More

    VIDEO| ದೇಹ-ಮನಸ್ಸಿನ ನಿಯಂತ್ರಣಕ್ಕೆ ಋಷಿಗಳು ಬಳಸಿದ ಆಸನವಿದು!

    ‘ಕಂದಾಸನ’ವು ಅತ್ಯಂತ ಕಷ್ಟಕರವಾದಂತಹ ಭಂಗಿ. ದೇಹ ಮತ್ತು ಮನಸ್ಸಿನ ನಿಯಂತ್ರಣಕ್ಕೆ ಋಷಿ ಮುನಿಗಳು ಈ ಆಸನವನ್ನು ಅಭ್ಯಾಸ ಮಾಡಿಕೊಂಡಿದ್ದರು. ಇಲ್ಲಿ ‘ಕಂದ’ ಎಂದರೆ ಬೇರು, ಗಡ್ಡೆ ಯಾ ಗಂಟು ಎಂದು ಅರ್ಥವಿದೆ. ಆದರೆ ಹಠಯೋಗ ಪ್ರದೀಪಿಕೆಯಲ್ಲಿ ಕಂದದ ಬಗ್ಗೆ ಕುಂಡಲಿನೀ ಶಕ್ತಿಯ ಜಾಗೃತಿ ಎಂದು ತಿಳಿಸಲಾಗಿದೆ.

    ಇದೊಂದು ವಿಶಿಷ್ಟ ಕ್ಲಿಷ್ಟ ಭಂಗಿಯಾಗಿದ್ದು, ಸರಳ ಆಸನಗಳನ್ನು ಅಭ್ಯಾಸ ಮಾಡಿದ ಮೇಲೆ ಇದನ್ನು ಕಲಿಯಬೇಕು. ಬಹಳ ಜಾಗರುಕತೆಯಿಂದ ಗುರುಮುಖೇನವೇ ಕಲಿತು ಅಭ್ಯಾಸ ಮಾಡಬೇಕು.

    ಪ್ರಯೋಜನಗಳು: ಕಂದಾಸನವನ್ನು ಅಭ್ಯಾಸ ಮಾಡುವುದರಿಂದ ಕಾಲಿನ ಮಾಂಸಖಂಡಗಳು ಚೆನ್ನಾಗಿ ಪಳಗುತ್ತವೆ ಮತ್ತು ಕಾಲಿನ ಪೆಡಸುತನ ನಿವಾರಣೆಯಾಗುತ್ತದೆ. ಕಾಲಿನ ನರಗಳ ಸೆಳೆತ ನಿವಾರಣೆ, ಮೊಣಕಾಲಿನ ನರದ ದೋಷ ನಿವಾರಣೆಗೆ ತುಂಬಾ ಸಹಕಾರಿಯಾಗುತ್ತದೆ. ಸೊಂಟದಲ್ಲಿನ ಬಿಗಿತವನ್ನು ಸ್ವಲ್ಪ ಮಟ್ಟಿಗೆ ತೆಗೆದುಹಾಕುತ್ತದೆ. ಕೀಲುಗಳು ಹೊಂದಿಕೊಳ್ಳುತ್ತವೆ. ಕೀಲು ನೋವು ನಿಯಂತ್ರಣವಾಗುತ್ತದೆ. ಲೈಂಗಿಕ ಅಂಗಗಳಿಗೆ ರಕ್ತದ ಪರಿಚಲನೆ ಹೆಚ್ಚಿಸುವಲ್ಲಿ ಪರಿಣಾಮಕಾರಿ. ಮೂಲಾಧಾರ ಮತ್ತು ಸ್ವಾಧಿಷ್ಟಾನ ಚಕ್ರಗಳ ಸುಸ್ಥಿತಿಗೆ ಈ ಆಸನ ಸಹಕಾರಿ.

    ಇದನ್ನೂ ಓದಿ: ಹೈಕೋರ್ಟ್​ ಮುಂದೆ ಬಿಬಿಎಂಪಿ ಕಮಿಷನರ್​! ಅಕ್ರಮ ಕಟ್ಟಡ ತೆರವಿಗೆ ಡೆಡ್​ಲೈನ್​

    ಅಭ್ಯಾಸ ಕ್ರಮ: ಜಮಖಾನ ಹಾಸಿದ ನೆಲದ ಮೇಲೆ ಕುಳಿತುಕೊಂಡು ಮೊದಲಿಗೆ ಬದ್ಧಕೋನಾಸನ ಅಭ್ಯಾಸ ಮಾಡಿ. ಅನಂತರ ಬಲಗೈಯಿಂದ ಬಲಪಾದವನ್ನು ಎಡಗೈಯಿಂದ ಎಡಪಾದವನ್ನು ಸಮರ್ಪಕವಾಗಿ ಹಿಡಿದುಕೊಳ್ಳಿ. ಕೈಗಳ ಸಹಾಯದಿಂದ ಎರಡೂ ಕಾಲುಗಳ ಹಿಮ್ಮಡಿ ಮತ್ತು ಪಾದಗಳ ಹೊರಬದಿಗಳನ್ನು ಹೊಕ್ಕುಳು ಮತ್ತು ಎದೆಯ ಭಾಗಕ್ಕೆ ತಂದು ಒತ್ತಿ ಇರಿಸಿ. ಆಮೇಲೆ ಕೈಗಳನ್ನು ಚಿನ್ಮುದ್ರೆ ಭಂಗಿಯಲ್ಲಿ ಇರಿಸಿ. ಇನ್ನೂ ಸಾಧ್ಯವಾದರೆ ಉಸಿರನ್ನು ತೆಗೆದುಕೊಳ್ಳುತ್ತಾ ಎರಡೂ ಕೈಗಳನ್ನು ಶಿರಸ್ಸಿನ ಮೇಲೆ ತಂದು ಕೈ ಮುಗಿಯಿರಿ. ಈ ಸ್ಥಿತಿಯಲ್ಲಿ ಸ್ವಲ್ಪಹೊತ್ತು ಸಹಜ ಉಸಿರಾಟ ನಡೆಸಿ ವಿಶ್ರಮಿಸಬೇಕು.

    ಈ ಆಸನವನ್ನು ಆರಂಭದಲ್ಲಿ ಅಭ್ಯಾಸ ನಡೆಸುವಾಗ ಪಾದಗಳು ಜಾರಿ ಬೀಳಬಹುದು. ನಿತ್ಯ ನಿರಂತರ ಕ್ರಮವತ್ತಾಗಿ ಉಸಿರಿನ ಗತಿಯೊಂದಿಗೆ ಕಲಿತಾಗ ಈ ಆಸನವು ಕ್ರಮೇಣ ಕೈವಶವಾಗುತ್ತದೆ. ತೀವ್ರ ಮಂಡಿ ನೋವು, ಸೊಂಟ ನೋವು ಮತ್ತು ಕಾಲು ಸೆಳೆತ ಇದ್ದವರು ಈ ಆಸನ ಅಭ್ಯಾಸ ಮಾಡಬಾರದು.

    ಕಿಬ್ಬೊಟ್ಟೆಗೆ ವ್ಯಾಯಾಮ, ಬೆನ್ನೆಲುಬಿಗೆ ಶಕ್ತಿ ನೀಡುವ ‘ಏಕಪಾದ ಕೌಂಡಿನ್ಯಾಸನ’

    VIDEO| ಸ್ಕೂಟರಲ್ಲಿ ಹೋಗುತ್ತಿದ್ದ ಹುಡುಗಿಯನ್ನು ನಿಲ್ಲಿಸಿ ಬುರ್ಖಾ ತೆಗೆಸಿದರು! ವೈರಲ್​ ಆಯ್ತು ವಿಡಿಯೋ

    ರಾಜ್ಯ ಸರ್ಕಾರಿ ನೌಕರರಿಗೂ ಸಿಹಿಸುದ್ದಿ: ಶೇ. 3 ರಷ್ಟು ತುಟ್ಟಿಭತ್ಯೆ ಹೆಚ್ಚಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts