More

    ದಾಖಲೆ ವೀಕ್ಷಣೆ ಕಂಡ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್

    ನವದೆಹಲಿ: ಹದಿನಾರನೇ ಆವೃತ್ತಿಯ ಐಪಿಎಲ್ ಪಂದ್ಯಗಳ ನೇರಪ್ರಸಾರ ಮೂಲಕ ಹೊಸ ದಾಖಲೆ ರಚಿಸಿದ ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಮತ್ತೊಂದು ದಾಖಲೆ ಬರೆದಿದೆ. ಜೂನ್ 7ರಿಂದ 11ರವರೆಗೆ ಇಂಗ್ಲೆಂಡ್‌ನ ಓವಲ್ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲುೃಟಿಸಿ) ಫೈನಲ್ ಪಂದ್ಯ ಅತಿಹೆಚ್ಚು ಜನರು ವೀಕ್ಷಿಸಿದ ಟೆಸ್ಟ್ ಪಂದ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಐಸಿಸಿ ಟೂರ್ನಿಗಳ ನೇರಪ್ರಸಾರ ಹಕ್ಕು ಪಡೆದುಕೊಂಡಿರುವ ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಅಂಕಿ-ಅಂಶ ಬಿಡುಗಡೆ ಮಾಡಿದ್ದು, ಬಾರ್ಕ್ (ಬಿಎಆರ್‌ಸಿ) ಮಾಹಿತಿ ಪ್ರಕಾರ ಇಂಡೋ-ಆಸೀಸ್ ಫೈನಲ್ ಪಂದ್ಯವನ್ನು 12.4 ಕೋಟಿ ಜನರು ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ವೀಕ್ಷಿಸಿದ್ದಾರೆ. ಇದು ಮೂರು ಮಾದರಿಯ ಕ್ರಿಕೆಟ್‌ಗಳಲ್ಲಿ ಅತಿಹೆಚ್ಚು ಜನರು ವೀಕ್ಷಿಸಲ್ಪಟ್ಟ ಪಂದ್ಯ ಎನಿಸಿದೆ. ಜತೆಗೆ 2021ರ ನ್ಯೂಜಿಲೆಂಡ್-ಭಾರತ ನಡುವಿನ ಮೊದಲ ಡಬ್ಲುೃಟಿಸಿ ಫೈನಲ್ ಪಂದ್ಯಕ್ಕಿಂತ ಶೇ. 21 ಹೆಚ್ಚಿನ ವೀಕ್ಷಣೆ ಕಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts