More

    ಜೈನ ಬಸದಿಯಲ್ಲಿ ಶಿಲಾ ಶಾಸನ, ಲೋಹ ಶಾಸನ ಪತ್ತೆ

    ಕಳಸ: ಕಳಸ ತಾಲೂಕಿನ ಇಡಕಿಣಿ ಗ್ರಾಮದ ಜೈನ ಬಸದಿಯಲ್ಲಿ ಇತಿಹಾಸ ಸಂಶೋಧಕ ಎಚ್.ಆರ್.ಪಾಂಡುರಂಗ ಅವರು ಒಂದು ಶಿಲಾ ಶಾಸನ ಹಾಗೂ ಒಂದು ಲೋಹ ಶಾಸನನವನ್ನು ಸಂಶೋಧಿಸಿ ಕಳಸ ಸೀಮೆಯ ಜೈನ ಇತಿಹಾಸದ ಮೇಲೆ ಹೊಸ ಬೆಳಕು ಬೀರಿದ್ದಾರೆ.
    ಇಡಕಿಣಿ ಜೈನ ಹೆಗ್ಗಡೆ ಅವರ ಕುಟುಂಬದ ಖಾಸಗಿ ಬಸದಿಯಾದ ಇಡಕಿಣಿ ಶ್ರೀ ಪಾರ್ಶ್ವನಾಥ ಬಸದಿಯಲ್ಲಿರುವ ಮೂಲನಾಯಕ ವಿಗ್ರಹ ಶ್ರೀಪಾರ್ಶ್ವನಾಥ ತೀಥರ್ಂಕರರ ಶಿಲಾವಿಗ್ರಹದ ಹಿಂಭಾಗ ಮತ್ತು ಪಾರ್ಶ್ವಭಾಗ ಮತ್ತು ಪಾದದ ಬಳಿಯಲ್ಲಿ ಶಾಸನ ಕಂಡುಬಂದಿದ್ದು, ಇದೇ ವಿಗ್ರಹದ ಕೆಳಗಿನ ಲೋಹದ ಪಾದ ಪೀಠದ ಮುಂಭಾಗ ಮತ್ತು ಎಡಪಾರ್ಶ್ವದಲ್ಲಿಯೂ ಶಾಸನ ಕಂಡು ಬಂದಿದೆ.
    ತೀಥರ್ಂಕರರ ವಿಗ್ರಹದ ಹಿಂಭಾಗದ ಶಿಲಾ ಶಾಸನದಲ್ಲಿ ವಿಜಯನಗರ ಆರಂಭಕಾಲದ ಕನ್ನಡ ಲಿಪಿ ಸಾದೃಶ್ಯದ ಆರು ಸಾಲನ್ನು ಹೊಂದಿದೆ.’’ಕಾಳಾಯುಕ್ತಿ ಸಂವತ್ಸರದ ಆಶ್ವೀಜ ಮಾಸದ ಬುಧವಾರ’’ ಎಂಬ ಕಾಲಮಾನದ ಉಲ್ಲೇಖವಿದೆ.
    ತೀಥರ್ಂಕರರ ಎಡಗೈ ಕೆಳಭಾಗದ ಶಾಸನದಲ್ಲಿ ಮೇಲಿನಿಂದ ಕೆಳಕ್ಕೆ ಏಳು ಸಾಲಿನ ಶಾಸನವಿದೆ.‘ಕಳಸದ ದೇವ ಚಂದ್ರ ದೇವರು’ಎಂಬ ಉಲ್ಲೇಖವಿದೆ. ಈ ಶಾಸನೋಕ್ತ ‘ದೇವ ಚಂದ್ರ ದೇವರು’ ಅಂದಿನ ಪ್ರಸಿದ್ಧ ಜೈನಾಚಾರ್ಯರಾಗಿದ್ದ ಮೂಲ ಸಂಘ ಪನಸೋಗೆ ಸಮೀಪದ ಶ್ರೀಲಲಿತಾ ಕೀರ್ತಿ ದೇವರ ಶಿಷ್ಯರಾಗಿದ್ದರು. ಅಂದಿನ ಕಳಸ-ಕಾರ್ಕಳ ರಾಜ್ಯದ ದೊರೆ ಹಾಗೂ ಕಾರ್ಕಳದ ಗೊಮ್ಮಟೇಶ್ವರ ವಿಗ್ರಹ ಪ್ರತಿಷ್ಟಾಪನೆ ಮಾಡಿ ಅಭಿನವ ಚಾವುಂಡರಾಯ ಎನಿಸಿದ್ದ ‘ವೀರಪಾಂಡ್ಯ ದೇವರಸ ಒಡೆಯರ’ಆಡಳಿತ ಕಾಲದಲ್ಲಿ ಕಳಸ ಸೀಮೆ ಬಸದಿಯಲ್ಲಿ ಚಂದ್ರನಾಥ ತೀಥರ್ಂಕರರ ಪ್ರತಿಷ್ಟಾಪನೆ ಮಾಡಿದ ದೇವಚಂದ್ರ ದೇವರೇ ಆಗಿರುವ ಸಾಧ್ಯತೆಯಿದೆ.
    ಈ ದೇವಚಂದ್ರ ದೇವರೇ,ಅಂದು ಕಳಸದಲ್ಲಿದ್ದ ಜೈನ ಮಠದ ಆಚಾರ್ಯರಾಗಿದ್ದು ಭೈರವರಸರ ರಾಜ ಗುರುಗಳಾಗಿದ್ದರು ಎಂದು ಊಹಿಸಬಹುದಾಗಿದೆ. ಈ ಶಾಸನ 15 ಶತಮಾನದ ಕಾಲಮಾನಕ್ಕೆ ಸೇರಿರಬಹುದು ಎಂದು ಅಂದಾಜಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts