More

    ಶ್ರೀದೇವಿ ಪ್ಯಾಲೇಸ್‌ನಲ್ಲಿ ವೇಣುಗೋಪಾಲಸ್ವಾಮಿ ಕಲ್ಯಾಣೋತ್ಸವ: ಏಕಕಾಲದಲ್ಲಿ ಸಹಸ್ರನಾಮ ತುಳಸಿ ಅರ್ಚನೆ

    ಚಿಕ್ಕಬಳ್ಳಾಪುರ: ನಗರದಲ್ಲಿನ ಶ್ರೀದೇವಿ ಪ್ಯಾಲೇಸ್‌ನಲ್ಲಿ ರುಕ್ಮಿಣಿ ಸತ್ಯಭಾಮ ಸಮೇತ ವೇಣುಗೋಪಾಲಸ್ವಾಮಿ ಕಲ್ಯಾಣೋತ್ಸವ ಭಾನುವಾರ ಸಂಪ್ರದಾಯವಾಗಿ ನೆರವೇರಿತು.
    ನಗರದ ಗಾಯತ್ರಿ ಸೇವಾ ಸಮಿತಿ ಮತ್ತು ಗಾಯತ್ರಿ ಮಹಿಳಾ ಮಂಡಳಿಯ ನೇತೃತ್ವದಲ್ಲಿ 14ನೇ ವರ್ಷದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿಷ್ಣು ಸಹಸ್ರನಾಮ ತುಳಸಿ ಅರ್ಚನೆ, ವಿಷ್ಣು ಸಹಸ್ರನಾಮ ಹೋಮ ಸೇರಿದಂತೆ ಧಾರ್ಮಿಕ ವಿವಿಧ ಪೂಜೆಗಳನ್ನು ಶ್ರದ್ಧಾಭಕ್ತಿಯಿಂದ ಹಮ್ಮಿಕೊಳ್ಳಲಾಗಿತ್ತು.
    ರಾಯಲ್ಪಾಡು ವೆಲ್ಲಾಲ ಸತ್ಯನಾರಾಯಣಶಾಸ್ತ್ರಿ ಅವರ ಮಾರ್ಗದರ್ಶನದಲ್ಲಿ ಜಾತಿ ಮತದ ತಾರತಮ್ಯವಿಲ್ಲದೆ 1,500 ಮಂದಿ ಏಕಕಾಲದಲ್ಲಿ ಸಹಸ್ರನಾಮ ತುಳಸಿ ಅರ್ಚನೆ ನೆರವೇರಿಸಿದರು. ಇದಕ್ಕಾಗಿ ಒಂದು ಟನ್ ತುಳಸಿ ತರಿಸಲಾಗಿತ್ತು. ಸಂಜೆ ಆನೂರು ಅನಂತಕೃಷ್ಣ ಹಾಗೂ ಸಂಗಡಿಗರಿಂದ ಭಕ್ತಿಗಾನ ವಾದ್ಯವೈಭವ ವಿಶೇಷ ಸಂಗೀತ ಕಾರ್ಯಕ್ರಮ ನಡೆಯಿತು. ಸಚಿವ ಡಾ.ಕೆ.ಸುಧಾಕರ್, ಪದಾಧಿಕಾರಿಗಳಾದ ಡಿ.ಕೆ.ಶಾರದಾಂಬ, ಚಂದ್ರಕಾಂತಮ್ಮ, ಸವಿತಾ, ಸರಸ್ವತಿ ಮತ್ತಿತರರು ಭಾಗವಹಿಸಿದ್ದರು.

    ಯದುವೀರ್ ಭಾಗಿ: ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯ ಸಹಭಾಗಿತ್ವ ಮನಸ್ಸಿಗೆ ನೆಮ್ಮದಿ ನೀಡುತ್ತದೆ ಎಂದು ಮೈಸೂರು ಸಂಸ್ಥಾನದ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು. ಭಾರತೀಯ ಸಂಸ್ಕೃತಿ, ಕಲೆ, ಪರಂಪರೆ, ಆಚಾರ ವಿಚಾರಗಳು ವೈಶಿಷ್ಟ್ಯತೆಯನ್ನು ಹೊಂದಿದೆ. ಇದರ ಬಗ್ಗೆ ಇಡೀ ಜಗತ್ತು ಮೆಚ್ಚುಗೆ ವ್ಯಕ್ತಪಡಿಸುತ್ತದೆ ಎಂದರು. ಕಳೆದ ಹಲವು ವರ್ಷಗಳಿಂದಲೂ ಅದ್ದೂರಿಯಾಗಿ ಗಾಯತ್ರಿ ಸೇವಾ ಸಮಿತಿ ಮತ್ತು ಗಾಯತ್ರಿ ಮಹಿಳಾ ಮಂಡಳಿಯು ಕಲ್ಯಾಣೋತ್ಸ ಹಮ್ಮಿಕೊಳ್ಳುತ್ತಿರುವುದು, ಇದರಲ್ಲಿ ಎಲ್ಲ ವರ್ಗದ ಜನರು ಭಾಗವಹಿಸುವಿಕೆ ಶ್ಲಾಘನೀಯ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts