More

    ವಿಡಿಯೋ ಕಾಲ್ ಸ್ಕ್ಯಾಮ್: ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ, ಇಲ್ಲವಾದಲ್ಲಿ ಹಣ ಕಳೆದುಕೊಳ್ಳಬೇಕಾಗುತ್ತದೆ, ಎಚ್ಚರಿಸಿದ ಸರ್ಕಾರ

    ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ತಂತ್ರಜ್ಞಾನ ಮಹತ್ತರವಾದ ಬದಲಾವಣೆಗಳನ್ನು ಕಂಡಿದೆ. ಇದನ್ನೇ ಬಳಸಿಕೊಂಡ ಕೆಲ ವಂಚಕರು ಜನರನ್ನು ಗುರಿಯಾಗಿಸಿಕೊಂಡು ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಸದ್ಯ ಈ ವಂಚಕರು ಗ್ರಾಹಕರನ್ನು ವಿಡಿಯೋ ಕರೆ ಮೂಲಕ ವಂಚಿಸಲು ಪ್ರಯತ್ನಿಸುತ್ತಿದ್ದಾರೆ.

    ಹೌದು, ನಾವೆಲ್ಲಾ ಸಾಮಾನ್ಯವಾಗಿ ವಿಡಿಯೋ ಕರೆಗಳ ಮೂಲಕ ನಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಪರ್ಕದಲ್ಲಿರುತ್ತೇವೆ ಅಲ್ಲವೇ, ಇದರಿಂದ ನಮ್ಮ ಮತ್ತು ಆಪ್ತರ ನಡುವಿನ ಅಂತರವನ್ನು ಕಡಿಮೆಯಾಗುತ್ತದೆ. ಆದರೆ ಈಗ ಸ್ಕ್ಯಾಮರ್‌ಗಳು ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ವಂಚಿಸಲು ವಿಡಿಯೋ ಕರೆಗಳನ್ನು ಬಳಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯ ಗ್ರಾಹಕರನ್ನು ರಕ್ಷಿಸಲು, ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (CERT-In) ಜನರಿಗೆ ಸಲಹೆಯನ್ನು ನೀಡಿದೆ. ಅದಕ್ಕೂ ಮುನ್ನ ಏನಿದು ವಿಡಿಯೋ ಕರೆ ಹಗರಣ ನೋಡೋಣ…

    ವಿಡಿಯೋ ಕರೆ ಹಗರಣ ಎಂದರೇನು?
    ಕಳೆದ ಕೆಲವು ತಿಂಗಳುಗಳಲ್ಲಿ ವಿಡಿಯೋ ಕರೆಗಳ ಮೂಲಕ ಜನರಿಗೆ ವಂಚನೆ ಮಾಡುತ್ತಿರುವ ಸುದ್ದಿಗಳು ಕೇಳಿ ಬರುತ್ತಿವೆ. ಇದರಲ್ಲಿ ವಂಚಕರು ತಮ್ಮ ವಾಟ್ಸಾಪ್ ಕರೆ ಮೂಲಕ ಜನರನ್ನು ವಂಚಿಸಲು ಪ್ರಯತ್ನಿಸುತ್ತಾರೆ. ಹಾಗಾದರೆ ಇದರಲ್ಲಿ ಯಾವ ರೀತಿಯ ಹಗರಣಗಳನ್ನೆಲ್ಲಾ ನೀವು ಎದುರಿಸಬೇಕಾಹುದು ಎಂಬುದನ್ನು ನೋಡುವುದಾದರೆ…

    * ಬ್ಲ್ಯಾಕ್‌ಮೇಲ್ ಮಾಡಲು ಪ್ರಯತ್ನಿಸುತ್ತಾರೆ. ಅಂದರೆ ಈ ಹಗರಣದಲ್ಲಿ ಸ್ಕ್ಯಾಮರ್‌ಗಳು ನಿಮ್ಮ ಅರಿವಿಲ್ಲದೆ ವಿಡಿಯೋ ಕರೆಯನ್ನು ರೆಕಾರ್ಡ್ ಮಾಡಬಹುದು. ನೀವು ಅವರಿಗೆ ಒಂದು ವೇಳೆ ಹಣವನ್ನು ಪಾವತಿಸದಿದ್ದರೆ ಅದನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಬಹುದು.
    * ಇದಲ್ಲದೆ, ಸ್ಕ್ಯಾಮರ್‌ಗಳು ತಪ್ಪು ತಪ್ಪಾದ ಯೋಜನೆಗಳಲ್ಲಿ ಹೂಡಿಕೆ ಮಾಡಲು ವಿಡಿಯೋ ಕರೆ ಬಳಕೆದಾರರನ್ನು ಪ್ರಚೋದಿಸುತ್ತಾರೆ.
    * ಕೆಲವೊಮ್ಮೆ ಈ ಸ್ಕ್ಯಾಮರ್‌ಗಳು ಟೆಕ್ ಸಪೋರ್ಟ್ ಪ್ರತಿನಿಧಿಗಳಾಗಿ ಪೋಸ್ ನೀಡುತ್ತಾರೆ. ಮಾಲ್‌ವೇರ್ ಅನ್ನು ಡೌನ್‌ಲೋಡ್ ಮಾಡಲು ಅಥವಾ ನಿಮ್ಮ ಸಾಧನಕ್ಕೆ ರಿಮೋಟ್ ಪ್ರವೇಶವನ್ನು ನೀಡಲು ನಿಮಗೆ ಮನವರಿಕೆ ಮಾಡಬಹುದು.

    ಈ ವಿಷಯಗಳನ್ನು ನೆನಪಿನಲ್ಲಿಡಿ…
    *ಬಳಕೆದಾರರು ತಮಗೆ ಮುಖ್ಯವಾದ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಸೈಬರ್ ಭದ್ರತಾ ಸಂಸ್ಥೆ ಹೇಳಿದೆ.
    *ಸಾಮಾಜಿಕ ಮಾಧ್ಯಮದಲ್ಲಿ ಅಪರಿಚಿತರೊಂದಿಗೆ, ವಿಶೇಷವಾಗಿ ನಿಮಗೆ ತಿಳಿದಿಲ್ಲದವರೊಂದಿಗೆ ಸಂಪರ್ಕ ಸಾಧಿಸಬೇಡಿ.
    * ನಿಮಗೆ ಪರಿಚಯವಿಲ್ಲದ ಜನರೊಂದಿಗೆ ವಿಡಿಯೋ ಕರೆ ಮಾಡಲು ಅನುಮತಿಸುವ ಯಾವುದೇ ಅಪ್ಲಿಕೇಶನ್‌ಗಳನ್ನು ಬಳಸುವಾಗ ಜಾಗರೂಕರಾಗಿರಿ.
    * ವಿಡಿಯೊ ಕರೆಗಾಗಿ ಸುರಕ್ಷಿತ ಪ್ಲಾಟ್​​​ಫಾರ್ಮ್ ಬಳಸಿ.
    * ಸೈಬರ್ ವಂಚನೆಯಿಂದ ರಕ್ಷಿಸಿಕೊಳ್ಳಲು ಆನ್‌ಲೈನ್‌ನಲ್ಲಿ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ತಪ್ಪಿಸಿ.
    * ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಸುರಕ್ಷಿತವಾಗಿರಿಸಿ.

    ದಿವಂಗತ ಗಾಯಕ ಸಿಧು ಮೂಸೆವಾಲಾ ತಾಯಿ ಚರಣ್ ಕೌರ್ ಗರ್ಭಿಣಿ, 58 ನೇ ವಯಸ್ಸಿನಲ್ಲಿ ಮತ್ತೆ ತಂದೆಯಾದ ಬಲ್ಕೌರ್ ಸಿಂಗ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts