More

    ಚಿರತೆ ಓಡಾಟದ ವಿಡಿಯೋ ವೈರಲ್

    ಭಟ್ಕಳ: ಸಾಮಾಜಿಕ ಜಾಲತಾಣದಲ್ಲಿ ಚಿರತೆಯೊಂದು ನಾಯಿಯನ್ನು ಕಚ್ಚಿಕೊಂಡು ಓಡಾಡುತ್ತಿರುವ ದೃಶ್ಯ ವೈರಲ್ ಆಗುತ್ತಿದ್ದು ಇದು ತಾಲೂಕಿನ ಬಂದರಿನ ಬೆಳ್ನಿಯಲ್ಲಿ ನಡೆದ ಘಟನೆ ಎಂದು ಬಿಂಬಿಸಲಾಗುತ್ತಿದೆ.

    ಇತ್ತೀಚೆಗೆ ತಾಲೂಕಿನ ಹೆಬಳೆ ಪಂಚಾಯಿತಿ ವ್ಯಾಪ್ತಿಯ ಶೇಡಬರಿಯಲ್ಲಿ ರಾತ್ರಿ ಚಿರತೆ ಬಂದಿದೆ ಎನ್ನುವ ಆಡಿಯೋ ಸಂದೇಶ ಸಾಕಷ್ಟು ಜನರನ್ನು ಭಯದಲ್ಲೇ ಕಾಲ ಕಳೆಯುವಂತೆ ಮಾಡಿತ್ತು.

    ತಕ್ಷಣ ಅರಣ್ಯ ಇಲಾಖೆ ಅಲ್ಲಲ್ಲಿ ಪಂಜರಗಳನ್ನು ಇಟ್ಟು ಚಿರತೆ ಸೆರೆಗೆ ಕ್ರಮ ಕೈಗೊಂಡಿತ್ತು. ಆದರೆ, ಯಾವುದೇ ಚಿರತೆ ಸೆರೆ ಆಗಿರಲಿಲ್ಲ.
    ಈಗ ಕಳೆದ ಎರಡು ದಿನಗಳಿಂದ ಮತ್ತೆ ಚಿರತೆ ಬಂದಿದೆ ಎನ್ನುವ ಸುದ್ದಿಗಳು ಓಡಾಡುತ್ತಿದ್ದು ಜನರನ್ನು ಪುನಃ ಭಯಬೀಳಿಸಿದೆ. ಭಟ್ಕಳ ಮಾವಿನಕುರ್ವೆ ಪಂಚಾಯಿತಿಯ ಸರ್ಕಾರಿ ಶಾಲೆಯ ಬಳಿ ಚಿರತೆ ಕಂಡು ಬಂದಿದೆ ಎಂದು ಒಬ್ಬರು ಪೋಟೋ ಹಾಕಿದರೆ ಇನ್ನೊಬ್ಬರು ನಾಯಿಯನ್ನು ಕಚ್ಚಿಕೊಂಡು ಹೋಗುವ ವಿಡಿಯೋ ಒಂದನ್ನು ಹರಿಬಿಟ್ಟು ಇದು ಭಟ್ಕಳದ ಬಂದರಿನಲ್ಲಿ ನಡೆದ ಘಟನೆ, ಜಾಗೃತೆ ವಹಿಸಿ ಎಂದು ಹೇಳುವ ಮೂಲಕ ಗೊಂದಲ ಹುಟ್ಟಿಸುತ್ತಿದ್ದಾರೆ.

    ಭಟ್ಕಳ ಬಂದರಿನಲ್ಲಿ ಚಿರತೆ ಓಡಾಡುತ್ತಿದೆ. ನಾಯಿಯನ್ನು ಕಚ್ಚಿಕೊಂಡು ಹೋಗಿದೆ ಎನ್ನುವುದೆಲ್ಲ ಸುಳ್ಳು ಸುದ್ದಿ. ಜಾಲತಾಣಗಳಿಂದ ಹಳೆಯ ವಿಡಿಯೋಗಳನ್ನು ಡೌನ್‌ಲೋಡ್ ಮಾಡಿ ಹರಿಬಿಡುತ್ತಿದ್ದಾರೆ. ಮಾವಿನಕುರ್ವೆಯಲ್ಲಿ ಚಿರತೆ ಅಥವಾ ಯಾವುದೇ ಕಾಡುಪ್ರಾಣಿ ಪತ್ತೆಯಾಗಿಲ್ಲ. ಸಾರ್ವಜನಿಕರಿಗೆ ಒಂದು ವೇಳೆ ಅಂತಹುದೇನಾದರೂ ಗೋಚರಿಸಿದರೆ ಮಾಹಿತಿ ನೀಡಿ. ಯಾರೂ ಭಯಪಡುವ ಅವಶ್ಯಕತೆ ಇಲ್ಲ.
    I ಶರತ ಶೆಟ್ಟಿ, ಆರ್‌ಎಫ್‌ಒ ಭಟ್ಕಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts