More

    ಕಾಡಿನಿಂದ ನಾಡಿಗೆ ಬಂದ ಜಾಂಬವಂತ

    ವಿಜಯನಗರ: ಹೊಸಪೇಟೆಯ ಸಿರಸನಕಲ್ಲು ಪ್ರದೇಶದಲ್ಲಿ ಮಂಗಳವಾರ ತಡರಾತ್ರಿ ಕಾಣಿಸಿಕೊಂಡ ಕರಡಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ 6 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.

    ಇದನ್ನು ಓದಿ: Hosapete Tungabhadra Dam: ಈ ಬಾರಿ ಗಣನೀಯ ಇಳಿಕೆ ಕಂಡ ತುಂಗಭದ್ರಾ ಜಲಾಶಯದ ಒಳಹರಿವು

    ಮಂಗಳವಾರ ತಡರಾತ್ರಿ ಒಂದು ಗಂಟೆ ಸುಮಾರಿಗೆ ನಗರದಲ್ಲಿ ಕಾಣಿಸಿಕೊಂಡಿದೆ. ಜನರನ್ನು ಕಣ್ಣು ತಪ್ಪಿಸಿ ಅಡ್ಡಾಡಿ ಜನರಲ್ಲಿ ಭಯ ಹುಟ್ಟಿಸಿತು. ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಮರ ಏರಿ ಕುಳಿತಿದ್ದ ಕರಡಿಯನ್ನು ಸುಮಾರು 6 ಗಂಟೆಗಳ ಕಾಲ ರಕ್ಷಣಾ ಕಾರ್ಯ ನಡೆಸಿದರು.

    ಮಧ್ಯರಾತ್ರಿ ಮರದ ಮೇಲೆ ಕುಳಿತುಕೊಂಡ ಕರಡಿಯನ್ನು ಹೊಸಪೇಟೆ  ಆರ್‌ಎಫ್‌ಒ ಭರತ್ ರಾಜ್ ಅವರ ನೇತೃತ್ವದಲ್ಲಿ ಯಶಸ್ವಿಗೊಳಿಸಿದ ಕಾರ್ಯಾಚರಣೆ ಆತಂಕದಲ್ಲಿದ್ದ ಜನತೆ ನಿಟ್ಟುಸಿರು ಬಿಡುವಂತೆ ಮಾಡಿತು.

    ಕರಡಿಯನ್ನು ಸುರಕ್ಷಿತವಾಗಿ ದರೋಜಿ ಕರಡಿ ಧಾಮದಲ್ಲಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಸಾರ್ವಜನಿಕರಿಗೆ ಹಾಗೂ ಕರಡಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ರಕ್ಷಣೆ ಮಾಡಲಾಗಿದೆ. ಕರಡಿಯ ಸ್ಥಿತಿಗತಿ ನೋಡಿ ಅರಣ್ಯಕ್ಕೆ ಬಿಡಲಾಗುವುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts