More

    ಇದು ಬರೀ ಹೆದ್ದಾರಿಯಲ್ಲ, ‘ಮದ್ಯ’ರಸ್ತೆ: ಆಲ್ಕೋಹಾಲ್​ಗಾಗಿ ಮುಗಿಬಿದ್ದ ಪಾನಪ್ರಿಯರು..

    ತಮಿಳುನಾಡು: ಅಪಘಾತವನ್ನು ತಡೆಯುವ ನಿಟ್ಟಿನಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು ಎಂದು ಕಾನೂನೇ ಇದೆ. ಆದರೆ ಇಲ್ಲೊಂದು ಕಡೆ ಮದ್ಯವನ್ನು ತುಂಬಿದ್ದ ವಾಹನವೇ ಪಲ್ಟಿಯಾಗಿದ್ದು, ಜನರು ಆಲ್ಕೋಹಾಲ್​ಗಾಗಿ ಮುಗಿಬಿದ್ದ ಪ್ರಕರಣವೂ ನಡೆದಿದೆ.

    ಹೀಗೆ ಅಪಘಾತಕ್ಕೆ ಒಳಗಾದ ವಾಹನದಲ್ಲಿ ಸುಮಾರು ಹತ್ತು ಲಕ್ಷ ರೂಪಾಯಿ ಮೌಲ್ಯದ ಮದ್ಯದ ಬಾಟಲ್​ಗಳು ಇದ್ದವು. ತಮಿಳುನಾಡಿನ ಮದುರೈ ಪ್ರದೇಶದ ವಿರಗನೂರು ಎಂಬಲ್ಲಿ ಈ ಅಪಘಾತ ಸಂಭವಿಸಿದೆ.

    ಕೇರಳದ ಮನಲೂರ್ ಎಂಬಲ್ಲಿ ಆಲ್ಕೋಹಾಲ್ ಲೋಡ್ ಮಾಡಿಸಲಾಗಿದ್ದು, ಅಲ್ಲಿಂದ ಹೊರಟಿದ್ದ ವಾಹನ ಮದುರೈ ಬಳಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದ್ದು, ಮಗುಚಿ ಬಿದ್ದಿದೆ. ಈ ವೇಳೆ ವಾಹನದಲ್ಲಿದ್ದ ಮದ್ಯದ ಬಾಟಲ್​ಗಳು ಬಿದ್ದು ರಸ್ತೆಯಲ್ಲಿ ಚೆಲ್ಲಾಪಿಲ್ಲಿ ಆಗಿವೆ.

    ಹೆದ್ದಾರಿ ತುಂಬಾ ಚೆಲ್ಲಾಪಿಲ್ಲಿ ಆಗಿದ್ದ ಮದ್ಯದ ಬಾಟಲ್​ಗಳನ್ನು ಎತ್ತಿಕೊಳ್ಳಲು ಜನರು ಮುಗಿಬಿದ್ದ ಪರಿಣಾಮವಾಗಿ ಸ್ಥಳದಲ್ಲಿ ಕೆಲಕಾಲ ಜನಜಂಗುಳಿ ಜತೆಗೆ ತಳ್ಳಾಟವೂ ನಡೆಯಿತು. ಅಲ್ಲದೆ ಕೆಲವು ಸಮಯ ಸಂಚಾರಕ್ಕೆ ಅಡ್ಡಿ ಕೂಡ ಉಂಟಾಯಿತು.

    ಇದು ಬರೀ ಹೆದ್ದಾರಿಯಲ್ಲ, 'ಮದ್ಯ'ರಸ್ತೆ: ಆಲ್ಕೋಹಾಲ್​ಗಾಗಿ ಮುಗಿಬಿದ್ದ ಪಾನಪ್ರಿಯರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts