More

    ಎಟಿಎಂಗೆ ಹೋಗಿ ಹಣ ತೆಗೆದುಕೊಂಡು ಸುಮ್ಮನೆ ಬರೋದು ಬಿಟ್ಟು ಈತ ಮಾಡಿದ ಕೆಲಸ ನೋಡಿ..! ಪಾಕಿಸ್ತಾನದಲ್ಲಿ ನಡೆದ ಘಟನೆ ಫುಲ್​ ವೈರಲ್

    ಕರೊನಾ ವೈರಸ್​ ಶುರುವಾದಾಗಿನಿಂದಲೂ ಮಾಸ್ಕ್​ ಮತ್ತು ಸ್ಯಾನಿಟೈಸರ್​ಗಳು ಪ್ರತಿಯೊಬ್ಬರ ಬೇಡಿಕೆಯಾಗಿಬಿಟ್ಟಿದೆ. ಆದರೆ ಈ ವಸ್ತುಗಳ ಪೂರೈಕೆಯೂ ಕಡಿಮೆಯಾಗಿದೆ.

    ಕರೊನಾ ಬಾರದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಆಗಾಗ ಕೈಗಳನ್ನು ಸೋಪು ಹಾಕಿ ನೀರಿನಿಂದ ತೊಳೆದುಕೊಳ್ಳುವುದು ಅಥವಾ ಸ್ಯಾನಿಟೈಸರ್​ನಿಂದ ಸ್ವಚ್ಛಗೊಳಿಸಿಕೊಳ್ಳುವುದು ಸದ್ಯ ಬಹುತೇಕರ ಮೊದಲ ಆದ್ಯತೆ ಆಗಿದೆ.

    ಆದರೆ ಸ್ಯಾನಿಟೈಸರ್​​ಗಳ ಕೊರತೆಯಿಂದ ಎಲ್ಲರಿಗೂ ದೊರೆಯುತ್ತಿಲ್ಲ. ಅದನ್ನು ಖರೀದಿಸಲು ಹರಸಾಹಸ ಪಡುವಂತಾಗಿದೆ. ಈ ಮಧ್ಯೆ ಸ್ಯಾನಿಟೈಸರ್​ ಕಳ್ಳತನದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಪಾಕಿಸ್ತಾನದ ಪತ್ರಕರ್ತೆಯೋರ್ವರು ವಿಡಿಯೋವನ್ನು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿಕೊಂಡಿದ್ದಾರೆ.

    32 ಸೆಕೆಂಡ್​ಗಳ ಸಿಸಿಟಿವಿ ಫೂಟೇಜ್​ನ ವಿಡಿಯೋ ಕ್ಲಿಪ್​ ಇದು. ವ್ಯಕ್ತಿಯೋರ್ವ ಎಟಿಎಂಗೆ ಹೋಗಿ ಹಣ ತೆಗೆಯುತ್ತಾನೆ. ಮಷಿನ್​ನಿಂದ ಹೊರಬಂದ ಹಣವನ್ನು ತನ್ನ ಜೇಬಿನಲ್ಲಿ ಇಟ್ಟುಕೊಂಡ ಆತ, ಎಟಿಎಂ ಮಷಿನ್​ ಪಕ್ಕದಲ್ಲಿ ಸಾರ್ವಜನಿಕರಿಗಾಗಿ ಇಟ್ಟಿದ್ದ ಸ್ಯಾನಿಟೈಸರ್​ ಬಾಟಲಿಯನ್ನೂ ಎತ್ತಿ ತನ್ನ ಕೋಟಿನ ಜೇಬಿನಲ್ಲಿ ಇಡುತ್ತಾನೆ. ಅದನ್ನು ಯಾರಿಗೂ ಕಾಣದಂತೆ ಮುಚ್ಚಿಕೊಂಡು ಅಲ್ಲಿಂದ ತೆರಳುತ್ತಾನೆ. ಸಿಸಿಟಿವಿಯಲ್ಲಿ ಸೆರೆಯಾದ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್​ ಆಗುತ್ತಿದೆ.

    ಟ್ವಿಟರ್​​ನಲ್ಲಿ ಪೋಸ್ಟ್​ ಹಾಕಿದ ಪತ್ರಕರ್ತೆ, ಯಾರೂ ನಮ್ಮನ್ನು ನೋಡುತ್ತಿಲ್ಲ ಎಂದು ಅಂದುಕೊಂಡರೆ ಹೀಗೆಲ್ಲ ಆಗುತ್ತದೆ ಎಂದು ಫನ್ನಿಯಾಗಿ ಕ್ಯಾಪ್ಷನ್​ ಬರೆದಿದ್ದಾರೆ.

    ನೆಟ್ಟಿಗರಂತೂ ವಿಧವಿಧದ ಕಾಮೆಂಟ್​​ಗಳನ್ನು ಬರೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts