More

    ವಿಧಾನಸೌಧ ಕಾಂಗ್ರೆಸ್ ಕಚೇರಿಯಲ್ಲ: ಬಿಜೆಪಿ ಆಕ್ಷೇಪ

    ಬೆಂಗಳೂರು: ಲೋಕಸಭೆ ಚುನಾವಣೆಯ ಮಾದರಿ ನೀತಿ‌ ಸಂಹಿತೆ ಜಾರಿಯಲ್ಲಿರುವಾಗ ವಿಧಾನಸೌಧ ಆವರಣದಲ್ಲಿ‌ ಕಾಂಗ್ರೆಸ್ ಸಚಿವ, ಶಾಸಕರು ಹೋರಾಟ ನಡೆಸಿದ್ದು, ಪಕ್ಷದ‌ ಚಟುವಟಿಕೆಗಳಿಗೆ ಪದೇ ಪದೆ ಬಳಸಿಕೊಳ್ಳುತ್ತಿದೆ. ವಿಧಾನ ಸೌಧ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲವೆಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪಿ.ರಾಜೀವ್ ಆಕ್ಷೇಪಿಸಿದರು.

    ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಂಗಳವಾರ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅತ್ಯಂತ ಅಸಹಾಯಕ, ಮೈಪರಚಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ. ರಾಜ್ಯ ಸರ್ಕಾರ ತನ್ನ ಅಸಮರ್ಥತೆ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದೆ ಎಂದು ಕಿಡಿಕಾರಿದರು.

    ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಸಿದರು. ಸಚಿವ ಕೃಷ್ಣಬೈರೇಗೌಡ ರಾಜಕೀಯ ಹೇಳಿಕೆ ನೀಡಲು ತಮ್ಮ ಕಚೇರಿ ಕೊಠಡಿ ಬಳಸಿಕೊಂಡರು. ಈ ಬಗ್ಗೆ ಮುಖ್ಯ ಕಾರ್ಯದರ್ಶಿಗೆ ಪಕ್ಷ ಎರಡು ಬಾರಿ ಪತ್ರ ಬರೆದಿದ್ದರೂ ಕ್ರಮವಹಿಸಿಲ್ಲ. ಇದೀಗ ಕಾಂಗ್ರೆಸ್ ಹೋರಾಟಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಚುನಾವಣಾ‌‌ ಆಯೋಗಕ್ಕೆ ಕಣ್ಣು, ಕಿವಿ, ಮೂಗು ಇದ್ದರೆ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕೆ ಕ್ರಮಕೈಗೊಳ್ಳಬೇಕು ಎಂದು ಪಿ.ರಾಜೀವ್ ಆಗ್ರಹಿಸಿದರು.

    ರಾಜೀನಾಮೆ ನೀಡಲಿ

    ಯಾದಗಿರಿ ಜಿಲ್ಲೆಯಲ್ಲಿ ದಲಿತ ಮನೆಗೆ ಅನ್ಯ ಕೋಮಿನವರು ನುಗ್ಗಿ, ದಲಿತ ಯುವಕನನ್ನು ಕೊಲೆ ಮಾಡಿದ್ದಾರೆ. ಈ ಘಟನೆ ಸಂಭವಿಸಿ 16 ಗಂಟೆಗಳ ಬಳಿಕ ಎಫ್ ಐಆರ್ ದಾಖಲಾಗಿದೆ. ದಲಿತ ಪೋಷಕರು ಅಂಗಾಲಾಚಿ, ಪಕ್ಷದ ಮಾಜಿ ಶಾಸಕರ ನೇತೃತ್ವದಲ್ಲಿ ಹೋರಾಟ ನಡೆದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಇಲ್ಲವಾದರೆ ದಲಿತ ಯುವಕನ ಹತ್ಯೆಯನ್ನು ಮುಚ್ಚಿಹಾಕಲಾಗುತ್ತಿತ್ತು. ದಲಿತ ಸಮುದಾಯದಿಂದ ಬಂದವರು ಎಂದು ಹೇಳಿಕೊಳ್ಳುತ್ತಿರುವ ಗೃಹ ಮಂತ್ರಿ ಡಾ.ಜಿ.ಪರಮೇಶ್ವರ್ ರಾಜೀನಾಮೆ ನೀಡಬೇಕು. ಸಚಿವ ಸ್ಥಾನದಲ್ಲಿ ಮುಂದುವರಿಯುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ದಲಿತರಿಗೆ ರಕ್ಷಣೆಯಿಲ್ಲ, ಹತ್ಯೆ ಪ್ರಕರಣ ದಾಖಲಿಸಲು ಹಿಂಜರಿದ ಕಾಂಗ್ರೆಸ್ ಧೋರಣೆ ಬಗ್ಗೆ ದಲಿತ ಸಮುದಾಯ, ಸಂಘಟನೆಗಳು ಅರಿತುಕೊಳ್ಳಬೇಕು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಪಾಠ ಕಲಿಸಬೇಕು ಎಂದು ಪಿ.ರಾಜೀವ್ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts