More

    VIDEO| 2024ರ ಚುನಾವಣೇಲಿ ತಮ್ಮ ಪಕ್ಷಕ್ಕೆ ಬಹುಮತ ಬರೋದಿಲ್ಲ ಎಂದ ಕೈ ನಾಯಕ!

    ಶ್ರೀನಗರ: “2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ 300 ಸೀಟುಗಳನ್ನು ಗೆಲ್ಲಬೇಕು ಎಂದು ಪ್ರಾರ್ಥನೆ ಮಾಡುತ್ತೇನೆ. ಆದರೆ, ಅದು ಸಾಧ್ಯವಾಗುವಂತೆ ಕಾಣುವುದಿಲ್ಲ” ಎಂದು ಜಮ್ಮು ಕಾಶ್ಮೀರದ ಮಾಜಿ ಸಿಎಂ ಹಾಗೂ ಕಾಂಗ್ರೆಸ್​ ಹಿರಿಯ ನಾಯಕ ಗುಲಾಂ ನಬಿ ಆಜಾದ್​​ ಹೇಳಿದ್ದಾರೆ. ಬುಧವಾರದಂದು ಕಾಶ್ಮೀರದ ಗಡಿ ಜಿಲ್ಲೆ ಪೂಂಚ್​ನಲ್ಲಿ ನಡೆದ ಪಕ್ಷದ ಸಭೆಯೊಂದರಲ್ಲಿ ಭಾಷಣ ಮಾಡುತ್ತಾ ಅವರು ಈ ಮಾತು ಹೇಳಿದ್ದಾರೆ.

    ಕಾಂಗ್ರೆಸ್​ನಲ್ಲಿ ಸಂಘಟನಾತ್ಮಕ ಬದಲಾವಣೆಗಳಾಗುವವರೆಗೆ ಅದರ ಭವಿಷ್ಯ ಸುಧಾರಿಸುವುದಿಲ್ಲ ಎಂದು ಹೇಳುತ್ತಾ ಬಂದಿರುವ ಜಿ-23 ನಾಯಕರಲ್ಲಿ ಆಜಾದ್​ ಕೂಡ ಒಬ್ಬರು. ಬಿಜೆಪಿ ಸರ್ಕಾರ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿರುವುದು ಪೂಂಚ್​ ಪ್ರದೇಶದಲ್ಲಿ ಪ್ರಮುಖ ರಾಜಕೀಯ ವಿಚಾರವಾಗಿದೆ. ಆದರೆ, ತಾವು ಈ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ ಎಂದು ಆಜಾದ್​ ವಿವರಿಸಿದರು.

    “ಚಂದ್ರನನ್ನು, ನಕ್ಷತ್ರಗಳನ್ನು ತಂದುಕೊಡುತ್ತೇನೆ ಅಂತ ಹೇಳೋಕಾಗುತ್ತಾ? ಏಕೆಂದರೆ ಅದು ನನ್ನ ಕೈಯಲ್ಲಾಗುವ ಕೆಲಸವಲ್ಲ. ಅದೇ ಕಾರಣಕ್ಕೆ ಆರ್ಟಿಕಲ್​​ 370 ಅನ್ನು ವಾಪಸ್​ ತರುವ ಬಗ್ಗೆ ನಾನು ಮಾತಾಡೋಲ್ಲ. ಇದನ್ನು ಕೇಂದ್ರ ಸರ್ಕಾರ ಮಾಡಬೇಕು ಇಲ್ಲ ಸುಪ್ರೀಂ ಕೋರ್ಟ್​ ಮಾಡಬೇಕು. ಕೇಂದ್ರದಲ್ಲಿ ಕಾಂಗ್ರೆಸ್ ಬಹುಮತ ಸಾಧಿಸಿದರೆ ಅದು ಸಾಧ್ಯವಾಗಬಹುದು. ಆದರೆ, ನಾವು(ಕಾಂಗ್ರೆಸ್) 300 ಸಂಸದರನ್ನು ಗೆಲ್ಲಿಸಬಲ್ಲೆವು ಎಂದು ಹೇಳೋಕಾಗುತ್ತಾ? ನಾನದನ್ನು ಅಪೇಕ್ಷಿಸುತ್ತೇನೆ. ಆದರೆ ಅದು ಸಾಧ್ಯವೆನಿಸುತ್ತಿಲ್ಲ” ಎಂದು ಆಜಾದ್​ ಹೇಳಿದರು. (ಏಜೆನ್ಸೀಸ್)

    ವಾಟ್ಸಾಪ್​ನಲ್ಲೇ ಆಟೋ-ಕ್ಯಾಬ್​ ಬುಕ್​ ಮಾಡಬಹುದು! ಈ ನಗರದಲ್ಲಿ ಪೈಲಟ್​ ಪ್ರಾಜೆಕ್ಟ್​

    ಕಂಗನಾ ಪೋಸ್ಟ್​ಗಳ್ನ ಸೆನ್ಸರ್​ ಮಾಡಿ ಎಂದು ಅರ್ಜಿ! ನಟಿಯ ಪ್ರತಿಕ್ರಿಯೆ ಹೀಗಿತ್ತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts