More

    ಒಳಮೀಸಲು ವಿರೋಧಿಸಿ ಮತದಾನ ಬಹಿಷ್ಕಾರ

    ಹನುಮಸಾಗರ: ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಸಮೀಪದ ವೆಂಕಟಾಪುರ ತಾಂಡಾ ಜನರು ವಿಧಾನಸಭಾ ಚುನಾವಣೆ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.


    ತಾಂಡಾದ ದುರ್ಗಾದೇವಿ ದೇವಸ್ಥಾನದ ಬಳಿ ಅಳವಡಿಸಿದ ಬ್ಯಾನರ್‌ನಲ್ಲಿ ‘ಹಮಾರೋ ತಾಂಡೋ ಹಮಾರಾ ರಾಜ್’ ವಿಧಾನಸಭಾ ಚುನಾವಣೆ ಮತದಾನ ಬಹಿಷ್ಕಾರ ಎಂದು ಬರೆಸಿದ್ದಾರೆ. ಒಳ ಮೀಸಲಾತಿಯನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ತಾಂಡಾಕ್ಕೆ ರಾಜಕೀಯ ಮುಖಂಡರ ಪ್ರವೇಶ ಮಾಡುವಂತಿಲ್ಲ. ಸಮುದಾಯದ ಜನರಿಗೆ ನ್ಯಾಯ ನೀಡಬೇಕು. ಯಾವುದೇ ಪಕ್ಷದ ಕಾರ್ಯಕರ್ತರು ಮತ ಕೇಳುವ ಅರ್ಹತೆ ಕಳೆದುಕೊಂಡಿದ್ದಾರೆ ಎಂದು ತಾಂಡಾದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


    ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಎಲ್ಲರೂ ಪಕ್ಷಾತೀತವಾಗಿ ವಿರೋಧಿಸಲಾಗುವುದು. ಒಗ್ಗಟ್ಟಿನಿಂದ ಚುನಾವಣೆ ಮತದಾನ ಬಹಿಷ್ಕರಿಸಲು ತೀರ್ಮಾನಿಸಲಾಗಿದೆ. ಮತದಾನ ಬಹಿಷ್ಕಾರ ಮಾಡುವಂತೆ ನಮ್ಮ ಗ್ರಾಮದ ಇತರ ಸಮುದಾಯದವರಿಗೆ ಮನವಿ ಮಾಡಿಕೊಳ್ಳಲಾಗುವುದು. ಅವರಿಂದ ಬೆಂಬಲ ಸಿಗುವ ವಿಶ್ವಾಸವಿದೆ ಎಂದರು.


    ತಾಂಡಾ ನಿವಾಸಿಗಳಾದ ತುಳಚಪ್ಪ ಪೂಜಾರ, ಬಸವರಾಜ ರಾಠೋಡ, ತುಕಾರಾಮ್ ಕಮತರ, ರಾಮು ಪೂಜಾರ, ಶಿವಪ್ಪ ನಾಯ್ಕ, ರಾಕೂರ ನಾಯ್ಕ, ರಾಮಲಿಂಗಪ್ಪ ಪೂಜಾರ, ಮೋತಿಲಾಲ್ ಪೂಜಾರ, ಮುತ್ತಪ್ಪ ನಾಯ್ಕ, ವೆಂಕಟೇಶ ನಾಯ್ಕ, ಲಾಲಪ್ಪ ನಾಯ್ಕ, ದೇವಕವ್ವ ಕಮತರ, ಉದಯ ಕಮತರ, ಸೋಮಲೇವ್ವ ನಾಯ್ಕ, ದೇವಪ್ಪ ನಾಯ್ಕ ಇತರರಿದ್ದರು.


    ತಾಲೂಕಿನ ಎಲ್ಲ ತಾಂಡಾಗಳಿಗೆ ಸೋಮವಾರ ಭೇಟಿ ನೀಡಲಾಗುವುದು. ಲಂಬಾಣಿ ಸಮುದಾಯದ ಮುಖಂಡರ ಜತೆ ಸಭೆ ನಡೆಸಿ, ಮತದಾನದಿಂದ ದೂರ ಉಳಿಯದಂತೆ ಮನವೊಲಿಸಲಾಗುವುದುಕೆ.ರಾಘವೇಂದ್ರರಾವ್, ತಹಸೀಲ್ದಾರ್, ಕುಷ್ಟಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts