More

    ಕಲಬುರಗಿಯಲ್ಲಿ ದುರ್ಗಾ ದೌಡ್ 22ರಂದು

    ಕಲಬುರಗಿ: ವಿಶ್ವ ಹಿಂದೂ ಪರಿಷತ್ ಕಲಬುರಗಿ ಮಹಾನಗರ ಜಿಲ್ಲಾ ಘಟಕದಿಂದ ದುರ್ಗಾಷ್ಟಮಿ ನಿಮಿತ್ತ ಅಕ್ಟೋಬರ್ ೨೨ರಂದು ನಗರದಲ್ಲಿ ಸಹಸ್ರಾರು ದುರ್ಗೆಯರಿಂದ ದುರ್ಗಾ ದೌಡ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾತೃಶಕ್ತಿ ಪ್ರಮುಖರಾದ ಸುಮಂಗಲಾ ಚಕ್ರವರ್ತಿ ಹೇಳಿದರು.

    ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಕ್ರವರ್ತಿ, ಅಂದು ನಗರದ ವೀರಶೈವ ಕಲ್ಯಾಣ ಮಂಟಪದಿಂದ ಮಧ್ಯಾಹ್ನ ೩.೩೦ಕ್ಕೆ ಹೊರಡುವ ದುರ್ಗಾ ವಾಹಿನಿ ನಗರದ ಜಗತ್ ವೃತ್ತ, ಸೂಪರ್ ಮಾರ್ಕೆಟ್, ಜನತಾ ಬಜಾರ್, ಸಿಟಿ ಬಸ್ ನಿಲ್ದಾಣ, ಲಾಲಗೇರಿ ಕ್ರಾಸ್ ಮೂಲಕ ಶರಣಬಸವೇಶ್ವರ ದೇವಸ್ಥಾನದಲ್ಲಿ ಸಮಾರೋಪಗೊಳ್ಳಲಿದೆ ಎಂದು ಹೇಳಿದರು.

    ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್.ಅಪ್ಪಾ ಅಧ್ಯಕ್ಷತೆ ವಹಿಸಲಿದ್ದು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಭಾಗ್ಯಶ್ರೀ ಎಸ್.ಬೆಳ್ಳೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.

    ನಿರಂತರ ಎರಡು ವರ್ಷಗಳ ಕಾಲ ಅರ್ಥಪೂರ್ಣವಾಗಿ ಆಚರಣೆ ಮಾಡುವ ಮೂಲಕ ೩ನೇ ವರ್ಷದ ಈ ಕಾರ್ಯಕ್ರಮದಲ್ಲಿ ಸರಿ ಸುಮಾರು ೨ ಸಾವಿರ ದುರ್ಗೆಯರು ಭಾಗವಹಿಸಲಿದ್ದು, ಕೋಲಾಟ, ಹಾಡು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದ ಜತೆಗೆ ದುರ್ಗಾ ದೌಡ್ ನಡೆಯಲಿದೆ ಎಂದರು.

    ಇಂದಿರಾ ರಾಠೋಡ್, ಪ್ರಭಾವತಿ ಗೋಡಿ, ರೂಪಾ ಅಬಕಾರಿ, ಸೀಮಾ ಗೋಡಿ, ಸುನಿತಾ ಠಾಕೂರ್, ಸುಮಂಗಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts