More

    ಚಂದ್ರಯಾನ 3 ಯಶಸ್ವಿ ವಿ.ದಾ.ಸ. ಕ್ಲಾಸಿಕ್ ಶಾಲೆಯ ವಿದ್ಯಾರ್ಥಿಗಳು ವಿಜಯೋತ್ಸವ.

    ಗದಗ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿ ಕ್ಲಾಸಿಕ್ ಪ್ರಾಥಮಿಕ ಶಾಲೆಯಲ್ಲಿ ಚಂದ್ರಯಾನ-3 ವಿಜಯದ ಮೈಲುಗಲ್ಲಿನ ಯಶಸ್ವಿಗೆ ವಿದ್ಯಾರ್ಥಿಗಳು ವಿಜಯೋತ್ಸವವನ್ನು ಆಚರಿಸಿದರು. ಇದು ಭಾರತದ ಐತಿಹಾಸಿಕ ಚಂದ್ರಯಾನ ದಿನವಾಗಿದೆ, ಭಾರತದ ಮೂರನೇ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವವನ್ನು ದೋಷರಹಿತವಾಗಿ 41 ದಿನಗಳ ಪ್ರಯಾಣದ ನಂತರ ಬುಧವಾರ ಸಂಜೆ 6.04 ನಿಮಿಷಕ್ಕೆ ಯಶಸ್ವಿಯಾಗಿ ಚಂದ್ರವನ್ನು ಸ್ಪರ್ಶಿಸಿದ ಹಿನ್ನೆಲೆಯಲ್ಲಿ ವಿದ್ಯಾದಾನ ಸಮಿತಿಯ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ಹುಯಿಲಗೋಳ, ಪ್ರಾಚಾರ್ಯರಾದ ಡಾ. ಗಂಗೂಬಾಯಿ ಪವಾರ, ಆಡಳಿತ ಮಂಡಳಿಯ ಸದಸ್ಯರಾದ ಡಾ. ಪವನ ಹುಯಿಲಗೋಳ, ಶ್ರೀ ಪ್ರತೀಕ ಹುಯಿಲಗೋಳ, ಮುಖ್ಯೋಪಾಧ್ಯಯರಾದ ಶ್ರೀ ಎಂ. ಆರ್. ಡೊಳ್ಳಿನ, ಶ್ರೀ ವಾದಿರಾಜ ಕಾತೋಟೆ ರವರು, ಶಾಲೆಯ ಸಮಸ್ತ ಶಿಕ್ಷಕ/ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಇಸ್ರೋದ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

    ಕಾರ್ಯದರ್ಶಿಗಳಾದ ಶ್ರೀನಿವಾಸ ಹುಯಿಲಗೋಳ ರವರು ಅಭಿನಂದನೆ ಸಲ್ಲಿಸಿ, ಭಾರತೀಯ ಬಾಹ್ಯಾಕಾಶ ಸಂಸ್ಥೆ ಅಥವಾ ಇಸ್ರೋದ ಮಹತ್ವಕಾಂಕ್ಷಿ ಯೋಜನೆಯಾದ ಚಂದ್ರಯಾನ-3  ಯಶಸ್ವಿಯಾಗಿದ್ದು, ಭಾರತ ಹೊಸ ದಾಖಲೆಯೊಂದನ್ನು ಬರೆದಿದೆ. ಅಗಸ್ಟ್ 23 ರಂದು ಸಂಜೆ  ಚಂದಿರನ ಅಂಗಳಕ್ಕೆ ವಿಕ್ರಂ ಲ್ಯಾಂಡರ್ ಇಳಿದಿದ್ದು, ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶವೆಂಬ ಹೆಗ್ಗಳಿಕೆ ಭಾರತದ ಪಾಲಾಗಿದೆ. ಚಂದ್ರಯಾನ-3 ಯಶಸ್ವಿಗೆ ಶ್ರಮಿಸಿದ ಇಸ್ರೋದ ಎಲ್ಲಾ ವಿಜ್ಞಾನಿಗಳಿಗೆ ಶತಕೋಟಿ ನಮನಗಳು ಅಷ್ಟೇ ಅಲ್ಲದೆ ಉತ್ತರ ಕರ್ನಾಟಕ ಭಾಗದ ಶತಮಾನೋತ್ಸವ ಆಚರಿಸಿಕೊಂಡಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ನಮ್ಮ ವಿದ್ಯಾದಾನ ಸಮಿತಿಯ ಹೆಮ್ಮೆಯ ಹಳೆ ವಿದ್ಯಾರ್ಥಿಗಳಾದ ಹಾಗೂ ನನ್ನ ಸಹಪಾಠಿಗಳಾದ ಶ್ರೀ ಸುಧೀಂದ್ರ ವಿ. ಬಿಂದಗಿ ಹಾಗೂ ಶ್ರೀ ಶ್ರೀನಿವಾಸ ವಿ. ಹುಯಿಲಗೋಳ ರವರು ಚಂದ್ರಯಾನ-3 ಯಶಸ್ವಿಗೆ ವಿಶೇಷ ಶ್ರಮವಹಿಸಿದ್ದಾರೆ, ಇವರ ಪರಿಶ್ರಮದ ಫಲವಾಗಿ ನಮ್ಮ ಜಿಲ್ಲೆಯ ಹಾಗೂ ನಮ್ಮ ಸಂಸ್ಥೆಯ ಕೀರ್ತಿ ಹೆಚ್ಚಿಸಿದೆ ಎಂದು ಇಸ್ರೋದ ವಿಜ್ಞಾನಿಗಳಿಗೆ ಅಭಿನಂದನೆ  ಸಲ್ಲಿಸಿ ತಮ್ಮ ಅಭಿನಂದನಾ ನುಡಿಗಳನ್ನು ವ್ಯಕ್ತಪಡಿಸಿದರು.

    ವೇದಿಕೆಯ ಮೇಲೆ ಉಪಸ್ಥಿತರಿದ್ದ ಶಾಲೆಯ ಆಡಳಿತಾಧಿಕಾರಿಗಳಾದ ಡಾ. ಗಂಗೂಬಾಯಿ ಪವಾರ ಬಹು ನಿರೀಕ್ಷೆಯ ಚಂದ್ರಯಾನ-3 ಮಿಷನ್  ಯಶಸ್ವಿಯಾಗಿದೆ,  ಇದರೊಂದಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಹೊಸ ಇತಿಹಾಸ ರಚಿಸಿದೆ. ಈ ಸಾಧನೆ ಹಿಂದೆ ಅನೇಕ ವಿಜ್ಞಾನಿಗಳು, ಇಂಜಿನಿಯರ್ಸ್ ಹಾಗೂ ತಂತ್ರಜ್ಞರು ಕೆಲಸ ಮಾಡಿದ್ದಾರೆ, ಆ ಪೈಕಿ ಗದಗಿನ ಹಿರಿಯ ಬಾಹ್ಯಾಕಾಶ ವಿಜ್ಞಾನಿ ಸುಧೀಂದ್ರ ವಿ. ಬಿಂದಗಿ ಕೂಡ ಪ್ರಮುಖರು, ಕಳೆದ ತಿಂಗಳು 2023 ರ ಜುಲೈ 30 ರಂದು ಸುಧೀಂದ್ರ ಬಿಂದಗಿ ಅವರು ಇಸ್ರೋ ಸೇವೆಯಿಂದ ನಿವೃತ್ತರಾಗಿದ್ದಾರೆ, 1986 ರಿಂದ ಪ್ರತಿಷ್ಠಿತ ಇಸ್ರೋ ಸಂಸ್ಥೆಯ ಉಪಗ್ರಹ ಕೇಂದ್ರದಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಭಾರತದ ಬಾಹ್ಯಾಕಾಶ ಹಾಗೂ ತಂತ್ರಜ್ಞಾನ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ, ಇವರು ವಿದ್ಯಾದಾನ ಸಮಿತಿಯ ಹೆಮ್ಮೆಯ ಹಳೆಯ ವಿದ್ಯಾರ್ಥಿ ಎಂಬದು ಸಂತಸದ ಸಂಗತಿಯಾಗಿದೆ ಎಂದು ವಿದ್ಯಾರ್ಥಿಗಳಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

    ನಂತರ ಇಸ್ರೋದ ಹಿರಿಯ ವಿಜ್ಞಾನಿ ವಿದ್ಯಾದಾನ ಸಮಿತಿಯ ಹಳೇ ವಿದ್ಯಾರ್ಥಿಯಾದ ಶ್ರೀ ಸುಧೀಂದ್ರ ಬಿಂದಗಿ ರವರು ವಿಡಿಯೋ ಕಾನ್ಫರೆನ್ಸ್  ಕರೆಯ ಮುಖಾಂತರ ನೇರವಾಗಿ ವಿದ್ಯಾರ್ಥಿಗಳ ಹಾಗೂ ಶಿಕ್ಷಕರೊಂದಿಗೆ ಚಂದ್ರಯಾನ-3 ಯಶಸ್ವಿನಿ ಹಾದಿ ಹಾಗೂ ಮುಂದಿನ ಐತಿಹಾಸಿಕ ಹೆಜ್ಜೆಯ ಕುರಿತು ಸಮಗ್ರವಾಗಿ ಸಂವಾದ ನಡೆಸಿದರು, ನಂತರ ಅವರು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಸೂಕ್ತ ಮಾಹಿತಿಯೊಂದಿಗೆ ಉತ್ತರವನ್ನು ನೀಡಿ ಜ್ಞಾನದ ಭಂಡಾರವನ್ನು ಉಣಬಡಿಸಿದರು. ಶ್ರೀ ಸುಧೀಂದ್ರ ಬಿಂದಿಗೆ ಅವರು ನಾನು ಕೂಡ ವಿದ್ಯಾದಾನ ಸಮಿತಿಯ ಹಳೆ ವಿದ್ಯಾರ್ಥಿ, ಈ ನನ್ನ ಎಲ್ಲಾ ಪ್ರಯತ್ನಕ್ಕೆ ವಿದ್ಯಾದಾನ ಸಮಿತಿ ಶಾಲೆ, ಅಲ್ಲಿನ ಪರಿಸರ ಹಾಗೂ ಅಲ್ಲಿನ ಶಿಕ್ಷಕರು ನೀಡಿದ ಜ್ಞಾನದ ದೀವಿಗೆಯಿಂದ ನನ್ನ ಈ  ಮಟ್ಟಕ್ಕೆ ಕರೆತಂದಿದೆ ಎಂದು ಸಂತಸದಿಂದ  ತಮ್ಮ ವಿದ್ಯಾರ್ಥಿ ಜೀವನ ಕುರಿತು ವಿವರಣೆ ನೀಡಿದರು.

    ವಿದ್ಯಾದಾನ ಸಮಿತಿಯ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ  ಹುಯಿಲಗೋಳ, ಡಾ. ಗಂಗೂಬಾಯಿ ಪವಾರ, ಡಾ. ಪವನ ಎಸ್. ಹುಯಿಲಗೋಳ, ಪ್ರತೀಕ ಎಸ್. ಹುಯಿಲಗೋಳ, ಮುಖ್ಯೋಪಾಧ್ಯಾಯರಾದ ಶ್ರೀ ಎಮ್. ಆರ್. ಡೊಳ್ಳಿನ, ಶ್ರೀ ವಾದಿರಾಜ ಕಾತೋಟೆ ರವರು ಚಂದ್ರಯಾನ-3 ಯಶಸ್ವಿ ಅಂಗವಾಗಿ ಎಲ್ಲ ವಿದ್ಯಾರ್ಥಿಗಳಿಗೆ, ಸಮಸ್ತ ಸಿಬ್ಬಂದಿ ವರ್ಗದವರಿಗೆ ಸಿಹಿ ಹಂಚಿದರು. ವಿದ್ಯಾರ್ಥಿಗಳು ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts