More

    ಅಪ್ಪನ ಪಕ್ಷಕ್ಕೂ ನನಗೂ ಸಂಬಂಧವಿಲ್ಲ … ಕಡ್ಡಿ ತುಂಡು ಮಾಡಿದ ವಿಜಯ್

    ಚೆನ್ನೈ: ತಮ್ಮ ತಂದೆ ಎಸ್​.ಎ. ಚಂದ್ರಶೇಖರ್​ ಅವರು ಸ್ಥಾಪಿಸಿರುವ ಅಖಿಲ ಭಾರತ ವಿಜಯ್​ ಮಕ್ಕಳ್​ ಇಯಕ್ಕಂ ಎಂಬ ರಾಜಕೀಯ ಪಕ್ಷಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಮತ್ತು ತಮಗೆ ರಾಜಕೀಯಕ್ಕೆ ಬರುವ ಯೋಚನೆಯೂ ಇಲ್ಲ ಎಂದು ಕಾಲಿವುಡ್​ ನಟ ವಿಜಯ್​ ಸ್ಪಷ್ಟಪಡಿಸಿದ್ದಾರೆ.

    ಇದನ್ನೂ ಓದಿ: ಬೀಚ್​ನಲ್ಲಿ ಅಶ್ಲೀಲ ನೃತ್ಯ ಪ್ರಕರಣ: ಬಂಧನವಾದ ಕೆಲವೇ ಗಂಟೆಯಲ್ಲಿ ಹೊರಬಂದ ಪೂನಂ

    ಈ ಹಿಂದೆ ವಿಜಯ್​ ಹೆಸರಿನಲ್ಲಿ ವಿಜಯ್​ ಮಕ್ಕಳ್​ ಇಯಕ್ಕಂ ಎಂಬ ಅಭಿಮಾನಿ ಸಂಘವಿತ್ತು. ಈಗ ಅದೇ ಹೆಸರನ್ನು ವಿಜಯ್​ ಅವರ ತಂದೆ ಮತ್ತು ಖ್ಯಾತ ನಿರ್ದೇಶಕ ಎಸ್​.ಎ. ಚಂದ್ರಶೇಖರ್​ ಚುನಾವಣಾ ಆಯೋಗದಲ್ಲಿ ದಾಖಲಿಸಿದ್ದಾರೆ. ಇದರಿಂದಾಗಿ ವಿಜಯ್​ ರಾಜಕೀಯ ಪಕ್ಷ ಸ್ಥಾಪಿಸಿದ್ದು, ಸದ್ಯದಲ್ಲೇ ರಾಜಕೀಯಕ್ಕೆ ಬರುತ್ತಾರೆ ಎಂಬ ಊಹಾಪೋಹಗಳು ಕೇಳಿ ಬಂದಿವೆ.

    ಆದರೆ, ಇದನ್ನು ಸ್ಪಷ್ಟವಾಗಿ ನಿರಾಕರಿಸಿರುವ ವಿಜಯ್​, ಈ ಪಕ್ಷಕ್ಕೂ ತಮಗೂ ಸಂಬಂಧವಿಲ್ಲ ಎಂದಿರುವ ಜತೆಗೆ, ತಮ್ಮ ಹೆಸರಿದೆ ಎಂಬ ಕಾರಣಕ್ಕೆ ಆ ಪಕ್ಷಕ್ಕೆ ಸೇರಬೇಡಿ ಎಂದು ತಮ್ಮ ಅಭಿಮಾನಿಗಳಿಗೆ ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲ, ಯಾವುದೇ ಕಾರಣಕ್ಕೂ ತಮ್ಮ ಹೆಸರು ಮತ್ತು ಭಾವಚಿತ್ರವನ್ನು ಬಳಸಬಾರದು ಎಂದು ಅವರು ಹೇಳಿದ್ದಾರೆ. ಒಂದು ಪಕ್ಷ ಬಳಸಿದರೆ, ಕಾನೂನು ಹೋರಾಟ ಮಾಡುವುದಾಗಿ ಅವರು ಎಚ್ಚರಿಸಿದ್ದಾರೆ.

    ಇದನ್ನೂ ಓದಿ: ಸೌಂಡ್ ಆಫ್ ಮ್ಯೂಸಿಕ್ ಇದೆ; ಸೌಂಡ್ ಆಫ್ ರುಪಿ ಬೇಕು: ಹಂಸಲೇಖ

    ಇನ್ನು ವಿಜಯ್​ ಅವರ ತಂದೆ ಸಹ, ಈ ಪಕ್ಷಕ್ಕೂ ವಿಜಯ್​ಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಮಾಜ ಸೇವೆ ಮಾಡುತ್ತಿರುವ ಒಂದಿಷ್ಟು ಯುವಜನರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಈ ಪಕ್ಷ ಸ್ಥಾಪಿಸಿದ್ದೇ ಹೊರತು, ಬೇರೆ ಯಾವುದೇ ಕಾರಣಕ್ಕೂ ಅಲ್ಲ ಎಂದು ಅವರು ಹೇಳಿದ್ದಾರೆ.

    ಕ್ರಿಸ್​ಮಸ್​ ಅಥವಾ ಸಂಕ್ರಾಂತಿಗೆ ‘ಪೊಗರು’ ಅಬ್ಬರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts