More

    VIDEO| ಸಾಗರದಾಳದಲ್ಲಿ ಪತ್ತೆಯಾದ ಪ್ರಮುಖ 10 ನಿಗೂಢ ಪ್ರಾಣಿಗಳಿವು…!

    ನವದೆಹಲಿ: ಸಾಗರಲೋಕ ಇಂದಿಗೂ ಮಾನವನಿಂದ ಹೆಚ್ಚು ಸಂಶೋಧಿಸಲ್ಪಡುವ ಸ್ಥಳ. ಅಮೆರಿಕದ ರಾಷ್ಟ್ರೀಯ ಸಾಗರ ಸೇವಾ ಸಂಸ್ಥೆಯ ಪ್ರಕಾರ ಸಮುದ್ರದ ಶೇ.80 ರಷ್ಟು ಕ್ಷೇತ್ರವನ್ನು ಈವರೆಗೂ ಗುರುತಿಸಲು, ವೀಕ್ಷಿಸಲು ಮತ್ತು ಸಂಶೋಧಿಸಲು ಸಾಧ್ಯವಾಗಿಲ್ಲ.

    ಸದ್ಯ ಸಾಗರದಾಳದಲ್ಲಿ ಮಾನವ ಸಂಶೋಧನೆ ನಡೆಸಿರುವುದರಲ್ಲಿ ಕೆಲ ಚಿತ್ರ ವಿಚಿತ್ರ ಪ್ರಾಣಿಗಳನ್ನು ಕಂಡುಕೊಂಡಿದ್ದೇವೆ. ಉದಾಹರಣೆಗೆ ವಾಚ್​ ಮೋಜೋ (Watch Mojo) ಹೆಸರಿನ ಯೂಟ್ಯೂಬ್​ ಚಾನಲ್​​ನಲ್ಲಿ ಅಪ್​ಲೋಡ್​ ಮಾಡಿರುವ ಒಂದು ವಿಡಿಯೋದಲ್ಲಿ ಸಾಗರದ ಆಳದಲ್ಲಿರುವ ಪ್ರಮುಖ 10 ನಿಗೂಢ ಜೀವಿಗಳನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಅಮೆರಿಕ ಜನಾಂಗೀಯ ಪ್ರತಿಭಟನೆ ವೇಳೆ ಪ್ರೇಮಿಗಳ ಸರಸ?: ವೈರಲ್​ ಫೋಟೋ ಹಿಂದಿನ ಸತ್ಯಾಂಶವೇ ಬೇರೆ!

    ನಿಗೂಢ ಜೀವಿಗಳಲ್ಲಿ ಆ್ಯಂಗ್ಲರ್​ಫಿಶ್​ ಮೊದಲನೇ ಸ್ಥಾನದಲ್ಲಿದೆ. ಈ ಮಾರಣಾಂತಿಕ ಪರಭಕ್ಷಕವು ತಲೆಯಿಂದ ನೇತಾಡುವ ಮತ್ತು ಇತರ ಮೀನುಗಳಿಗೆ ಆಮಿಷವೊಡ್ಡುವ ತಿರುಳಿರುವ ಬೆಳವಣಿಗೆಗೆ ಹೆಸರುವಾಸಿಯಾಗಿದೆ. ವಿಡಿಯೋದಲ್ಲಿ ಅತ್ಯಂತ ಹಳೆಯ ಶಾರ್ಕ್​ ಜಾತಿಯ ಪ್ರಾಣಿಯನ್ನು ಕಾಣಬಹುದಾಗಿದೆ. ಇದರೊಂದಿಗೆ ಚುಕಲ್​, ಬ್ಲೊಬ್​ಫಿಶ್​ ಸೇರಿದಂತೆ ಇನ್ನು ಅನೇಕ ಜೀವಿಗಳನ್ನು ಸಂಶೋಧಕರು ವಿಡಿಯೋದಲ್ಲಿ ಸೆರೆಹಿಡಿದಿದ್ದಾರೆ. (ಏಜೆನ್ಸೀಸ್​) ಇದನ್ನೂ ಓದಿ: ಕಾಲೇಜುಗಳ ಪುನರಾರಂಭ ಯಾವಾಗ?: ವಿದ್ಯಾರ್ಥಿಗಳ ಗೊಂದಲಕ್ಕೆ ಸಲಹಾ ಸಮಿತಿ ಅಧ್ಯಕ್ಷರ ಪರಿಹಾರ

    ಆನ್​ಲೈನ್​ನಲ್ಲಿ ಕ್ಲಾಸ್​ ನಡೆಸುವುದಾದ್ರೆ ಮಧ್ಯಾಹ್ನದ ಊಟ ಜೊಮ್ಯಾಟೋದಿಂದ ಬರುತ್ತಾ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts