More

    ಚಿತ್ರದುರ್ಗದಲ್ಲಿ ನಡೆಯಲಿದೆ ವಿಹಿಂಪ ಗಣೇಶೋತ್ಸವ

    ಚಿತ್ರದುರ್ಗ: ವಿಶ್ವ ಹಿಂದು ಪರಿಷತ್ ಕ್ಷೇತ್ರೀಯ ಸಂಚಾಲಕ (ರಾಜಸ್ತಾನ, ಗುಜರಾತ್) ಗೋಪಾಲ್ ಅವರು, ನಗರದ ಸ್ಟೇಡಿಯಂ ರಸ್ತೆಯಲ್ಲಿ ಹಿಂದು ಮಹಾ ಗಣಪತಿ ಉತ್ಸವ ಸಮಿತಿಯ ಪೆಂಡಾಲ್ ನಿರ್ಮಾಣಕ್ಕಾಗಿ ಧ್ವಜಸ್ತಂಭ ಹಾಗೂ ಗೋ ಪೂಜೆಯನ್ನು ಗುರುವಾರ ಬೆಳಗ್ಗೆ 6ಗಂಟೆಗೆ ನೆರವೇರಿಸಿದರು.

    ಇದರಿಂದಾಗಿ ಕೋವಿಡ್ ಹಿನ್ನೆಲೆಯಲ್ಲಿ ಪ್ರಸಿದ್ಧ ಗಣಪತಿ ಪ್ರತಿಷ್ಠಾಪನೆಗೆ ಇದ್ದ ಅನುಮಾನಕ್ಕೆ ಸಮಿತಿ ತೆರೆ ಎಳೆದಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ಗಣೇಶ ಪ್ರತಿಷ್ಠಾಪನೆಗೆ ಮುಂದಾಗಿದೆ. ಪರಿಸ್ಥಿತಿ ಅನುಗುಣವಾಗಿ ಉತ್ಸವವನ್ನು ಆಚರಿಸಲು ಸಮಿತಿ ತೆಗೆದುಕೊಂಡಿರುವ ನಿರ್ಧಾರದಂತೆ ಶುಭಗಳಿಗೆಯಲ್ಲಿ ಗಣೇಶೋತ್ಸವದ ಸಿದ್ಧತೆಗೆ ಚಾಲನೆ ಸಿಕ್ಕಿದೆ.

    ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗಿದೆ. ಆದ್ದರಿಂದಾಗಿ ಲಕ್ಷಾಂತರ ಜನ ಸೇರುವಂಥ ಶೋಭಾಯಾತ್ರೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟನೆಯೇ ಕೈ ಬಿಟ್ಟಿದೆ. ಆದರೆ ಅಭಿಷೇಕ, ಹೋಮ, ಹವನ ಸಹಿತ ಎಲ್ಲ ಧಾರ್ಮಿಕ ವಿಧಿಗಳು ನಿತ್ಯ ನಡೆಯುತ್ತವೆ, ಸಾಂಸ್ಕೃತಿಕ ಹಾಗೂ ಉಪನ್ಯಾಸ ಕಾರ್ಯಕ್ರಮಗಳನ್ನು ಸಾಮಾಜಿಕ ಜಾಲ ತಾಣಗಳ ಮೂಲಕ ನೇರ ಪ್ರಸಾರಕ್ಕೆ ಸಮಿತಿ ಕ್ರಮ ತೆಗೆದುಕೊಂಡಿದೆ. ಇದನ್ನೂ ಓದಿ: ಮಾರ್ಗಮಧ್ಯೆಯೇ ಮೃತಪಟ್ಟ ರೋಗಿ; ಶವವನ್ನು ರಸ್ತೆ ಪಕ್ಕ ಇಟ್ಟು ಮರಳಿದ ಆಂಬ್ಯುಲೆನ್ಸ್ ಚಾಲಕ

    ಗಣೇಶೋತ್ಸವಕ್ಕೆ ಕರೊನಾ ಅಡ್ಡಿಯಾಗಬಾರದು. ಆದರೆ ಸಂಘಟನೆ ಸಾಮಾಜಿಕ ಹೊಣೆಗಾರಿಕೆ ಮರೆಯದೇ ಶೋಭಾಯಾತ್ರೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೈಬಿಡ ಬೇಕು ,ಮಾರ್ಗಸೂಚಿಗಳನ್ನು ಕಟ್ಟುನಿಟ್ಟಿಂದ ಪಾಲಿಸಬೇಕೆಂದು ಗೋಪಾಲ್ ಈ ಸಂದರ್ಭದಲ್ಲಿ ಪರಿವಾರ ಕಾರ್ಯಕರ್ತರಿಗೆ ಸೂಚಿಸಿದರು.

    ಈ ವೇಳೆ ಮಾತನಾಡಿದ ಸಮಿತಿ ಅಧ್ಯಕ್ಷ ಟಿ.ಬದ್ರಿನಾಥ್, ದುರ್ಗದ ಪ್ರಸಿದ್ಧ ಗಣೇಶೋತ್ಸವವನ್ನು ಧಾರ್ಮಿಕ ವಿಧಿಗಳ ಅನುಸಾರ ಆಚರಿಸಲಾಗುವುದೆಂದರು. ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಂ.ಚಂದ್ರಪ್ಪ, ಶಾಸಕ ಜಿ.ಎಚ್.ತಿಪ್ಪಾ ರೆಡ್ಡಿ,ಸಮಿತಿ ಉಪಾಧ್ಯಕ್ಷರಾದ ಶರಣ್, ಸುದೀಪ್ ಗುಂಡಾರ್ಫಿ,ಭಜರಂಗಳದಳದ ವಿಭಾಗೀಯ ಸಂಚಾಲಕ ಪ್ರಭಂಜನ್, ವಿಠ್ಠಲ್, ಶ್ರೀನಿವಾಸ್, ಡೇರಿ ಸೀನಣ್ಣ, ಶಶಿಧರ್, ಸಂದೀಪ್​, ತಿಪ್ಪೇಸ್ವಾಮಿ, ಪ್ರಶಾಂತ್, ಎಂ.ಸಿ.ರಘುಚಂದನ್, ರುದ್ರೇಶ್ ಮತ್ತಿತರ ಸಮಿತಿ ಹಾಗೂ ಪರಿವಾರ ಪ್ರಮುಖರು ಇದ್ದರು.

    ನಾಳೆಯಿಂದ ರಾಜಸ್ಥಾನ ವಿಧಾನಸಭೆ ಕಲಾಪ; ಸಿಎಂ ಅಶೋಕ್ ಗೆಹ್ಲೋಟ್​​ರನ್ನು ಭೇಟಿಯಾದ ಸಚಿನ್​ ಪೈಲಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts