More

    ಸ್ವಾತಂತ್ರ್ಯಕ್ಕೆ 75 ವರ್ಷ: ಸಂಸದರಿಗೆ 75 ಹೊಸ ಟಾಸ್ಕ್​ ಕೊಟ್ಟ ಪ್ರಧಾನಿ ಮೋದಿ

    ನವದೆಹಲಿ: ಭಾರತಕ್ಕೆ ಸ್ವಾತಂತ್ರ್ಯ ಬಂದು 2022ರಲ್ಲಿ 75 ವರ್ಷ ಪೂರ್ತಿಯಾಗಲಿದೆ. ಇನ್ನೇನು ಒಂದೇ ವರ್ಷ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸಚಿವ ಸಂಪುಟದ ಸಂಸದರಿಗೆ 75 ಟಾಸ್ಕ್​ಗಳನ್ನು ನೀಡಿದ್ದಾರೆ.

    ಇಂದು ನಡೆದಿರುವ ಸಂಸದರ ಬೈಠಕ್​ನಲ್ಲಿ ಈ ಕುರಿತು ಚರ್ಚೆ ನಡೆಸಲಾಯಿತು. ನಡೆಯಿತು. ದೇಶಕ್ಕೆ ಸ್ವತಂತ್ರ ಬಂದು 75 ವರ್ಷ ಪೂರೈಸುತ್ತಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಸದರಿಂದ ನೂತನ ಟಾಸ್ಕ್ ನೀಡಿದ್ದಾರೆ.

    ದೇಶಕ್ಕೆ ಸ್ವತಂತ್ರ ಬಂದ ಈ ಸಂದರ್ಭದಲ್ಲಿ ಮಾಡುತ್ತಿರುವ ಕಾರ್ಯಕ್ರಮ ಜನಾಂದೋಲನವಾಗಬೇಕು. 75 ವರ್ಷದ ಸಂಭ್ರಮಾಚರಣೆಯಲ್ಲಿ 75 ಗ್ರಾಮಗಳಿಗೆ ಭೇಟಿ ನೀಡಿ, ಅಲ್ಲಿ ಜನತೆಯೊಂದಿಗೆ 75 ಗಂಟೆ ಸಮಯ ಕಳೆಯಿರಿ. ಈ ಸಮಯದಲ್ಲಿ ದೇಶದ ಸಾಧನೆಗಳು ಸೇರಿದಂತೆ ಎಲ್ಲ ಮಾಹಿತಿಯನ್ನು ಹಂಚಿಕೊಳ್ಳಿ. ಆದರೆ ಇದು ಸರ್ಕಾರಿ ಕಾರ್ಯಕ್ರಮ ಆಗದಂತೆ ಎಚ್ಚರಿಕೆ ವಹಿಸಿ ಎಂದು ಪ್ರಧಾನಿ ಹೇಳಿದ್ದಾರೆ.

    ಇದರೆ ಜತೆಗೆ, 2047ಕ್ಕೆ ಭಾರತಕ್ಕೆ ಸ್ವಾತಂತ್ರ ಸಿಕ್ಕು 100 ವರ್ಷ ಆಗುತ್ತದೆ. ಆ ಸಂದರ್ಭದಲ್ಲಿ ಭಾರತ ಹೇಗೆ ಅಭಿವೃದ್ಧಿ ಹೊಂದಿರಬೇಕು ಎಂಬ ಬಗ್ಗೆ ಸಾರ್ವಜನಿಕರಿಂದ ನೇರವಾಗಿ ಮಾಹಿತಿ ಸಂಗ್ರಹಿಸಿ. ಪ್ರತಿ ವಿಧಾನಸಭಾ ಕ್ಷೇತ್ರದಿಂದ ಇಬ್ಬರ ಕಾರ್ಯಕರ್ತರ ಜೋಡಿಯನ್ನು ಸಿದ್ಧಪಡಿಸಿ. ಈ ಜೋಡಿ 75 ಗ್ರಾಮಗಳ ಪ್ರವಾಸ ಮಾಡಿ ಒಂದು ಪಟ್ಟಿಯನ್ನು ಸಿದ್ಧಪಡಿಸಿ. ಡಿಜಿಟಲ್ ಸಾಕ್ಷರತೆಯಲ್ಲಿ ಭಾರತ ಎಲ್ಲಿಯವರೆಗೂ ತಲುಪಿದೆ ಮತ್ತು ಎಲ್ಲಿಯವರೆಗೂ ತಲುಪಬಹುದು ಎಂಬ ಮಾಹಿತಿಯನ್ನು ಕಲೆ ಹಾಕಿ ಅದರ ಪಟ್ಟಿ ಮಾಡಿ. ಈ ವೇಳೆ ದೇಶಕ್ಕಾಗಿ ನಾನೇನು ಮಾಡಬಲ್ಲೆ ಅನ್ನೋ ಭಾವನೆಯನ್ನು ಜನರಲ್ಲಿ ಹುಟ್ಟು ಹಾಕಬೇಕು ಎಂದು ಪ್ರಧಾನಿ ಮೋದಿ ಸಂಸದರಿಗೆ ಹೇಳಿದ್ದಾರೆ. ಈ ಎಲ್ಲಾ ಕಾರ್ಯಕ್ರಮ ಜನಾಂದೋಲನ ಆಗಬೇಕು ಎಂದು ಅವರು ಹೇಳಿದ್ದಾರೆ.

    ಈ ಟಾಸ್ಕ್​ಗಳ ಕುರಿತು ಆಗಸ್ಟ್ 15ರ ಧ್ವಜಾರೋಹಣದ ಬಳಿಕ ಪ್ರಧಾನಿಗಳು ಬಹಿರಂಗವಾಗಿ ಘೋಷಣೆ ಮಾಡುವ ಸಾಧ್ಯತೆಗಳಿವೆ.

    ಮಗಳ ಲವರ್​ ಜತೆ ತಾಯಿಯ ಅಕ್ರಮ ಸಂಬಂಧ! ಈ ರಹಸ್ಯ ಭೇದಿಸಲು ಹೋದವನ ಬರ್ಬರ ಹತ್ಯೆ

    ಕುಂದ್ರಾರ ವಾಟ್ಸ್​ಆ್ಯಪ್​ನಲ್ಲಿ ಕಾಣಿಸಿಕೊಂಡ ನಟಿಯೀಗ ಸಂಕಷ್ಟದಲ್ಲಿ- ಅಯ್ಯೋ ಬಿಟ್​ಬಿಡಿ ಅಂತೀರೋ ಸೈನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts