More

    ಬಿಜೆಪಿಯತ್ತ ವೇಣುಗೋಪಾಲ್: 23ರಂದು ಅಧಿಕೃತ ಸೇರ್ಪಡೆ

    ಚಿಂತಾಮಣಿ: ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರಾಗಬಹುದು ಎಂಬ ಮತದಾರರಲ್ಲಿ ಇದ್ದ ಕುತೂಹಲ ಮತ್ತು ಗೊಂದಲಕ್ಕೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸೋಮವಾರ ಒಂದು ಹಂತದ ತೆರೆ ಎಳೆದಿದ್ದಾರೆ.
    ಕೆಎಂಕೆ ಟ್ರಸ್ಟ್‌ನ ಜಿ.ಎನ್.ವೇಣುಗೋಪಾಲ್ ಬಿಜೆಪಿಗೆ ಸೇರ್ಪಡೆಯಾಗುವುದು ಖಚಿತವಾಗಿದ್ದು ಅವರೇ ಅಭ್ಯರ್ಥಿಯಾಗುವುದು ಬಹುತೇಕ ನಿಶ್ಚಿತ ಎನ್ನಲಾಗಿದೆ. ಇದರಿಂದ ಕಾರ್ಯಕರ್ತರ ಗೊಂದಲಕ್ಕೂ ತೆರೆ ಬಿದ್ದಂತಾಗಿದೆ.
    ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ವಾಜಿ ಶಾಸಕ ಡಾ.ಎಂ.ಸಿ.ಸುಧಾಕರ್, ಜೆಡಿಎಸ್‌ನಿಂದ ಹಾಲಿ ಶಾಸಕ ಎಂ.ಕೃಷ್ಣಾರೆಡ್ಡಿ ಅವರ ಹೆಸರು ೋಷಣೆಯಾಗಿ ಕ್ಷೇತ್ರದಲ್ಲಿ ಆ ಪಕ್ಷಗಳ ಚಟುವಟಿಕೆಗಳು ಬಿರುಸಾಗಿದೆ. ಆದರೆ ಬಿಜೆಪಿಯಲ್ಲಿ ವಾತ್ರ ಗೊಂದಲ ಮುಂದುವರಿದಿತ್ತು. ಈಗಾಗಲೇ ಕ್ಷೇತ್ರದಲ್ಲಿ ಸಚಿವ ಡಾ.ಕೆ.ಸುಧಾಕರ್ ಅವರ ಭಾಮೈದ ಕೆ.ವಿ.ಸತ್ಯನಾರಾಯಣರೆಡ್ಡಿ, ಚಿಂತಾಮಣಿ ಮೂಲದ ಬೆಂಗಳೂರು ನಿವಾಸಿ ಎಂ.ಆರ್.ಬಾಬು, ಸ್ಥಳೀಯರಾದ ವಾಡಿಕೆರೆ ಅರುಣಬಾಬು ಟಿಕೆಟ್ ಆಕಾಂಕ್ಷಿಗಳಾಗಿ ಕ್ಷೇತ್ರದಲ್ಲಿ ಪಕ್ಷದ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಬಿಜೆಪಿಯಲ್ಲಿ ಯಾವುದೇ ನಾಯಕರ ಹೆಸರು ಅಂತಿಮವಾಗದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದು ಚರ್ಚೆಗೂ ಗ್ರಾಸವಾಗಿತ್ತು. ಈ ಮಧ್ಯೆ ಕಳೆದ ಎರಡು ವರ್ಷಗಳಿಂದ ವಾಜಿ ಸಚಿವ ಕೆ.ಎಂ.ಕೃಷ್ಣಾರೆಡ್ಡಿ ಅವರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪನೆ ವಾಡಿಕೊಂಡು ಸವಾಜಸೇವೆ ವಾಡುವ ಮೂಲಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಜಿ.ಎನ್.ವೇಣುಗೋಪಾಲ್ ಬಿಜೆಪಿ ಸೇರಿ ಅಭ್ಯರ್ಥಿಯಾಗುತ್ತಾರೆ ಎಂಬ ಸುದ್ದಿ ಕ್ಷೇತ್ರದಲ್ಲಿ ಹಲವು ದಿನಗಳಿಂದಲೂ ಕೇಳಿ ಬರುತ್ತಿತ್ತು. ಆದರೆ ಅಧಿಕೃತವಾಗಿರಲಿಲ್ಲ. ಈಗ ಅವರು ಬಿಜೆಪಿಗೆ ಬರುತ್ತಿರುವುದರಿಂದ ಅಭ್ಯರ್ಥಿ ಯಾರೆಂಬ ಕುತೂಹಲಕ್ಕೂ ತೆರೆ ಬಿದ್ದಂತಾಗಿದೆ.
    ಸೋಮವಾರ ರಾತ್ರಿ ಸಚಿವ ಡಾ.ಕೆ.ಸುಧಾಕರ್ ಅವರು ಜಿ.ಎನ್.ವೇಣುಗೋಪಾಲ್ ಮತ್ತಿತರ ಮುಖಂಡರ ಮತ್ತು ಅವರ ಬೆಂಬಲಿಗರ ಗುಂಪು ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ ನೇತೃತ್ವದಲ್ಲಿ ಚರ್ಚೆ ನಡೆಸಿ ಪಕ್ಷ ಸೇರ್ಪಡೆ ಮತ್ತು ಬೃಹತ್ ಸವಾವೇಶದ ಸಿದ್ಧತೆಗೆ ದಿನಾಂಕ ನಿಗದಿಪಡಿಸುವ ಮೂಲಕ ಚಿಂತಾಮಣಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಯ್ಕೆಯ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
    ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿಂತಾಮಣಿಯ 150 ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾದರು. ಇದೇ ವೇಳೆ, ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಸೇರ್ಪಡೆಯಾದ ಎಲ್ಲರಿಗೂ ಸಚಿವ ಕೆ.ಸುಧಾಕರ್ ಸ್ವಾಗತ ಕೋರಿದರು.

    23ಕ್ಕೆ ಸೇರ್ಪಡೆ:
    ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಜ.23ರಂದು ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಜಿ.ಎನ್.ವೇಣುಗೋಪಾಲ್ ಬಿಜೆಪಿಗೆ ಅಧಿಕೃತ ಸೇರ್ಪಡೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ೆಬ್ರವರಿಯಲ್ಲಿ ಚಿಂತಾಮಣಿಯಲ್ಲಿ ಬೃಹತ್ ಸವಾವೇಶ ನಡೆಸಲು ತಿರ್ಮಾನಿಸಲಾಗಿದೆ.

    ಚಿಂತಾಮಣಿಯಲ್ಲಿ ಸಮಾವೇಶ:
    ಚಿಂತಾಮಣಿ ನಗರದ ಬಾಗೇಪಲ್ಲಿ ವೃತ್ತದಿಂದ ಓಂಶಕ್ತಿ ವಾಲಾಧಾರಿಗಳ ಪ್ರಯಾಣಕ್ಕೆ ಚಾಲನೆ ನಂತರ ಸುದ್ದಿಗಾರರೊಂದಿಗೆ ವಾತನಾಡಿ ಜಿ.ಎನ್.ವೇಣುಗೋಪಾಲ್, ನಮ್ಮ ಬೆಂಬಲಿಗರ ಸಲಹೆ ಮತ್ತು ಸೂಚನೆಯಂತೆ ಬಿಜಪಿಗೆ ಸೇರ್ಪಡೆಯಾಗುತ್ತಿದ್ದೇನೆ. ಫೆಬ್ರವರಿ ಮೊದಲನೇ ವಾರದಲ್ಲಿ ಚಿಂತಾಮಣಿ ನಗರದಲ್ಲಿ 25 ಸಾವಿರಕ್ಕಿಂತ ಹೆಚ್ಚು ಕಾರ್ಯಕರ್ತರನ್ನು ಸೇರಿಸಿ ಬೃಹತ್ ಸವಾವೇಶದಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಭಿವೃದ್ಧಿ ಹಾಗೂ ಜನಪರ ಕಾರ್ಯಗಳೇ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ವಾಡುವ ನನಗೆ ಅನುಕೂಲವಾಗಲಿದೆ. ಬಿಜೆಪಿಯಿಂದ ಚುನಾವಣೆಗೆ ಟಿಕೆಟ್ ನೀಡದೇ ಇದ್ದ ಪಕ್ಷದಲ್ಲಿ ಚಿಂತಾಮಣಿ ವಿಧಾನಸಭೆ ಕ್ಷೇತ್ರದಲ್ಲಿ ಪಕ್ಷ ಬಲಪಡಿಸಲು ಶ್ರಮಿಸುತ್ತೇನೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts