More

    ವಿಜಯಪುರ ಮಹಾನಗರ ಪಾಲಿಕೆ ಆಡಳಿತ ಕಾಂಗ್ರೆಸ್ ತೆಕ್ಕೆಗೆ; ಬಿಜೆಪಿಗೆ ತೀವ್ರ ಮುಖಭಂಗ !

    ವಿಜಯಪುರ: ಮಹಾನಗರ ಪಾಲಿಕೆ ಆಡಳಿತ ಮತ್ತೆ ‘ಕೈ’ ವಶವಾಗಿದ್ದು, ಬಿಜೆಪಿಗೆ ತೀವ್ರ ಮುಖಭಂಗವಾಗಿದೆ !

    ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನ ಮಹೇಜ್‌ಬಿನ್ ಅಬ್ದುಲ್‌ರಜಾಕ್ ಹೊರ್ತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಉಪಮೇಯರ್ ಸ್ಥಾನಕ್ಕೆ ದಿನೇಶ ಹಳ್ಳಿ ಆಯ್ಕೆಯಾಗಿದ್ದಾರೆ. ಆ ಮೂಲಕ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ದರ್ಬಾರ್ ಮತ್ತೆ ಮುಂದುವರಿದರೆ, ಹೆಚ್ಚಿನ ಸ್ಥಾನ ಗಳಿಸಿದ್ದರೂ ಮೇಯರ್ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಮುಗ್ಗರಿಸಿರುವ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ.

    ಒಟ್ಟು 35 ಸದಸ್ಯ ಬಲದ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ-17, ಕಾಂಗ್ರೆಸ್-10, ಎಐಎಂಐಎಂ-2, ಜೆಡಿಎಸ್-1 ಹಾಗೂ ಪಕ್ಷೇತರ-5 ಸದಸ್ಯರಿದ್ದರು. ಇತ್ತೀಚೆಗಷ್ಟೇ ಬಿಜೆಪಿಯ ಓರ್ವ ಸದಸ್ಯ ನಿಧನವಾಗುವ ಮೂಲಕ ಬಿಜೆಪಿ ಸಂಖ್ಯಾಬಲ 16ಕ್ಕೆ ಕುಸಿದಿತ್ತು. ಆದರೂ, ಬಹುಮತ ಸಾಬೀತು ಪಡಿಸುವುದು ಬಿಜೆಗೆ ಕಷ್ಟವೇನಿರಲಿಲ್ಲ. ಹೊಂದಾಣಿಕೆ ರಾಜಕಾರಣವೋ ಏನೋ ಮತ್ತೆ ಕಾಂಗ್ರೆಸ್‌ಗೆ ಅಧಿಕಾರ ಬಿಟ್ಟುಕೊಟ್ಟಿದ್ದು ಪಕ್ಷದ ಕಾರ್ಯಕರ್ತರನ್ನು ಮುಜುಗರಕ್ಕೀಡಾಗಿಸಿದೆ.

    ಕಷ್ಟವಾದರೂ ‘ಕೈ’ ಮೇಲು

    ಸ್ಥಳೀಯ ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರ ಮತ ಪರಿಗಣಿಸಿದರೆ ಮಹಾನಗರ ಪಾಲಿಕೆಯ ಒಟ್ಟು ಸದಸ್ಯ ಬಲ 41 ಆಗಲಿದ್ದು, ಸದಸ್ಯನೋರ್ವನ ನಿಧನದಿಂದಾಗಿ ಆ ಸಂಖ್ಯೆ 40ಕ್ಕೆ ಕುಸಿದಿತ್ತು. ಹೀಗಾಗಿ ಮ್ಯಾಜಿಕ್ ಸಂಖ್ಯೆ 21 ಆಗಿತ್ತು. ಬಿಜೆಪಿಯ 16 ಸದಸ್ಯ ಬಲದ ಜೊತೆಗೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಸಂಸದ ರಮೇಶ ಜಿಗಜಿಣಗಿಯವರ ಮತ ಸೇರಿ 18 ಆಗಿದ್ದು, ಕಾಂಗ್ರೆಸ್‌ನ 10 ಸದಸ್ಯ ಬಲದ ಜೊತೆಗೆ ಶಾಸಕರಾದ ಎಂ.ಬಿ. ಪಾಟೀಲ, ವಿಠಲ ಕಟಕದೋಂಡ, ವಿಪ ಸದಸ್ಯರಾದ ಸುನೀಲಗೌಡ ಪಾಟೀಲ ಹಾಗೂ ಪ್ರಕಾಶ ರಾಠೋಡ ಮತ ಸೇರಿ 14 ಮತದಾರರಿದ್ದರು. ಕಳೆದೊಂದು ತಿಂಗಳ ಹಿಂದೆಯೇ ಎಐಎಂಐಎಂ, ಪಕ್ಷೇತರ ಹಾಗೂ ಜೆಡಿಎಸ್ ಸದಸ್ಯರ ಪೈಕಿ ಏಳು ಜನ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಆ ಮೂಲಕ ಕಾಂಗ್ರೆಸ್ ಅಧಿಕಾರ ಗದ್ದು ಹಿಡಿಯಲು ಬೇಕಾದ ಸ್ಪಷ್ಟ ಬಹುಮತ ಹೊಂದಿತ್ತು.

    ವಿಜಯಪುರ ಮಹಾನಗರ ಪಾಲಿಕೆ ಆಡಳಿತ ಕಾಂಗ್ರೆಸ್ ತೆಕ್ಕೆಗೆ; ಬಿಜೆಪಿಗೆ ತೀವ್ರ ಮುಖಭಂಗ !

    ಆದರೆ, 18 ಮತದಾರರನ್ನು ಹೊಂದಿದ ಬಿಜೆಪಿಗೆ ಕೇವಲ ಮೂರು ಸ್ಥಾನಗಳನ್ನು ಹೊಂದಿಸಲಾಗದೇ ಇರುವುದು ಅಚ್ಚರಿಯ ಜೊತೆಗೆ ರಾಷ್ಟ್ರೀಯ ಪಕ್ಷವೊಂದರ ಅಸಮರ್ಥತೆಯನ್ನು ಅನಾವರಣಗೊಳಿಸಿತು. ಕೊನೇ ಕ್ಷಣದವರೆಗೂ ಚುನಾವಣೆ ತಡೆಯುವ ಬಗ್ಗೆಯೇ ಯೋಚಿಸಿದ ಬಿಜೆಪಿ ನಾಯಕರು ತಮ್ಮ ಸದಸ್ಯ ನಿಧನವಾಗಿದ್ದು, ಚುನಾವಣೆ ಪ್ರಕ್ರಿಯೆ ನಡೆಸದಂತೆ ಪಟ್ಟು ಹಿಡಿದರಲ್ಲದೇ ಕಪ್ಪು ಬಟ್ಟೆ ಪ್ರದರ್ಶನ ಮಾಡಿ, ಚುನಾವಣೆ ಬಹಿಷ್ಕರಿಸಿ ಹೊರನಡೆದಿದ್ದು ಅಸಾಹಯಕತೆ ಧ್ಯೋತಕವೆಂದು ಬಣ್ಣಿಸಲಾಯಿತು.

    ಇದೊಂದು ಅಕ್ರಮದ ಚುನಾವಣೆ, ಇದನ್ನು ನಾವು ಒಪ್ಪುವುದಿಲ್ಲವೆಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರೆ ಯತ್ನಾಳರ ಹೇಳಿಕೆ ನಿರೀಕ್ಷಿತವಾಗಿದ್ದು ಕಾಂಗ್ರೆಸ್ ಪಾಲಿಗೆ ಐತಿಹಾಸಿಕ ಗೆಲುವು ಎಂದು ಸಚಿವ ಎಂ.ಬಿ. ಪಾಟೀಲ ಪ್ರತಿಕ್ರಿಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts