More

    Vegetarian Protein Diet: ನೀವು ಸಸ್ಯಹಾರಿಗಳಾ? ಈ ಆಹಾರಗಳಲ್ಲಿದೆ ಅತ್ಯಧಿಕ ಪ್ರೋಟೀನ್

    ಎಲ್ಲರಿಗೂ ತಿಳಿದಿರುವಂತೆ ಸಸ್ಯಾಹಾರಿಗಳು ಮಾಂಸ ತಿನ್ನಲು ಇಷ್ಟಪಡುವುದಿಲ್ಲ. ಇದರಿಂದ ಅನೇಕ ಜನರಲ್ಲಿ ಪ್ರೋಟೀನ್ ಕೊರತೆ ಉಂಟಾಗಿ ಆಗಾಗ ಗಂಭೀರ ಆರೋಗ್ಯ ಸಮಸ್ಯೆಗಳಿಗೂ ಒಳಗಾಗುತ್ತಾರೆ. ಆದ್ದರಿಂದ ಪ್ರೋಟೀನ್ ಕೊರತೆಯಿಂದ ಬಳಲುತ್ತಿರುವವರು ಕೆಲವು ವಿಶೇಷ ಆಹಾರವನ್ನು ಪ್ರತಿನಿತ್ಯ ಸೇವಿಸಬೇಕು. ಇದರಿಂದ ದೇಹದಲ್ಲಿನ ಪ್ರೊಟೀನ್ ಕೊರತೆಯನ್ನು ನಿವಾರಿಸುವುದಲ್ಲದೆ, ಗಂಭೀರ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುತ್ತದೆ.

    ದೇಹದಲ್ಲಿ ಸ್ನಾಯು ಅಂಗಾಂಶವನ್ನು ಬಲಪಡಿಸುವಲ್ಲಿ ಪ್ರೋಟೀನ್​ಗಳು ಪ್ರಮುಖ ಪಾತ್ರವಹಿಸುತ್ತವೆ. ಇದರ ಜೊತೆಗೆ ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸುತ್ತದೆ. ಸೋಂಕಿಗೆ ಒಳಗಾದವರಲ್ಲಿಯೂ ಪ್ರೋಟೀನ್ ಪ್ರಮುಖ ಪಾತ್ರ ವಹಿಸುತ್ತದೆ. ಮೆದುಳು ಮತ್ತು ಯಕೃತ್ತಿನ ಸಮಸ್ಯೆಗಳನ್ನು ತಡೆಯಲು ಪ್ರೋಟೀನ್‌ಗಳು ಸಹಾಯ ಮಾಡುತ್ತವೆ. ಹಾಗಾಗಿ ಪ್ರೋಟೀನ್​ಯುಕ್ತ ಆಹಾರಗಳನ್ನು ಪ್ರತಿದಿನ ಸೇವಿಸುವುದು ಉತ್ತಮ ಎನ್ನುತ್ತಾರೆ ಆರೋಗ್ಯ ತಜ್ಞರು.

    ಸಸ್ಯಾಹಾರಿಗಳು ಈ ಆಹಾರಗಳನ್ನು ಸೇವಿಸಬೇಕು

    ಪ್ರೋಟೀನ್ ಅಂಶ ಮಾಂಸಾಧಾರಿತ ಆಹಾರಗಳಲ್ಲಿ ಮಾತ್ರವಲ್ಲದೆ ಹಸಿರು ತರಕಾರಿಗಳು ಮತ್ತು ಇತರ ಆಹಾರಗಳಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಸಸ್ಯಾಹಾರಿಗಳು ಪ್ರತಿದಿನ ಈ ಕೆಳಗಿನ ಆಹಾರಗಳಿಂದ ಪ್ರೋಟೀನ್ ಪಡೆಯುವ ಮೂಲಕ ದೀರ್ಘಕಾಲೀನ ಪರಿಣಾಮಗಳನ್ನು ತಪ್ಪಿಸಬಹುದಾಗಿದೆ.

    ಹೆಚ್ಚು ಪ್ರೋಟೀನ್ ಹೊಂದಿರುವ ತರಕಾರಿಗಳಲ್ಲಿ ಕೋಸುಗಡ್ಡೆ, ಪಾಲಾಕ್​, ಪಲ್ಲೆಹೂವು, ಸಿಹಿಗೆಣಸು, ಆಲೂಗಡ್ಡೆ ಮತ್ತು ಬ್ರಸೆಲ್ಸ್ ಮೊಗ್ಗುಗಳು ಸೇರಿವೆ.

    ಸಸ್ಯ ಆಧಾರಿತ ಆಹಾರಗಳು

    ಸಸ್ಯ ಆಧಾರಿತ ಆಹಾರಗಳು ಕೂಡ ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಅವುಗಳೆಂದರೆ, ಹುರುಳಿ ಕಾಳುಗಳು, ಕಾಬೂಲ್​ ಕಡಲೆ, ಚಿಯಾ ಬೀಜಗಳು, ಎಡಮಾಮ್ ಬೀನ್ಸ್ (ಸೋಯಾ ಬೀನ್ಸ್), ತೋಫು, ಕಡಲೆಕಾಯಿ, ಕುಂಬಳಕಾಯಿ ಬೀಜಗಳು, ಕಡಲೆ, ಬೇಳೆ ಕಾಳುಗಳು ಮತ್ತು ಬಾದಾಮಿ.

    ಮೊಸರು ಉತ್ತಮ 

    ಮೊಸರಿನಲ್ಲೂ ಕೂಡ ಹೆಚ್ಚಿನ ಪ್ರೋಟೀನ್​ ಇರುವುದರಿಂದ ಸಸ್ಯಾಹಾರಿಗಳು ನಿಯಮಿತವಾಗಿ ಇದನ್ನು ಸೇವನೆ ಮಾಡಬಹುದು. (ಏಜೆನ್ಸೀಸ್​)

    ಏಷ್ಯಾಕಪ್​ನಲ್ಲಿ ಇಂದು ಭಾರತ-ಪಾಕ್​ ಸಮರ; ಕಾಡುತ್ತಿದೆ ಮಳೆ ಭೀತಿ

    video: ಹ್ಯಾಟ್ರಿಕ್ ಸಿಕ್ಸರ್ ಬಾರಿಸಿ ಸೂಪರ್ ಓವರ್‌ನಲ್ಲಿ ತಂಡವನ್ನು ಗೆಲ್ಲಿಸಿದ ರಿಂಕು ಸಿಂಗ್

    ಪ್ರೀತಿ, ಜಗಳದ ನಡುವಿನ ಖುಷಿ: ಸಿನಿಮಾ ವಿಮರ್ಶೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts