More

    ಬೀದಿಬದಿ ವ್ಯಾಪಾರಿ ಹಣ್ಣಿನ ಗಾಡಿಗೆ ಕಿಕ್​​: ವಿಡಿಯೋ ವೈರಲ್​ ಬೆನ್ನಲ್ಲೇ ಪೊಲೀಸ್​ ಕೃತ್ಯಕ್ಕೆ ಕೋಪ ಬರದೆ ಇರದು!

    ಕೊಚ್ಚಿ: ಕಣ್ಣೂರು ಪೊಲೀಸ್​ ಠಾಣೆಯ ಪೊಲೀಸರು ಬೀದಿಬದಿ ವ್ಯಾಪಾರಿಯೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರ ದುರ್ವತನೆ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.​

    ಮೊದಲೇ ಕರೊನಾದಿಂದ ಆರ್ಥಿಕವಾಗಿ ನಲುಗಿರುವ ಜನರು ಮತ್ತೆ ತಮ್ಮ ಜೀವನವನ್ನು ಹಳಿಗೆ ತರಲು ಶ್ರಮ ಪಡುತ್ತಿರುವ ನಡುವೆಯೇ ಪೊಲೀಸರ ದರ್ಪ ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ.

    ಇದನ್ನೂ ಓದಿ: ಕುಗ್ರಾಮದ ಕುವರಿ ಈಗ ಪಿಎಸ್‌ಐ!: ಪ್ರತಿಭಾನ್ವಿತೆಯ ಕನಸು ನನಸು

    ಕಣ್ಣೂರು ನಿವಾಸಿ ಸಾಜಿದ್ ಜತೆ ಪೊಲೀಸರು ಅನುಚಿತವಾಗಿ ನಡೆದುಕೊಂಡಿದ್ದಾರೆ. ಇಲ್ಲಿಂದ ಜಾಗ ಖಾಲಿ ಮಾಡಿ ಎಂದಿದ್ದಕ್ಕೆ ಅದನ್ನು ನಿರಾಕರಿಸಿದ ಸಾಜಿದ್​ ವಿರುದ್ಧ ಕಿಡಿಕಾರಿದ ಪೊಲೀಸ್​, ಏರು ಧ್ವನಿಯಲ್ಲಿ ಮಾತನಾಡುತ್ತಾ, ಹಣ್ಣುಗಳು ತುಂಬಿದ ಸಾಜಿದ್​ ಅವರ ತಳ್ಳುವ ಗಾಡಿಗೆ ಜಾಡಿಸಿ ಒದೆಯುತ್ತಾರೆ. ಇದರಿಂದ ಹಣ್ಣುಗಳು ನೆಲಕ್ಕೆ ಚೆಲ್ಲುತ್ತವೆ. ಪೊಲೀಸರ ದುರ್ವರ್ತನೆಯ ಈ ದೃಶ್ಯ ಸ್ಥಳೀಯರೊಬ್ಬರ ಮೊಬೈಲ್​ನಲ್ಲಿ ರೆಕಾರ್ಡ್​ ಆಗಿದ್ದು, ಇದೀಗ ವೈರಲ್​ ಆಗಿದೆ.

    ಇತ್ತ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಪೊಲೀಸರು ಸಾಜಿದ್​ಗೆ ಮತ್ತಷ್ಟು ಕಿರುಕುಳ ನೀಡಲು ಆರಂಭಿಸಿದ್ದಾರೆ. ಶುಕ್ರವಾರ ಸಂಜೆ ಸಾಜಿದ್​ ಮೊಬೈಲ್​ ಫೋನ್​ ಅನ್ನು ವಶ ಪಡೆದುಕೊಂಡು ತೊಂದರೆ ಕೊಟ್ಟಿದ್ದಾರೆ. ಠಾಣೆಗೂ ಕರೆದೊಯ್ದು ಶನಿವಾರ ಬಿಟ್ಟು ಕಳುಹಿಸಿದ್ದಾರೆ. ಈ ವೇಳೆ ಇನ್ನೆಂದಿಗೂ ನೀನು ಮಾರುಕಟ್ಟೆಯಲ್ಲಿ ಹಣ್ಣುಗಳನ್ನು ಮಾರಾಟ ಮಾಡಬೇಡ. ಆಗೊಂದು ವೇಳೆ ಮಾರಾಟ ಮಾಡಿದ್ದಲ್ಲಿ ಮತ್ತಷ್ಟು ತೊಂದರೆಯನ್ನು ಎದುರಿಸಬೇಕಾಗುತ್ತದೆ ಎಂದು ಧಮ್ಕಿ ಹಾಕಿದ್ದಾರೆ. ಅಲ್ಲದೆ, ಕೆಟ್ಟ ಪದಗಳಿಂದ ನಿಂದಿಸಿದ್ದಾರೆ.

    ಇದನ್ನೂ ಓದಿ: ಐದು ತಿಂಗಳಿಂದ ನಿಂತಿದ್ದ ವೃದ್ಧಾಪ್ಯ ವೇತನದ ಹಣ ಸದ್ಯದಲ್ಲೇ ಫಲಾನುಭವಿಗಳ ಕೈಗೆ

    ವಿಡಿಯೋ ನೋಡಿದ ಸ್ಥಳೀಯ ಶಾಸಕರೊಬ್ಬರು ಪೊಲೀಸ್​ ಅಧಿಕಾರಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇತ್ತ 10 ವರ್ಷಗಳಿಂದ ಮಾರುಕಟ್ಟೆಯಲ್ಲಿ ಹಣ್ಣು ಮಾರಾಟ ಮಾಡಿಕೊಂಡು ಬರುತ್ತಿರುವ ಸಾಜಿದ್​ಗೆ ಪೊಲೀಸರ ದುರ್ವತನೆ ಆತಂಕಕ್ಕೆ ದೂಡಿದೆ. ನನಗೆ ಬೇರೆ ಕೆಲಸ ಮಾಡಲು ತಿಳಿದಿಲ್ಲ. ಈ ಕೆಲಸವನ್ನೇ ಮಾಡಿಕೊಂಡು ಹೋಗುತ್ತೇನೆಂದು ಪೊಲೀಸರ ಬಳಿ ಕೇಳಿಕೊಂಡರು ಅದನ್ನು ಕೇಳಿಸಿಕೊಳ್ಳುವ ವ್ಯವಧಾನವೂ ಪೊಲೀಸರ ಬಳಿ ಇರಲಿಲ್ಲ. ಅಲ್ಲದೆ, ಈ ವಿಚಾರವಾಗಿ ಸ್ಥಳೀಯ ಮಾಧ್ಯಮಗಳು ಪೊಲೀಸ್​ ಅಧಿಕಾರಿಯನ್ನು ಭೇಟಿ ಮಾಡಿದಾಗ ಮಾತನಾಡಲು ನಿರಾಕರಿಸಿದ್ದಾರೆ. (ಏಜೆನ್ಸೀಸ್​)

    ಗೃಹ ಸಚಿವ ಅಮಿತ್​​​ ಷಾ ಮತ್ತೊಮ್ಮೆ ಆಸ್ಪತ್ರೆಗೆ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts