More

    VIDEO | ವರದಿಗಾರ್ತಿಯ ಮೈಕ್​ ಕಸಿದು ಓಡಿದ ನಾಯಿ! ಎಲ್ಲವೂ ಲೈವ್ ಟೆಲಿಕಾಸ್ಟ್!

    ರಷ್ಯಾ : ಬೀಚ್​ ಬಳಿ ನಿಂತು ವೀಕ್ಷಕರಿಗೆ ಹವಾಮಾನ ಬದಲಾವಣೆಯ ಬಗ್ಗೆ ಮಾಹಿತಿ ನೀಡುತ್ತಿದ್ದ ಟಿವಿ ಪತ್ರಕರ್ತೆಯೊಬ್ಬರ ಮೈಕ್​ಅನ್ನು ನಾಯಿಯೊಂದು ಕಿತ್ತುಕೊಂಡು ಓಡಿಹೋಗಿರುವ ಪ್ರಸಂಗ ನಡೆದಿದೆ. ಗಾಬರಿಗೊಂಡ ವರದಿಗಾರ್ತಿಯು ನಾಯಿಯ ಹಿಂದೆ ಓಡಿದ್ದು ಲೈವ್ ಟೆಲಿಕಾಸ್ಟ್ ಆಯಿತು. ಅಷ್ಟೇ ಅಲ್ಲ, ನಂತರ ಆ ತುಂಟ ನಾಯಿಯನ್ನು ವೀಕ್ಷಕರಿಗೆ ಪರಿಚಯಿಸಲಾಯಿತು.

    ರಷ್ಯಾದಲ್ಲಿ ಮೀರ್ ಟಿವಿ ವರದಿಗಾರ್ತಿ ನಾದೆಜ್ದಾ ಸೆರೆಜ್​ಕಿನಾ ಅವರಿಗೆ ಈ ರೀತಿಯ ವಿಚಿತ್ರ ಅಡಚಣೆ ಉಂಟಾಯಿತು. ಮುಂಬರುವ ದಿನಗಳಲ್ಲಿ ಪ್ರದೇಶದ ಹವಾಮಾನ ಹೇಗಿರುತ್ತದೆ ಎಂದು ತಿಳಿಸುತ್ತಿದ್ದ ಆಕೆಯ ಮುಂದೆ ಪ್ರತ್ಯಕ್ಷವಾದ ಗೋಲ್ಡನ್ ರಿಟ್ರೀವರ್ ಒಂದು ಮೈಕ್​ಅನ್ನು ಬಾಯಲ್ಲಿ ಕಚ್ಚಿಕೊಂಡು ಓಡಿಹೋಯಿತು. ನ್ಯೂಸ್ ರೂಮ್​​ನಿಂದ ಆ್ಯಂಕರ್ ವೀಕ್ಷಿಸುತ್ತಿರುವಂತೆಯೇ ಸೆರೆಜ್​ಕಿನಾ ನಾಯಿಯಿಂದ ಮೈಕ್ ವಾಪಸ್ ಪಡೆಯಲು ಅದರ ಹಿಂದೆ ಓಡಿದರು. ಇದೆಲ್ಲವನ್ನೂ ಕ್ಯಾಮರಾಮನ್ ಚಿತ್ರೀಕರಿಸುತ್ತಿದ್ದರೆ, ಇತ್ತ ಆ್ಯಂಕರ್ ಅಡಚಣೆಯಿಂದ ವರದಿಗಾರರೊಂದಿಗೆ ಸಂಪರ್ಕ ಕಡಿತಗೊಂಡಿದೆ ಎಂದು ಸೂಚಿಸಿದರು.

    ಇದನ್ನೂ  ಓದಿ: ಟೆನ್ನಿಸ್ ದಿಗ್ಗಜ ರೋಜರ್ ಫೆಡರರ್ ಜನ್ಮದಿನಕ್ಕೆ ಸ್ವಿಸ್ ಜನರ ಕಾಣಿಕೆ ಏನು ಗೊತ್ತೆ ?!

    ಈ ಇಡೀ ದೃಶ್ಯದ ವಿಡಿಯೋ ತುಣುಕನ್ನು ಅಲಿ ಓಜ್​ಕೊಕ್​ ಎಂಬುವರು ಟ್ವಿಟರ್​ನಲ್ಲಿ ಶೇರ್ ಮಾಡಿದ್ದಾರೆ. ವೈರಲ್ ಆದ ಈ ವಿಡಿಯೋ ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಮೈಕ್​ಅನ್ನು ಆಟಿಕೆ ಎಂದು ತಿಳಿದು ಕಸಿದುಹೋದ ಮುದ್ದು ನಾಯಿಯಿಂದ ಮುದಗೊಂಡಿದ್ದಾರೆ.

    ವರದಿಗಾರ್ತಿಯ ಅದೃಷ್ಟಕ್ಕೆ ನಾಯಿಯು ಮೈಕ್​ಅನ್ನು ವಾಪಸ್​ ಮಾಡಿತು. ಮೈಕ್ ಮೇಲೆ ಅದರ ಹಲ್ಲಿನ ಗುರುತುಗಳು ಬಿದ್ದಿದ್ದರೂ ಅದು ಹಾಳಾಗಲಿಲ್ಲ. ನಂತರ ಈ ರೀತಿ ದಿಢೀರ್ ಆಗಿ ಬಂದು ಶೋನ ಭಾಗವಾದ ನಾಯಿಯನ್ನು ಆಕೆ ವೀಕ್ಷಕರಿಗೆ ಪರಿಚಯಿಸಿದರು. ನಾಯಿಯ ಹೆಸರು ಮಾರ್ಟಿನ್. ತನ್ನ ಮಾಲೀಕಳೊಂದಿಗೆ ಬೆಲ್ಟ್ ಇಲ್ಲದೆ ವಿಹಾರಕ್ಕೆ ಬಂದಿದ್ದ ಮಾರ್ಟಿನ್, ಬಣ್ಣದ ಮೈಕನ್ನು ಆಟಿಕೆ ಎಂದು ತಿಳಿಯಿತು ಎನ್ನಲಾಗಿದೆ. (ಏಜೆನ್ಸೀಸ್)

    ಹಠಾತ್ತನೇ ಭಾಷಣ ನಿಲ್ಲಿಸಿದ ಮೋದಿ! ವೈದ್ಯರ ತಂಡವನ್ನು ಕರೆದಿದ್ದೇಕೆ ?

    ಪ್ರಿಯಾಂಕಾ ಗಾಂಧಿ ಚುನಾವಣಾ ಪ್ರವಾಸ ರದ್ದು; ಕಾರಣ ಏನು ಗೊತ್ತೆ ?

    ನನ್ನನ್ನು ಬಿಜೆಪಿಗೆ ಕರೆತಂದಿದ್ದೇ ಈಶ್ವರಪ್ಪ, ಆದ್ರೂ…., ಸಚಿವ ಸೋಮಣ್ಣ ಬುದ್ಧಿಮಾತು

    ನನ್ನನ್ನು ಬಿಜೆಪಿಗೆ ಕರೆತಂದಿದ್ದೇ ಈಶ್ವರಪ್ಪ, ಆದ್ರೂ…., ಸಚಿವ ಸೋಮಣ್ಣ ಬುದ್ಧಿಮಾತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts