More

    ಚೀನಾ ಸೇನೆ ಹಿಂತೆಗೆತದ ಹಿಂದೆ ಆ 2 ಗಂಟೆಗಳ ವಿಡಿಯೋ ಕಾಲ್​

    ನವದೆಹಲಿ: ಲಡಾಖ್​ನ ಪೂರ್ವಭಾಗದಲ್ಲಿ ತಾನು ನಿಯೋಜಿಸಿದ್ದ ಸೇನಾಪಡೆಯನ್ನು ಹಿಂತೆಗೆದುಕೊಳ್ಳಲು ಭಾರತ ಮತ್ತು ಚೀನಾ ಮುಂದಾಗಿವೆ. ಪ್ಯಾಂಗಾಂಗ್​ ತ್ಸೊ ಸರೋವರದ ಬಳಿ ತನ್ನ ಅತಿಕ್ರಮಣವನ್ನು ಒಪ್ಪಿಕೊಳ್ಳುವಂತೆ ಭಾರತದ ಮೇಲೆ ಒತ್ತಡ ಹೇರಿಕೊಂಡು ಕುಳಿತಿದ್ದ ಚೀನಾ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳಲು ಸಮ್ಮತಿಸಿರಲಿಲ್ಲ. ಆದರೆ ಭಾನುವಾರ ರಾತ್ರಿ 2 ಗಂಟೆಗಳ ವಿಡಿಯೋ ಕಾಲ್​ ಎಲ್ಲವನ್ನೂ ಬದಲಿಸಿತು ಎನ್ನಲಾಗಿದೆ.

    ಹೌದು. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​ ಮತ್ತು ಚೀನಾದ ವಿದೇಶಾಂಗ ಸಚಿವ ವ್ಯಾಂಗ್​ ಯೀ ಭಾನುವಾರ ವಿಡಿಯೋ ಕಾಲ್​ ಮೂಲಕ ಮಾತನಾಡಿದರು. ಇವರಿಬ್ಬರೂ ಗಡಿ ವಿವಾದದ ಕುರಿತು ಚರ್ಚಿಸಲು ಉಭಯ ರಾಷ್ಟ್ರಗಳಿಂದ ನೇಮಿಸಲ್ಪಟ್ಟಿರುವ ವಿಶೇಷ ಪ್ರತಿನಿಧಿಗಳಾಗಿದ್ದಾರೆ. ಲಡಾಖ್​ ಬಿಕ್ಕಟ್ಟ ಮುಂದುವರಿದಿದ್ದ ಹಿನ್ನೆಲೆಯಲ್ಲಿ ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಗಳು ಹೆಚ್ಚು ಫಲದಾಯಕ ಎನಿಸಿಕೊಳ್ಳದೇ ಹೋಗಿದ್ದರಿಂದ, ಉಭಯ ಮುಖಂಡರು ಮಾತುಕತೆ ನಡೆಸುವ ಸಾಧ್ಯತೆ ಕುರಿತು ಚರ್ಚೆ ಆಗುತ್ತಿತ್ತು. ಕೊನೆಗೆ ಅದು ಭಾನುವಾರ ರಾತ್ರಿ ಅವರಿಬ್ಬರೂ ಮಾತುಕತೆ ಮಾಡುವ ಮೂಲಕ ಆ ಚರ್ಚೆಗೆ ವಿರಾಮ ಹಾಡಿದರು.

    ವಾಸ್ತವ ಗಡಿರೇಖೆಯಲ್ಲಿ ಪರಿಪೂರ್ಣವಾದ ಶಾಂತಿ ಮತ್ತು ಪ್ರಶಾಂತ ವಾತಾವರಣ ನೆಲೆಸುವಂತೆ ಮಾಡಬೇಕು. ಭವಿಷ್ಯದಲ್ಲಿ ಇಂಥ ಬಿಕ್ಕಟ್ಟುಗಳನ್ನು ತಡೆಗಟ್ಟಲು ಉಭಯ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಬೇಕು ಎಂಬ ಅಂಶಗಳಿಗೆ ಮಾತುಕತೆ ವೇಳೆ ಒತ್ತು ನೀಡಲಾಗಿತ್ತು ಎನ್ನಲಾಗಿದೆ.

    ಇದನ್ನೂ ಓದಿ: ‘ಮಾಸ್ಕ್​ ಧರಿಸದೆ ಹೊರಗೆ ಬಂದ್ರೆ ದಂಡ ತುಂಬಿ…ಸೀದಾ ಆಸ್ಪತ್ರೆಗೆ ನಡೀರಿ…’

    ಈ ಬಗ್ಗೆ ಮಾಹಿತಿ ನೀಡಿದ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು, ಉಭಯ ವಿಶೇಷ ಪ್ರತಿನಿಧಿಗಳು ಭಾರತ ಮತ್ತು ಚೀನಾ ಗಡಿಭಾಗದಲ್ಲಿ ಇತ್ತೀಚೆಗೆ ಉಂಟಾಗಿರುವ ವಿದ್ಯಮಾನದ ಕುರಿತು ಮುಕ್ತ ಮತ್ತು ವಿಸ್ತೃತವಾದ ಮಾತುಕತೆ ನಡೆಸಿದರು. ಎಲ್​ಎಸಿ ಬಳಿ ನಿಯೋಜಿಸಿರುವ ಯೋಧರನ್ನು ತಕ್ಷಣವೇ ಹಿಂದಕ್ಕೆ ಕರೆಯಿಸಿಕೊಳ್ಳುವುದರಿಂದ ಈ ಭಾಗದಲ್ಲಿ ಶಾಂತಿ ಮತ್ತು ಪ್ರಶಾಂತ ವಾತಾವರಣ ಮೂಡಲು ಸಾಧ್ಯ ಎಂಬುದನ್ನು ಒಪ್ಪಿಕೊಂಡರು. ಅದರಂತೆ ಸೇನಾಪಡೆಯನ್ನು ತ್ವರಿತವಾಗಿ ಹಿಂದಕ್ಕೆ ಕರೆಯಿಸಿಕೊಳ್ಳುವ ಪ್ರಕ್ರಿಯೆ ಕೈಗೊಳ್ಳಲು ನಿರ್ಧರಿಸಿದರು ಎಂದು ಹೇಳಿದ್ದಾರೆ.

    ಇದಾದ ಕೆಲವೇ ಗಂಟೆಗಳಲ್ಲಿ ಉಭಯ ರಾಷ್ಟ್ರಗಳು ಜೂ.15ರಂದು ಗಲ್ವಾನ್​ ಕಣಿವೆಯಲ್ಲಿ ಆಗಿದ್ದ ರಕ್ತಸಿಕ್ತ ಸಂಘರ್ಷ ನಡೆದಿದ್ದ ಸ್ಥಳದಿಂದ ತಮ್ಮ ಸೇನೆಗಳನ್ನು ಒಂದು ಕಿ.ಮೀ. ದೂರದವರೆಗೆ ಹಿಂದಕ್ಕೆ ಕರೆಯಿಸಿಕೊಂಡವು.

    ಸೇನಾಪಡೆಯನ್ನು ಹಂತಹಂತವಾಗಿ ಹಿಂದಕ್ಕೆ ಕರೆಯಿಸಿಕೊಳ್ಳುವುದು, ವಾಸ್ತವ ಗಡಿರೇಖೆಯನ್ನು ಪರಸ್ಪರ ಗೌರವಿಸುವುದು, ಯಥಾಸ್ಥಿತಿಯನ್ನು ಬದಲಿಸಲು ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳಬಾರದು ಹಾಗೂ ಗಡಿ ಭಾಗದಲ್ಲಿನ ಶಾಂತಿಯನ್ನು ಕದಡುವಂಥ ಪರಿಸ್ಥಿತಿ ನಿರ್ಮಾಣವಾದರೆ ಉಭಯ ರಾಷ್ಟ್ರಗಳ ಮುಖಂಡರು ಒಟ್ಟಾಗಿ ಕುರಿತು ಈ ಬಗ್ಗೆ ಚರ್ಚಿಸಿ ಪರಿಸ್ಥಿತಿಯನ್ನು ನಿಯಂತ್ರಿಸಬೇಕು ಎಂಬ ಅಂಶಗಳಿಗೂ ಉಭಯ ನಾಯಕರು ಸಮ್ಮತಿಸಿದರು ಎನ್ನಲಾಗಿದೆ.

    ಮದುವೆಯಾಗದೇ ಹುಟ್ಟಿದ ಮಗುವನ್ನು ಮಾರಿದರು; ಪೋಷಕರು ಬೇಡ ಎಂದು ಮರಳಿಸಿದ್ದಕ್ಕೆ ಕೊಂದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts