More

    ಸಾವಯವ ಕೃಷಿ ಪದ್ಧತಿ ಅತ್ಯಗತ್ಯ

    ವಿಜಯಪುರ: ಮನುಕುಲದ ಉಳಿವಿಗಾಗಿ ಯುವಕರು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದು ಅತ್ಯವಶ್ಯಕ ಎಂದು ಇಂಡಿ ವಲಯದ ಉಪ ಕೃಷಿ ನಿರ್ದೇಶಕ ಡಾ.ಎನ್.ರಾಘವೇಂದ್ರ ಹೇಳಿದರು.
    ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರದಿಂದ ಫೆ.29 ರವರೆಗೆ ನಡೆಯಲಿರುವ ಸಾವಯವ ಕೃಷಿ ಕೌಶಲಾಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಕೃಷಿ ಮಹಾವಿದ್ಯಾಲಯದ ಕೃಷಿ ಸಹ ವಿಸ್ತರಣಾ ನಿರ್ದೇಶಕ ಡಾ.ಆರ್.ಬಿ. ಬೆಳ್ಳಿ ಅಧ್ಯಕ್ಷತೆ ವಹಿಸಿ, ಯಥೇಚ್ಛ ರಾಸಾಯನಿಕ ಬಳಕೆಯಿಂದಾದ ದುಷ್ಪರಿಣಾಮಗಳನ್ನು ಕಡಿಮೆಮಾಡಲು ಸಾವಯವ ಕೃಷಿಯತ್ತ ಸಾಗುವುದು ಹಾಗೂ ಅದರ ಸಮಗ್ರ ಮಾಹಿತಿಯನ್ನು ಯುವ ರೈತರು ಕೌಶಲ ಅಭಿವೃದ್ಧಿ ತರಬೇತಿ ಮೂಲಕ ಪಡೆದುಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದರು.
    ಡಾ.ಪ್ರೇಮಾ ಪಾಟೀಲ, ಡಾ.ಸಂಗೀತಾ ಜಾಧವ, ಡಾ.ಶಿವಲಿಂಪ್ಪ ಹೋಟಕರ, ಡಾ.ಬಿ.ಸಿ. ಕೊಲ್ಹಾರ ಮತ್ತಿತರರು ಉಪಸ್ಥಿತರಿದ್ದರು. ಡಾ.ಎಸ್.ಎ. ಬಿರಾದಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ವಿವೇಕ ದೇವರನಾವದಗಿ ವಂದಿಸಿದರು. ಎಸ್.ಸಿ. ರಾಠೋಡ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts