More

    ವಿಧಾನಪರಿಷತ್​ಗೆ ಹೊಸ ಚೇರ್ಮನ್ ಬಸವರಾಜ ಹೊರಟ್ಟಿ! ಕಾಂಗ್ರೆಸ್​ ಫುಲ್​ ಸೈಲೆಂಟ್​

    ಬೆಂಗಳೂರು: ವಿಧಾನಪರಿಷತ್‌ನ ಸಭಾಪತಿಯಾಗಿ ನಿರೀಕ್ಷೆಯಂತೆ ಜಾತ್ಯತೀತ ಜನತಾದಳದ ನಾಯಕ ಬಸವರಾಜ ಹೊರಟ್ಟಿ ಆಯ್ಕೆಯಾಗಿದ್ದಾರೆ.

    ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್​ನಿಂದ ನಾಮಪತ್ರ ಸಲ್ಲಿಸಿದ್ದರು. ಆದರೆ ಮಂಗಳವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್​ ತನ್ನ ಅಭ್ಯರ್ಥಿ ಪರವಾಗಿ ಪ್ರಸ್ತಾಪ ಮತ್ತು ಅನುಮೋದನೆ ಸಲ್ಲಿಸಲಿಲ್ಲ. ಹಾಗಾಗಿ ಬಸವರಾಜ ಹೊರಟ್ಟಿ ಅವರ ಆಯ್ಕೆಯ ಹಾದಿ ಸುಗಮವಾಯಿತು. ಹೊರಟ್ಟಿ ಆಯ್ಕೆಯನ್ನು ಉಪ ಸಭಾಪತಿ ಪ್ರಾಣೇಶ್ ಘೋಷಿಸಿದರು. ಇದನ್ನೂ ಓದಿರಿ ತಾಲೂಕು ಪಂಚಾಯಿತಿಯನ್ನೇ ರದ್ದು ಮಾಡಲು ಸಿದ್ಧತೆ! ಕರ್ನಾಟಕದಲ್ಲಿ ಜಿಪಂ, ಗ್ರಾಪಂ ಮಾತ್ರ ಇರುತ್ತೆ…

    ಪರಿಷತ್​ನ ಪ್ರೆಸ್ ಗ್ಯಾಲರಿಯಲ್ಲಿ ಕಳಿತ ಹೊರಟ್ಟಿ ಕುಟುಂಬಸ್ಥರು ಸಭಾಪತಿ ಚುನಾವಣೆ ಪ್ರಕ್ರಿಯೆಯನ್ನ ವೀಕ್ಷಿಸಿದರು. ಬಸವರಾಜ ಹೊರಟ್ಟಿ ಅವರ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಮೊಮ್ಮಕ್ಕಳು, ಸಂಬಂಧಿಕರು ಉಪಸ್ಥಿತರಿದ್ದರು.

    ಇದೇ ವೇಳೆ ಹೊರಟ್ಟಿ ಜತೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಹೋರಾಟ ಎಂಬುದು ಹೊರಟ್ಟಿ ಹೆಸರಿನಲ್ಲೇ ಇದೆ. ನೇರ-ನಿಷ್ಠುರ ವ್ಯಕ್ತಿತ್ವ ನಿಮ್ಮದು. ಪಕ್ಷಾತೀತವಾಗಿ ಸಾಕಷ್ಟು ಹೋರಾಟ ಮಾಡಿದ್ದೀರಿ. 7 ಬಾರಿ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗುವುದು ಸುಲಭವಲ್ಲ. ಶಿಕ್ಷಣ ಹಾಗೂ ಶಿಕ್ಷಕರ ವಿಷಯದಲ್ಲಿ ಸಾಕಷ್ಟು ಕಾರ್ಯ ಮಾಡಿದ್ದೀರಿ. ಮುಂದೆಯೂ ಮುಂದುವರಿಯಲಿ ಎಂದು ಆಶಿಸಿದರು.

    ವಿಧಾನಪರಿಷತ್ತಿನಲ್ಲಿ ಬಿಜೆಪಿಯ 31 ಸದಸ್ಯ ಬಲ ಹೊಂದಿದ್ದು, ಕಾಂಗ್ರೆಸ್ 28 ಮತ್ತು ಜೆಡಿಎಸ್ 13 ಸದಸ್ಯರನ್ನು ಹೊಂದಿವೆ. ಕಳೆದ ತಿಂಗಳು ವಿಧಾನಪರಿಷತ್ ಅಧಿವೇಶನದಲ್ಲಿ ಪ್ರತಾಪಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದ ಬಿಜೆಪಿ, ಜೆಡಿಎಸ್‌ ಜತೆ ಕೈಜೋಡಿಸಿತ್ತು. ಆ ವೇಳೆ ಸದನದಲ್ಲಿ ಭಾರಿ ಗಲಾಟೆಯೂ ನಡೆದಿತ್ತು. ಆಗ ಜೆಡಿಎಸ್‌ನ ಎಸ್.ಎಲ್. ಧರ್ಮೇಗೌಡ ಅವರನ್ನು ಸಭಾಪತಿಯನ್ನಾಗಿಸುವ ಪ್ರಯತ್ನವೂ ನಡೆದಿತ್ತು. ನಂತರದ ಅನಿರೀಕ್ಷಿತ ಬೆಳವಣಿಗೆಯಲ್ಲಿ ಧರ್ಮೇಗೌಡ ಆತ್ಮಹತ್ಯೆ ಮಾಡಿಕೊಂಡರು.

    ಜ.29ರಂದು ನಡೆದ ಚುನಾವಣೆಯಲ್ಲಿ ವಿಧಾನಪರಿಷತ್‌ ಉಪಸಭಾಪತಿಯಾಗಿ ಬಿಜೆಪಿಯ ಎಂ.ಕೆ.ಪ್ರಾಣೇಶ್​ ಆಯ್ಕೆಯಾಗಿದ್ದರು. ಇದೀಗ ಸಭಾಪತಿ ಸ್ಥಾನ ಪಡೆಯುವಲ್ಲಿ ಜೆಡಿಎಸ್ ಯಶಸ್ವಿಯಾಗಿವೆ.

    ವೇಶ್ಯೆ ಸೋಗಲ್ಲಿ ಯುವಕರ ಕೋಣೆಗೆ ಆಂಟಿ ಎಂಟ್ರಿ! ಸಲ್ಲಾಪದ ವೇಳೆ ವರಸೆ ಬದಲು, ಬೆಸ್ತುಬಿದ್ದವ ಮಾಡಿದ್ದೇನು?

    ವಿದ್ಯಾರ್ಥಿನಿ ಜತೆ ಲೆಕ್ಚರರ್​ ಮಗನ ಕಾಮಪುರಾಣ! 3 ವರ್ಷದಿಂದ ಲವ್​-ಸೆಕ್ಸ್​-ಅಬಾರ್ಷನ್​​: ಮುಂದೇನಾಯ್ತು?

    ತಹಸೀಲ್ದಾರ್​ ಕಚೇರಿ ಬಳಿ ಹಾವಿನ ಜತೆ ಆಟವಾಡುತ್ತಿದ್ದ ವೃದ್ಧ ಕ್ಷಣಾರ್ಧದಲ್ಲೇ ಪ್ರಾಣಬಿಟ್ಟ!

    ಅಡಕೆ ರೂಪದಲ್ಲಿ ಮನೆಗೆ ಬಂದ ಜವರಾಯ 1 ವರ್ಷದ ಮಗುವಿನ ಪ್ರಾಣ ಹೊತ್ತೊಯ್ದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts