More

    ಲಾರಿ ಮುಷ್ಕರದಿಂದ ತರಕಾರಿ ಮಾರಾಟಕ್ಕೆ ಅಡಚಣೆ

    ಗುಂಡ್ಲುಪೇಟೆ: ಕಳೆದ ಎರಡು ದಿನಗಳಿಂದ ಲಾರಿ ಚಾಲಕರು ಮುಷ್ಕರ ನಡೆಸುತ್ತಿರುವುದರಿಂದ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟಕ್ಕೆ ಅಡಚಣೆಯಾಗಿದೆ.

    ಪಟ್ಟಣದ ಎಪಿಎಂಸಿ ಮಾರುಕಟ್ಟೆಯ ಆವರಣ ಹಾಗೂ ತೆರಕಣಾಂಬಿಯ ತರಕಾರಿ ಹರಾಜು ಕಟ್ಟೆಯಲ್ಲಿ ತರಕಾರಿ ಸಂಗ್ರಹ ಜಾಸ್ತಿಯಾಗಿದೆ. ಸುತ್ತಮುತ್ತಲಿನ ಗ್ರಾಮಗಳ ರೈತರು ಉತ್ಪನ್ನಗಳನ್ನು ಇಲ್ಲಿಗೆ ತಂದು ಮಾರಾಟ ಮಾಡುತ್ತಾರೆ.

    ನೆರೆ ರಾಜ್ಯ ಕೇರಳ ಹಾಗೂ ತಮಿಳುನಾಡಿನಿಂದ ವ್ಯಾಪಾರಿಗಳು ಬಂದು ತರಕಾರಿ ಖರೀದಿಸಿ ಕೊಂಡೊಯ್ಯುತ್ತಾರೆ. ಎರಡು ದಿನಗಳಿಂದ ಲಾರಿ ಚಾಲಕರ ಮುಷ್ಕರದಿಂದ ವ್ಯಾಪಾರ, ವಹಿವಾಟಿನಲ್ಲಿ ತೊಂದರೆ ಉಂಟಾಗಿದೆ.

    ಖರೀದಿಸಿದ ವಸ್ತುಗಳನ್ನು ಟೆಂಪೋ ಅಥವ ಸಣ್ಣ ವಾಹನಗಳಲ್ಲಿ ಕೊಂಡೊಯ್ಯಬೇಕಾಗಿದೆ. ಒಂದು ಲಾರಿಯಲ್ಲಿ ಸಾಗಿಸುತ್ತಿದ್ದ ಪದಾರ್ಥಗಳನ್ನು ಹತ್ತಾರು ಟೆಂಪೋಗಳಲ್ಲಿ ಸಾಗಿಸುವಂತಾಗಿದೆ. ಪ್ರತಿ ದಿನ 40-45 ಲಾರಿಗಳು ಇಲ್ಲಿಂದ ತೆರಳುತ್ತಿದ್ದವು. ಮುಷ್ಕರದಿಂದ ಲಘು ವಾಹನಗಳನ್ನು ಅವಲಂಬಿಸಿ ಸರಕು ಸಾಗಿಸಬೇಕಾಗಿದೆ.

    ಮಾರುಕಟ್ಟೆಗಳಲ್ಲಿ ತರಕಾರಿ ಸಂಗ್ರಹ ಹೆಚ್ಚಾಗುತ್ತಿದ್ದು, ಮುಷ್ಕರ ಮುಗಿಯುವವರೆಗೆ ತರಕಾರಿಗಳನ್ನು ಮಂಡಿಗಳಿಗೆ ತರದಂತೆ ವ್ಯಾಪಾರಿಗಳು ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts