More

    ವಿಜಯನಗರ ಕಾಲದ ಶಿಲಾ ಶಾಸನ ಪತ್ತೆ

    ಕುಂದಾಪುರ: ಕಂದಾವರ ಗ್ರಾಮದ ಸಾಂತಾವರ ಶ್ರೀ ವೀರಾಂಜನೇಯ ದೇವಾಲಯ ಸಮೀಪ ಜನಾದರ್ನ ಶೇರೆಗಾರ ಅವರ ಗದ್ದೆಯಲ್ಲಿ ವಿಜಯನಗರ ಕಾಲದ ಶಿಲಾ ಶಾಸನ ಬುಧವಾರ ಪತ್ತೆಯಾಗಿದೆ.

    ಶಾಸನದಲ್ಲಿ ಸೂರ್ಯ ಚಿಹ್ನೆಯಿದ್ದು, ‘ಸೂರ್ಯ, ಚಂದ್ರ ಇರುವ ತನಕ ಅಜರಾಮರವಾಗಿರಲಿ’ ಎನ್ನುವ ಸಂದೇಶದೊಂದಿಗೆ ಎಡ ಭಾಗದಲ್ಲಿ ನಂದಿ ವಿಗ್ರಹದ ಜತೆಗೆ ಶಿವಲಿಂಗವಿದೆ. ಶಿವಲಿಂಗದ ಬಲ ಭಾಗದಲ್ಲಿ ದೀಪಸ್ತಂಭ, ಖಡ್ಗವಿದೆ. ಕ್ರಿ.ಶ 15-16ನೇ ಶತಮಾನದ ವಿಜಯನಗರ ಕಾಲದ (ಸುಮಾರು 400-500 ವರ್ಷ ಹಿಂದಿನ) ಶಾಸನವೆಂದು ತಿಳಿದು ಬಂದಿದೆ. ಇತಿಹಾಸ ಅಧ್ಯಯನ ಆಸಕ್ತ ಪ್ರದೀಪ ಕುಮಾರ ಬಸ್ರೂರು, ಇತಿಹಾಸ ಸಂಶೋಧಕ ಡಾ.ಕಿಶೋರ್ ಕುಮಾರ್ ಶೆಟ್ಟಿ ಮಾರ್ಗದರ್ಶನದಲ್ಲಿ ಶಾಸನ ಪತ್ತೆ ಹಚ್ಚಿದ್ದಾರೆ. ಭರತ್ ಗುಡಿಗಾರ, ಜನಾರ್ದನ್ ಶೇರೆಗಾರ್ ಸಹಕರಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts