More

    ತರಕಾರಿ, ಮೊಟ್ಟೆ ಜವಾಬ್ದಾರಿ ಮುಖ್ಯ ಅಡುಗೆದಾರರಿಗೇ ವಹಿಸುವಂತೆ ಅಕ್ಷರ ದಾಸೋಹ ನೌಕರರ ಸಂಘ ಆಗ್ರಹ

    ಸಿಂಧನೂರು: ಬಿಸಿಯೂಟ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘದ ತಾಲೂಕು ಸಮಿತಿ ತಾಪಂ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿತು.

    ಪ್ರತಿ ತಿಂಗಳು ರೇಷನ್ ವಿತರಿಸಬೇಕು. ಸಮಯಕ್ಕೆ ಸರಿಯಾಗಿ ಗೌರವಧನ, ಇತರ ಹಣ ನೀಡಬೇಕು. ಕೆಲ ಶಾಲೆಗಳಲ್ಲಿ ಮುಖ್ಯಶಿಕ್ಷಕರೇ ತರಕಾರಿ ಹಾಗೂ ಮೊಟ್ಟೆ ಜವಾಬ್ದಾರಿ ನಿರ್ವಹಿಸುತ್ತಿದ್ದು ಅದನ್ನು ಮುಖ್ಯ ಅಡುಗೆದಾರರಿಗೆ ನೀಡಲು ಕ್ರಮಕೈಗೊಳ್ಳಬೇಕು. ಮುಖ್ಯಶಿಕ್ಷಕ ಹಾಗೂ ಮುಖ್ಯ ಅಡುಗೆದಾರರ ಜಂಟಿ ಸಭೆ ಕರೆಯಬೇಕು. 60 ವರ್ಷ ಆಧರಿಸಿ ನಿವೃತ್ತರಾದವರಿಗೆ ಒಂದು ಲಕ್ಷ ರೂ. ಇಡುಗಂಟು ನೀಡಬೇಕು. ಕುಟುಂಬ ಸದಸ್ಯರಿಗೆ ಅದೇ ಉದ್ಯೋಗ ನೀಡಬೇಕು. ನಿವೃತ್ತಿ ಪಿಂಚಣಿ ನೀಡಬೇಕೆಂದು ಆಗ್ರಹಿಸಿದರು.

    ತಾಲೂಕು ಸಮಿತಿ ಗೌರವಾಧ್ಯಕ್ಷ ಶೇಕ್ಷಖಾದ್ರಿ, ಜಿಲ್ಲಾಧ್ಯಕ್ಷೆ ರೇಣುಕಮ್ಮ, ತಾಲೂಕು ಅಧ್ಯಕ್ಷೆ ವಿಶಾಲಾಕ್ಷಮ್ಮ, ಕಾರ್ಯದರ್ಶಿ ಶರಣಮ್ಮ ಪಾಟೀಲ್, ವಾಣಿ ಎಸ್.ಖಾದ್ರಿ, ದೇವಮ್ಮ, ಸಿದ್ದಮ್ಮ, ರೇಣುಕಮ್ಮ ಕಣ್ಣೂರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts