More

    ಭೂಕಂಪನದ ಹಾವಳಿಗೆ ಬೆಚ್ಚಿದ ಜನ

    ವಿಜಯಪುರ: ಭೂಕಂಪನದ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಗುಮ್ಮಟ ನಗರಿಯ ಜನರಲ್ಲಿ ಜೀವ ಭಯ ಸೃಷ್ಟಿಯಾಗಿದೆ. ಕೇವಲ ಮೂರು ದಿನದಲ್ಲಿ ನಾಲ್ಕು ಬಾರಿ ಭೂಮಿ ಕಂಪಿಸಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಲಕ್ಷಣಗಳು ಗೋಚರಿಸುತ್ತಿವೆ. ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೋಯೊಂದು ಮತ್ತಷ್ಟು ಆತಂಕ ಹೆಚ್ಚಿಸಿದೆ. ಅದರಲ್ಲಿ ಮುಂದೆ ಇದಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಭೂ ಕಂಪಿಸಲಿದೆ ಎಂಬ ಹೇಳಿಕೆ ಇದ್ದು, ಇದು ಮತ್ತಷ್ಟು ಆತಂಕ ಹೆಚ್ಚಿಸಿದೆ.

    ಸತತ ಮೂರು ದಿನಗಳಿಂದ ಜಿಲ್ಲೆಯ ವಿವಿಧೆಡೆ ಭೂಮಿ ಕಂಪಿಸಿದೆ. ಸೋಮವಾರ ಸಂಜೆ 4.26ರ ಸುಮಾರಿಗೆ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ಭೂಮಿ ಕಂಪಿಸಿದ ಬೆನ್ನಲ್ಲೇ ತಡರಾತ್ರಿ ಮತ್ತೆ ಕಂಪನವಾಗಿದೆ. ಇದಕ್ಕೂ ಮುನ್ನ ಅಂದರೆ, ಆ. 20 ರಿಂದ ಭೂಮಿ ಕಂಪಿಸುತ್ತಲೇ ಇದೆ. ಸರಾಸರಿ 3.5ರಷ್ಟು ತೀವ್ರತೆ ದಾಖಲಾಗಿದೆ.

    ಆತಂಕ ಹೆಚ್ಚಿಸಿದ ಆಡಿಯೋ
    ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಡಿಯೋದಿಂದ ಜನ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಸದ್ಯ 3.5ರಷ್ಟು ತೀವ್ರತೆ ಇದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ. ಗರಿಷ್ಠ 6ರಷ್ಟು ತೀವ್ರತೆ ಹೆಚ್ಚಲಿದೆ ಎಂಬ ಮಾಹಿತಿ ಇದೆ. ಕೇವಲ 5ರಷ್ಟು ತೀವ್ರತೆ ದಾಖಲಾದರೆ ಸಾಕು ಕಟ್ಟಡಗಳು ಉರುಳುತ್ತವೆ. ಇನ್ನು 6ರಷ್ಟು ದಾಖಲಾದರೆ ಪರಿಸ್ಥಿತಿ ಏನಾಗಬೇಡ? ಎಂಬುದೇ ಆತಂಕದ ಸಂಗತಿ.

    ಭೂಮಿಯೊಳಗೆ ಶಿಲಾಪದರುಗಳು ಸರಿದಾಡುತ್ತಿರುವುದರಿಂದ ಭಾರಿ ಪ್ರಮಾಣದಲ್ಲಿ ಶಬ್ದ ಉಂಟಾಗುತ್ತಿದೆ. ಯಾವುದೇ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ಶಿಲಾಪದರುಗಳು ಬ್ರೇಕ್ ಆಗಬಹುದು ಎಂಬುದು ಆಡಿಯೋ ಸಾರಾಂಶ.

    ಮುಂಜಾಗ್ರತೆಗೆ ಆಗ್ರಹ
    ಸಂಭವನೀಯ ಅನಾಹುತ ತಡೆಯಲು ಜಿಲ್ಲಾಡಳಿತ ಈಗಿನಿಂದಲೇ ಮುಂಜಾಗ್ರತೆ ಕೈಗೊಳ್ಳಬೇಕು. ತಜ್ಞರೊಂದಿಗೆ ಚರ್ಚಿಸಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು. ಭೂಕಂಪನಕ್ಕೆ ಕಾರಣವೇನು? ತಡೆಯಲು ಸಾಧ್ಯವಾ? ಮುಂಜಾಗ್ರತೆ ಕ್ರಮಗಳೇನು? ಎಂಬುದರ ಕುರಿತು ಜನರಲ್ಲಿ ತಿಳಿವಳಿಕೆ ಮೂಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

    ಆಡಿಯೋ ವೈರಲ್‌ಗೆ ಸಂಬಂಧಿಸಿದಂತೆ ಯಾರೂ ಭಯ ಪಡುವ ಅಗತ್ಯ ಇಲ್ಲ. ಈಗಾಗಲೇ ತಜ್ಞರ ಜೊತೆ ಸಭೆ ನಡೆಸಲಾಗಿದೆ. ಯಾವುದೇ ಆತಂಕ ಇಲ್ಲವೆಂದು ತಿಳಿಸಿದ್ದಾರೆ. ವಿಜ್ಞಾನಿಗಳ ತಂಡ ಕಳುಹಿಸಿ ಪರಿಶೀಲಿಸುವಂತೆ ಸರ್ಕಾರಕ್ಕೆ ಪತ್ರ ಸಹ ಬರೆಯಲಾಗಿದೆ. ಸಾರ್ವಜನಿಕರು ಭಯ ಪಡುವುದು ಬೇಡ. ಬದಲು ಮುಂಜಾಗ್ರತೆಯಿಂದಿದ್ದರೆ ಸಾಕು.
    ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts