More

    ಸಿಎಂ ಭೇಟಿ ಬಳಿಕ ಕರಡಿ ಕಾಂಗ್ರೆಸ್​ ಸೇರ್ಪಡೆ

    ಕೊಪ್ಪಳ: ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್​ ಭೇಟಿಗೆ ಏ.17 ರಂದು ಸಮಯ ನಿಗದಿಯಾಗಿದೆ. ಚರ್ಚೆ ಬಳಿಕ ಕಾಂಗ್ರೆಸ್​ ಸೇರುವ ನಿರ್ಧಾರ ಪ್ರಕಟಿಸುವೆ ಎಂದು ಬಿಜೆಪಿ ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ.

    ಮಾಜಿ ಡಿಸಿಎಂ ಲಕ್ಷ$್ಮಣ ಸವದಿ ಸಿಎಂ ಭೇಟಿಗೆ ವ್ಯವಸ್ಥೆ ಮಾಡಿದ್ದಾರೆ. ಕೈ ನಾಯಕರು ಅನೇಕರು ಪಕ್ಷ ಸೇರುವಂತೆ ಆಹ್ವಾನಿಸಿದ್ದಾರೆ. ಬಿಜೆಪಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ಹೊರತು ಪಡಿಸಿ ಉಳಿದವರು ನನ್ನ ಸಂಪರ್ಕದಲ್ಲಿಲ್ಲ. ನನ್ನ ಬೇಡಿಕೆಗಳನ್ನು ಸಿದ್ದರಾಮಯ್ಯ ಮುಂದಿಡುವೆ. ಅವರ ಜತೆ ಚರ್ಚಿಸಿದ ಬಳಿಕ ನನ್ನ ರ್ನಿಣಯ ತಿಳಿಸುವೆ. ಕಾಂಗ್ರೆಸ್​ ಸೇರ್ಪಡೆ ತೀಮಾರ್ನದ ಬಳಿಕ ಯಾರೆಲ್ಲ ನನ್ನನ್ನು ರ್ನಿಲಕ್ಷ್ಯ ಮಾಡಿದ್ದಾರೆ ಎನ್ನುವುದನ್ನು ಬಹಿರಂಗಪಡಿಸುವೆ ಎಂದು ಮಂಗಳವಾರ ಸುದ್ದಿಗಾರರಿಗೆ ಹೇಳಿದರು.

    ಸೋಮವಾರ ರಾತ್ರಿ ಲಕ್ಷ$್ಮಣ ಸವದಿ ಕರಡಿ ನಿವಾಸಕ್ಕೆ ಭೇಟಿ ನೀಡಿದ್ದು, ಕೆಲ ಹೊತ್ತು ಗುಪ್ತ ಸಭೆ ನಡೆಸಿದರು. ಕಾಂಗ್ರೆಸ್​ ಸೇರುವಂತೆ ಆಹ್ವಾನ ನೀಡಿದ್ದು, ಸಾಧಕ&ಬಾಧಕಗಳ ಚರ್ಚೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್​ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಮಂಗಳವಾರ ಕರಡಿ ನಿವಾಸಕ್ಕೆ ಆಗಮಿಸಿ ಆರ್ಶೀವಾದ ಪಡೆದು ನಾಮಪತ್ರ ಸಲ್ಲಿಕೆ ಮಾಡಿದರು. ಸಂಗಣ್ಣ ಕಾಂಗ್ರೆಸ್​ ಸೇರುವ ವಿಶ್ವಾಸ ವ್ಯಕ್ತಪಡಿಸಿದರು. ಸಂಸದ ಸಂಗಣ್ಣ ಸಹ ಬೆಂಗಳೂರಿಗೆ ತೆರಳಿದ್ದು, ಶ್ರೀವೇ ಕಾಂಗ್ರೆಸ್​ ಸೇರ್ಪಡೆ ಸೂಚನೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts