವರಗೊಂಡ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts