More

    ವಾಹನಗಳಿಗೆ ದಂಡ ವಿಧಿಸುವುದನ್ನು ನಿಲ್ಲಿಸಿ

    ಕಂಪ್ಲಿ: ಪಟ್ಟಣದ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್‌ಬಿಐ)ಶಾಖೆಗೆ ಬರುವ ಗ್ರಾಹಕರು ಬ್ಯಾಂಕಿನ ಮುಂದೆ ನಿಲ್ಲಿಸುವ ದ್ವಿಚಕ್ರವಾಹನಗಳಿಗೆ ಪೊಲೀಸರು 500ರೂ.ಗಳಿಂದ 1,000ರೂ.ವರೆಗೆ ದಂಡ ವಿಧಿಸುತ್ತಿರುವುದನ್ನು ಪುರಸಭೆ ಸದಸ್ಯ ಸಿ.ಆರ್.ಹನುಮಂತ ಖಂಡಿಸಿದ್ದಾರೆ.

    ಇದನ್ನೂ ಓದಿ: ಪಡಿತರ ಸಾಗಣೆ ವಾಹನಗಳಿಗೆ ಜಿಪಿಎಸ್ ಅಳವಡಿಸಿ

    ಪತ್ರಕರ್ತರೊಂದಿಗೆ ಶನಿವಾರ ಮಾತನಾಡಿ, ಬ್ಯಾಂಕಿಗೆ ಬರುವ ಗ್ರಾಹಕರು ಬ್ಯಾಂಕಿನ ಮುಂದೆ ವಾಹನಗಳನ್ನು ನಿಲ್ಲಿಸಿದಾಗ ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತಾದೆ. ಇದಕ್ಕೆ ಪುರಸಭೆ ಹಾಗೂ ಪೊಲೀಸ್ ಇಲಾಖೆ ಪರ್ಯಾಯ ವ್ಯವಸ್ಥೆ ಕಲ್ಪಿಸದೇ, ವಾಹನಗಳ ಮಾಲೀಕರಿಗೆ ದಂಡ ವಿಧಿಸುವುದು ಸರಿಯಲ್ಲ ಎಂದರು.

    ಎಸ್‌ಬಿಎಮ್ ಮತ್ತು ಎಸ್‌ಬಿಎಚ್ ವಿಲೀನಗೊಂಡು ಎಸ್‌ಬಿಐ ಬ್ಯಾಂಕ್ ರೂಪುಗೊಂಡಿದ್ದು, ಈ ಎಲ್ಲ ಬ್ಯಾಂಕ್ ಗ್ರಾಹಕರು ಎಸ್‌ಬಿಐಗೆ ನಿತ್ಯದ ಹಣಕಾಸು, ಗೃಹಲಕ್ಷ್ಮಿ ಯೋಜನೆ, ಪಡಿತರ ಅಕ್ಕಿ ನಗದು ಸೇರಿ ನಾನಾ ವ್ಯವಹಾರಗಳಿಗೆ ಬರುವುದರಿಂದ ಸದಾ ಜನಜಂಗುಳಿಯಿಂದ ಕೂಡಿರುತ್ತದೆ.

    ದ್ವಿಚಕ್ರವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕ್ ಮುಂಭಾಗದ ರಸ್ತೆ ಪಕ್ಕದಲ್ಲಿ ನಿಲ್ಲಿಸುವುದು ಸಾಮಾನ್ಯವಾಗಿದೆ. ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೆ ದಂಡ ವಿಧಿಸುವುದನ್ನು ಪೊಲೀಸರು ಸ್ಥಗಿತಗೊಳಿಸಬೇಕು. ಇಲ್ಲವಾದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

    ಗ್ರಾಹಕರು ಬ್ಯಾಂಕಿನ ಮುಂದೆ ವಾಹನ ನಿಲ್ಲಿಸುವುದಕ್ಕೆ ತಕಾರಾರು ಇಲ್ಲ. ವಾಹನ ಹೋಗದಂತೆ ರಸ್ತೆಯನ್ನು ಅತಿಕ್ರಮಿಸಿ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಗ್ರಾಹಕರು ವಾಹನಗಳನ್ನು ಒಂದರ ಪಕ್ಕ ಒಂದು ನಿಲ್ಲಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡುವಲ್ಲಿ ಸ್ವಯಂ ಜಾಗೃತಿ ತೋರಬೇಕು.
    ಕೆ.ಬಿ.ವಾಸುಕುಮಾರ್, ಪೊಲೀಸ್ ಇನ್ಸ್‌ಪೆಕ್ಟರ್

    ವಾಹನ ನಿಲುಗಡೆಗೆ ಅವಕಾಶ ಒದಗಿಸಿಕೊಡುವುದು ಬ್ಯಾಂಕಿನ ಕರ್ತವ್ಯವಾಗಿದೆ. ವಾಹನ ನಿಲ್ಲಿಸುವುದಕ್ಕೂ ಪೊಲೀಸರು ದಂಡ ವಿಧಿಸುವುದಕ್ಕು ಪುರಸಭೆಗೆ ಸಂಬಂಧವಿಲ್ಲ.
    ಕೆ.ದುರುಗಣ್ಣ, ಪುರಸಭೆ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts