More

    ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಜಾಗೃತಿ ಅಗತ್ಯ

    ವಿಜಯಪುರ: ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ನ್ಯಾಯವಾದಿ ರಘುನಂದನ ಪಾಂಡೆ ಹೇಳಿದರು.ನಗರದ ಎಕ್ಸಲೆಂಟ್ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ 2022-23ನೇ ಸಾಲಿನ ಶಾಲಾ ಸಂಸತ್ ರಚನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಚುನಾವಣೆಗಳು, ಮತದಾನ, ಆಯ್ಕೆ, ಅಧಿಕಾರ ಮತ್ತು ಕರ್ತವ್ಯಗಳೆಂಬ ಪರಿಕಲ್ಪನೆಗಳನ್ನು ಸಾಕಾರಗೊಳಿಸುವುದು ಇಂತಹ ಕಾರ್ಯಕ್ರಮಗಳ ಮೂಲ ಉದ್ದೇಶವಾಗಿದೆ ಎಂದರು.

    ಶಾಲೆ ಮುಖ್ಯಶಿಕ್ಷಕ ಎಂ.ಐ.ಬಿರಾದಾರ ಮಾತನಾಡಿ, ವಿದ್ಯಾರ್ಥಿಗಳು ಅಧ್ಯಯನದ ಮೂಲಕ ತಿಳಿದುಕೊಂಡ ಪರಿಭಾಷೆಗಳನ್ನು ಇಂತಹ ಕಾರ್ಯಕ್ರಮಗಳ ಮೂಲಕ ಪ್ರಾಯೋಗಿಕವಾಗಿ ಕಲಿತು ವಿಷಯಗಳಲ್ಲಿ ಪ್ರಾವಿಣ್ಯ ಸಾಧಿಸುವುದು ಇಂತಹ ಕಾರ್ಯಕ್ರಮದ ಮೂಲ ಧ್ಯೇಯವಾಗಿದೆ. ವಿದ್ಯಾರ್ಥಿಗಳು ವಿವಿಧ ಸ್ಥರದಲ್ಲಿ ನಡೆಯುವ ಚುನಾವಣೆ ಪ್ರಕ್ರಿಯೆ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

    ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಸಂಸ್ಥೆಯ ಗೌರವಾನ್ವಿತ ಸದಸ್ಯ ರಾಜಶೇಖರ ಕೌಲಗಿ ಮಾತನಾಡಿ, ಶಾಲಾ ಆವರಣದಲ್ಲಿ ಶಿಸ್ತು, ಸ್ವಚ್ಛತೆ, ಸಮಯ ಪಾಲನೆ ಅಧ್ಯಯನದಂಥ ಗುರುತರ ಜವಾಬ್ದಾರಿಗಳನ್ನು ಹೊತ್ತು ಶಾಲೆ ಪ್ರಗತಿಗೆ ಕೆಲಸ ಮಾಡಿದಾಗ ಪ್ರತಿ ವಿದ್ಯಾರ್ಥಿ ಶಾಲೆ ಋಣ ತೀರಿಸಿದಂತಾಗುತ್ತದೆ. ಎಲ್ಲ ಆದರ್ಶಗಳನ್ನು ರೂಢಿಸಿಕೊಂಡು ಸಹಪಾಠಿಗಳಲ್ಲಿ ಪ್ರೀತಿ, ಸಹೋದರತೆ ಬೆಳೆಸಿಕೊಂಡು ಅಧ್ಯಯನ ಕೈಗೊಳ್ಳುವುದು ಆದರ್ಶ ವಿದ್ಯಾರ್ಥಿ ಲಕ್ಷಣ ಎಂದರು.

    ಶಾಲಾ ಪ್ರಧಾನಿಯಾಗಿ ಸೀತಾ ದೀಕ್ಷಿತ, ಮೋಹನ ಹಡಗಲಿ (ಉಪಪ್ರಧಾನಿ), ಐಶ್ವರ್ಯ ಕಾಟಕರ (ಸಾಂಸ್ಕೃತಿಕ ಮಂತ್ರಿ), ಆಕಾಶ ಹೆಬ್ಬಾಳ (ಕ್ರೀಡಾ ಮಂತ್ರಿ), ನಿರೂಪ ಹುಣಚಗಿ (ಆರೋಗ್ಯ ಮಂತ್ರಿ), ಸಾಕ್ಷಿ ಕೊಕಟನೂರ (ಸ್ವಚ್ಛತೆ ಮಂತ್ರಿ), ವೀರೇಶ ಅವರಾದಿ (ಶಿಸ್ತು ಪಾಲನೆ ಮಂತ್ರಿ), ಭಾಗ್ಯಶ್ರೀ ಪಾಟೀಲ ಪ್ರವಾಸ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

    ಆರ್.ಎಂ.ನದಾಫ್ ಸ್ವಾಗತಿಸಿ ಪರಿಚಯಿಸಿದರು. ಜೆ.ಆರ್.ಗುಡ್ಡದ ಕಾರ್ಯಕ್ರಮ ನಿರೂಪಿಸಿದರು. ಬಿ.ಎಂ.ಅತ್ತಾರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts