More

    ಈ ಚಿತ್ರದಲ್ಲಿರೋದು ಒಂದೇ ಪಾತ್ರ … ‘ರಾಘು’ ಚಿತ್ರದಲ್ಲಿ ವಿಜಯ್​ ರಾಘವೇಂದ್ರ ಹೊಸ ಪ್ರಯೋಗ …

    ಬೆಂಗಳೂರು: ವಿಜಯ್​ ರಾಘವೇಂದ್ರ ಇತ್ತೀಚಿನ ವರ್ಷಗಳಲ್ಲಿ ಚಿತ್ರದಿಂದ ಚಿತ್ರಕ್ಕೆ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಈಗ ಅವರು ‘ರಾಘು’ ಎಂಬ ಹೊಸ ಚಿತ್ರದ ಮೂಲಕ ತಮ್ಮ ಚಿತ್ರಜೀವನದಲ್ಲೇ ಮೊದಲ ಬಾರಿಗೆ ಹೊಸ ಪ್ರಯೋಗವೊಂದನ್ನು ಮಾಡುತ್ತಿದ್ದಾರೆ. ಇದೊಂದು ಸೋಲೋ ಆಕ್ಟಿಂಗ್​ ಚಿತ್ರವಾಗಿದ್ದು, ಇಡೀ ಚಿತ್ರದಲ್ಲಿ ವಿಜಯ್​ ರಾಘವೇಂದ್ರ ಒಬ್ಬರೇ ನಟಿಸಿದ್ದಾರೆ.

    ಇದನ್ನೂ ಓದಿ ಹರಿದಾಡುತ್ತಿದ್ದ ಸುದ್ದಿಗೆ ಅಧಿಕೃತ ಮುದ್ರೆ ಒತ್ತಿದ ಸಿಂಹ ಪ್ರಿಯಾ …

    ಒಂದೇ ಪಾತ್ರವಿರುವ ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ಹೊಸದಲ್ಲ. ‘ಶಾಂತಿ’ಯಿಂದ ಪ್ರಾರಂಭವಾಗಿ ಇತ್ತೀಚೆಗೆ ಮುಕ್ತಾಯವಾದ ‘ಗೊಂಬೈ ಹೇಳುತೈತೆ’ ಚಿತ್ರಗಳವರೆಗೂ ಹಲವು ಚಿತ್ರಗಳಲ್ಲಿ ಇಂಥ ಪ್ರಯೋಗಗಳನ್ನು ಮಾಡಲಾಗಿದೆ. ಆದರೆ, ಥ್ರಿಲ್ಲರ್​ ಜಾನರ್​ನಲ್ಲಿ ಇಂಥದ್ದೊಂದು ಪ್ರಯತ್ನ ಯಾರೂ ಮಾಡಿರಲಿಲ್ಲ ಮತ್ತು ಅಂಥದ್ದೊಂದು ಪ್ರಯೋಗವನ್ನು ‘ರಾಘು’ ಚಿತ್ರತಂಡ ಮಾಡಿದೆ.

    ‘ರಾಘು ‘ ಚಿತ್ರವನ್ನು ಎಂ. ಆನಂದ್​ ರಾಜ್​ ನಿರ್ದೇಶನ ಮಾಡಿದ್ದು, ‘ಆನ’ ಹಾಗೂ ‘ಬ್ಯಾಂಗ್’ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಅವರಿಗಿದೆ. ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಎಸ್ ಸ್ಟುಡಿಯೋ, ಕೋಟಾ ಫಿಲಂ ಫ್ಯಾಕ್ಟರಿ ಪ್ರೊಡಕ್ಷನ್ ಹೌಸ್ ನಡಿ ಸಿನಿಮಾ ನಿರ್ಮಾಣವಾಗಿದ್ದು, ರಣ್ವಿತ್ ಶಿವಕುಮಾರ್, ಅಭಿಷೇಕ್ ಕೋಟ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

    ‘ರಾಘು’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು ಚಿತ್ರದ ಪ್ರಚಾರ ಕಾರ್ಯವನ್ನು ಚಿತ್ರತಂಡ ಆರಂಭಿಸಿದೆ. ಸದ್ಯದಲ್ಲೇ ಸಿನಿಮಾ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅನೌನ್ಸ್ ಮಾಡಲಿದೆ.

    ಇದನ್ನೂ ಓದಿ: ಮತ್ತೆ ಆತ್ಮದ ಹಿಂದೆ ಬಿದ್ದರಾ ಹರ್ಷ? ‘ದಿ ಸೌಲ್​ ಆಫ್​ ವೇದ’ ಟೀಸರ್​ ಬಿಡುಗಡೆ

    ಚಿತ್ರಕ್ಕೆ ಉದಯ್​ ಲೀಲಾ ಛಾಯಾಗ್ರಹಣ, ಸೂರಜ್​ ಜೋಯಿಸ್​ ಸಂಗೀತ, ರಿತ್ವಿಕ್​ ಮುರಳೀಧರ್​ ಹಿನ್ನೆಲೆ ಸಂಗೀತವಿದೆ, ಚಿತ್ರಕ್ಕಾಗಿ ಸೌಂಡ್ ಡಿಸೈನಿಂಗ್​ನಲ್ಲಿ ಹೊಸ ರೀತಿಯ ಪ್ರಯೋಗವನ್ನು ಮಾಡಲಾಗಿದ್ದು, ಬಿ.ಆರ್.ನವೀನ್ ಕುಮಾರ್ ಅವರು ವಿಭಿನ್ನ ಉಪಕರಣಗಳನ್ನು ಬಳಸಿ ಹೊಸ ರೀತಿಯ ಸೌಂಡ್ ಎಫೆಕ್ಟ್ ನೀಡಿದ್ದಾರೆ ಎಂದು ಹೇಳಲಾಗಿದೆ.

    ಕಾಲಿವುಡ್​ಗೆ ಹೊಂಬಾಳೆ ಎಂಟ್ರಿ; ಕೀರ್ತಿ ಸುರೇಶ್ ಅಭಿನಯದಲ್ಲಿ ‘ರಘು ತಥಾ’ ನಿರ್ಮಾಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts