ಹಗರಿಬೊಮ್ಮನಹಳ್ಳಿ: ತಾಲೂಕಿನ ಬೆಣ್ಣಿಕಲ್ಲು ಗ್ರಾಪಂಗೆ ನೂತನ ಅಧ್ಯಕ್ಷರಾಗಿ ಎನ್.ನಾಗವೇಣಿ ನಿಂಗಪ್ಪ, ಉಪಾಧ್ಯಕ್ಷರಾಗಿ ಲಕ್ಷ್ಮಮ್ಮ ಹೇಮಪ್ಪರವರು ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ, ತಹಸೀಲ್ದಾರ ಚಂದ್ರಶೇಖರ್ ಶಂಭಣ್ಣ ಗಾಳಿ ತಿಳಿಸಿದರು.
ಇದನ್ನೂ ಓದಿ: ಗ್ರಾಪಂಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಎರಡನೇ ಅವಧಿಗೆ ಮೀಸಲು ಪ್ರಕಟ
ನಿಕಟಪೂರ್ವ ಅಧ್ಯಕ್ಷ ಕೆ.ಶಿವರಾಜ್, ಉಪಾಧ್ಯಕ್ಷೆ ಎಚ್.ರೇಣುಕಮ್ಮರಿಂದ ತೆರವಾದ ಸ್ಥಾನಗಳಿಗೆ ಮಂಗಳವಾರ ಚುನಾವಣೆ ಜರುಗಿತು. ಸಾಮಾನ್ಯ ಮಹಿಳೆ ಮೀಸಲಾತಿ ಅಧ್ಯಕ್ಷೆ ಸ್ಥಾನಕ್ಕೆ ಗ್ರಾಪಂ ಸದಸ್ಯರಾದ ಎನ್.ನಾಗವೇಣಿ ನಿಂಗಪ್ಪ, ಕೋವಿ ನಾಗವೇಣಿ ಪ್ರಕಾಶ್ ನಾಮಪತ್ರ ಸಲ್ಲಿಸಿದ್ದರು.
ಎಸ್ಟಿ ಮೀಸಲಾತಿ ಉಪಾಧ್ಯಕ್ಷ ಸ್ಥಾನಕ್ಕೆ ಲಕ್ಷ್ಮವ್ವ ಹೇಮಪ್ಪ ಒಂದು ನಾಮಪತ್ರ ಸಲ್ಲಿಕೆಯಾಗಿತ್ತು. ಉಪಾಧ್ಯಕ್ಷೆ ಸ್ಥಾನಕ್ಕೆ ಪ್ರತಿಸ್ಪರ್ಧಿ ಇಲ್ಲದ ಕಾರಣ ಅವಿರೋಧವಾಗಿ ಆಯ್ಕೆಯಾದರು. ಇಬ್ಬರು ನಾಮಪತ್ರ ಸಲ್ಲಿಸಿದ್ದ ಅಧ್ಯಕ್ಷ ಸ್ಥಾನಕ್ಕೆ ಸದಸ್ಯರಿಂದ ಮತ ಚಲಾಯಿಸಲಾಯಿತು.
ಒಟ್ಟು 15 ಸದಸ್ಯರ ಸ್ಥಾನದಲ್ಲಿ ಕೋವಿ ನಾಗವೇಣಿ 6 ಮತಗಳನ್ನು ಪಡೆದರೇ, ಎನ್.ನಾಗವೇಣಿ ನಿಂಗಪ್ಪ 9 ಮತಗಳನ್ನು ಪಡೆದು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
ಗ್ರಾಪಂ ಸದಸ್ಯರಾದ ಬಡಿಗೇರ ಭರಮಪ್ಪ, ರತ್ನಮ್ಮ, ಹುಸೇನ್ ಭಾಷಾ, ಅಂಜಿನಪ್ಪ ಹಳ್ಳಿ, ಕೋವಿ ನಾಗವೇಣಿ, ನಾಗಪ್ಪ ದಾಸರ, ಎಂ.ಎಂ.ಲಲಿತಮ್ಮ, ಚಂದ್ರಮ್ಮ, ಎಚ್.ಕರಿಬಸಪ್ಪ, ಬಡಿಗೇರ ರೇಣುಕಮ್ಮ, ಪಿಡಿಓ ಮಲ್ಲೇಶ್ ನಾಯ್ಕ, ಗ್ರಾಪಂ ಸಿಬ್ಬಂದಿ ಲಕ್ಷ್ಮಣ ಇದ್ದರು.