ಕಾಂಗ್ರೆಸ್ ಮುಕ್ತ ಭಾರತಕ್ಕೆ ವಿಹಿಂಪ ಶಪಥ

Hanuman Chalisa in Rattihalli

ರಟ್ಟಿಹಳ್ಳಿ: ಹಲವು ವರ್ಷಗಳಿಂದ ಹಿಂದು ಧರ್ಮದ ರಕ್ಷಣೆ, ಸಂಘಟನೆ, ಸೇವಾ ಸುರಕ್ಷ ಸಂಸ್ಕಾರ, ರಾಷ್ಟ್ರ ರಕ್ಷಣೆಗಾಗಿ ವಿಶ್ವ ಹಿಂದು ಪರಿಷತ್ ಬಜರಂಗದಳ ಸೇವೆ ಸಲ್ಲಿಸುತ್ತಿದೆ. ಆದರೆ, ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗದಳ ಬ್ಯಾನ್ ಮಾಡಲಾಗುವುದು ಎಂದು ತಿಳಿಸಿದೆ.

ಹೀಗಾಗಿ ಕಾಂಗ್ರೆಸ್​ವುುಕ್ತ ಭಾರತಕ್ಕೆ ನಮ್ಮ ಸಂಘಟನೆ ವತಿಯಿಂದ ಶಪಥ ಮಾಡಲಾಗಿದೆ ಎಂದು ಸಂಘಟನೆ ಕಾರ್ಯದರ್ಶಿ ಮೃತ್ಯುಂಜಯ ಬೆಣ್ಣಿ ಹೇಳಿದರು.

ವಿಶ್ವ ಹಿಂದು ಪರಿಷತ್, ಬಜರಂಗದಳ ವತಿಯಿಂದ ಪಟ್ಟಣದ ಕೋಟೆ ಓಣಿಯಲ್ಲಿನ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಆಯೋಜಿಸಿದ್ದ ಹನುಮಾನ್ ಚಾಲೀಸಾ ಪಠಣ ಮಾಡಿ ಅವರು ಮಾತನಾಡಿದರು.

ವಿಶ್ವಹಿಂದು ಪರಿಷತ್ ಮೂಲಕ ಪ್ರಾರಂಭವಾದ ಈ ಸಂಘಟನೆಯು ಕ್ರಮೇಣ ವಿಶ್ವ ಹಿಂದು ಪರಿಷತ್, ಬಜರಂಗದಳವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಸಂಘಟನೆಯ ಮುಖ್ಯ ಉದ್ದೇಶ ಸೇವಾ ಸುರಕ್ಷ ಸಂಸ್ಕಾರ ಹಿಂದು ಧರ್ಮದ ರಕ್ಷಣೆಯಾಗಿದೆ.

ಯಾವುದೇ ಸಂಘರ್ಷ ಅಥವಾ ಶಾಂತಿಯನ್ನು ಕದಡುವುದು ಉದ್ದೇಶವಲ್ಲ, ಮುಂಬರುವ ಚುನಾವಣೆಯಲ್ಲಿ ನಮ್ಮ ಸಂಘಟನೆ ವತಿಯಿಂದ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದರು.

ಆಕಾಶಗೌಡ ಪಾಟೀಲ, ನವೀನ ಮಾದರ, ನವೀನ ಪಾಟೀಲ, ಬಸವರಾಜ ಆಡಿನವರ, ಗಣೇಶ ವೆರ್ಣೆಕರ, ಉಜಿನೆಪ್ಪ ಕೋಡಿಹಳ್ಳಿ, ದೀಪಾ ಹುರಕಡ್ಲಿ, ಸರೋಜಾ ಹುರಕಡ್ಲಿ, ದೀಪಾ ಬೆಣ್ಣಿ, ಮಾಲಾ ಬೆಣ್ಣಿ ಇತರರಿದ್ದರು.

Share This Article

ಈ ನಾಲ್ವರೊಂದಿಗೆ ನೀವು ಎಂದಿಗೂ ಜಗಳವಾಡಬೇಡಿ; ಅದರಿಂದ ನಿಮಗೆ ಹಾನಿ | Chanakya Niti

ಆಚಾರ್ಯ ಚಾಣಕ್ಯ ತನ್ನ ಒಂದು ನೀತಿಯ ಮೂಲಕ ಮಾನವನಿಗೆ ತನ್ನ ಜೀವನವನ್ನು ನಡೆಸುವ ಮಾರ್ಗವನ್ನು ಹೇಳಿದ್ದಾರೆ.…

ಬೊಜ್ಜು ಕರಗಿಸಿ ಫಿಟ್​ ಆಗಿರಲು ಈ ತರಕಾರಿಗಳೇ ಸಾಕು; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಇಂದಿನ ಕಾರ್ಯನಿರತ ಜೀವನದಲ್ಲಿ ತೂಕ ಹೆಚ್ಚಾಗುವುದು ತುಂಬಾ ಸಾಮಾನ್ಯ ಸಮಸ್ಯೆಯಾಗಿದೆ. ಅನೇಕರು ಹೆಚ್ಚಿದ ತೂಕದ ಬಗ್ಗೆ…

ಡಯಟ್ ಸೋಡಾ ಕುಡಿಯಲು ಇಷ್ಟಪಡುತ್ತೀರಾ?; ಹಾಗಾದ್ರೆ ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದು.. | Health Tips

ನಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವ ಜನರು ಸಾಮಾನ್ಯ ಸೋಡಾಕ್ಕಿಂತ ಡಯಟ್ ಸೋಡಾ ಕುಡಿಯಲು…