More

    6 ಸಾವಿರ ಕೋಟಿ ರೂ. ಸಾಲಕ್ಕೆ 14 ಸಾವಿರ ಕೋಟಿ ರೂ. ಆಸ್ತಿ ಜಪ್ತಿ: ಇ.ಡಿ., ಬ್ಯಾಂಕುಗಳ ವಿರುದ್ಧ ಮಲ್ಯ ಆರೋಪ

    ಲಂಡನ್​: ಹಲವು ಬ್ಯಾಂಕುಗಳಿಂದ ಸಾಲ ಪಡೆದು ಪರಾರಿಯಾಗಿರುವ ಮದ್ಯದ ದೊರೆ ವಿಜಯ್​ ಮಲ್ಯರನ್ನು ಲಂಡನ್​ ಹೈಕೋರ್ಟ್​ ಕಳೆದ ಸೋಮವಾರ ದಿವಾಳಿಯೆಂದು ಘೋಷಣೆ ಮಾಡಿದೆ. ಇದಕ್ಕೆ ಟ್ವಿಟ್ಟರ್​​ ಮೂಲಕ ಪ್ರತಿಕ್ರಿಯಿಸಿರುವ ಅವರು, ಭಾರತೀಯ ಬ್ಯಾಂಕುಗಳು, ಜಾರಿ ನಿರ್ದೇಶನಾಲಯ (ಇ.ಡಿ.) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬ್ಯಾಂಕುಗಳಿಂದ ತಾನು ಪಡೆದ ಸಾಲಕ್ಕಿಂತ ಎರಡು ಪಟ್ಟು ಹೆಚ್ಚಿನ ಆಸ್ತಿಯನ್ನು ಇ.ಡಿ. ವಶಪಡಿಸಿಕೊಂಡು ಬ್ಯಾಂಕುಗಳಿಗೆ ನೀಡಿದೆ. ಜಾರಿ ನಿರ್ದೇಶನಾಲಯಕ್ಕೆ ಮರಳಿ ಸೊತ್ತನ್ನು ಹಿಂದಿರುಗಿಸಬೇಕೆಂಬ ಭಯದಿಂದಲೇ ತನ್ನನ್ನು ದಿವಾಳಿಯೆಂದು ಘೋಷಣೆ ಮಾಡುವಂತೆ ಬ್ಯಾಂಕುಗಳು ಕೋರ್ಟ್​​ ಮೊರೆ ಹೋಗಿವೆ ಎಂದು ಆರೋಪಿಸಿದ್ದಾರೆ.

    ಇದನ್ನೂ ಓದಿ: ಅಸ್ಸಾಂನಲ್ಲಿ ಮುಸ್ಲಿಂ ಜನಸಂಖ್ಯೆ ನಿಯಂತ್ರಿಸಲು ಯೋಧರ ನಿಯೋಜನೆ? ನಿಜಾಂಶ ಇಲ್ಲಿದೆ ನೋಡಿ..

    ಸರ್ಕಾರಿ ಬ್ಯಾಂಕುಗಳಿಂದ ನಾನು ಪಡೆದ ಸಾಲ 6.2 ಸಾವಿರ ಕೋಟಿ ರೂ. ಇದಕ್ಕೆ (ಎನ್ಫೋರ್ಸ್​ಮೆಂಟ್​ ಡೈರಕ್ಟರೇಟ್) ಇ.ಡಿ. 14 ಸಾವಿರ ಕೋಟಿ ರೂ. ಬೆಳೆ ಬಾಳುವ ಆಸ್ತಿಯನ್ನು ಜಪ್ತಿ ಮಾಡಿ ಬ್ಯಾಂಕುಗಳಿಗೆ ನೀಡಿದೆ. ಇದರಲ್ಲಿ ಕೆಲವನ್ನು ಮಾರಾಟ ಮಾಡಿರುವ ಬ್ಯಾಂಕುಗಳು 9 ಸಾವಿರ ಕೋಟಿ ರೂ. ನಗದು ರೂಪದಲ್ಲಿ ರಿಕವರಿ ಮಾಡಿಕೊಂಡಿವೆ. ಉಳಿದ 5 ಸಾವಿರ ಕೋಟಿ ರೂ. ಸೆಕ್ಯೂರಿಟಿಯಾಗಿ ಇಟ್ಟುಕೊಂಡಿವೆ. ಇದೀಗ ಆ ಹಣವನ್ನು ಹಿಂದಿರುಗಿಸಬೇಕೆಂಬ ಕಾರಣಕ್ಕೆ ಬ್ಯಾಂಕುಗಳು ಕೋರ್ಟ್​ ಮೊರೆ ಹೋಗಿ ನನ್ನನ್ನು ದಿವಾಳಿ ಎಂದು ಘೋಷಣೆ ಮಾಡುವಂತೆ ಮಾಡಿವೆ ಎಂದು ಟ್ವೀಟ್ ಮಾಡಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts