More

    ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿನ ನಾಲ್ಕು ದಾನಗಳ ಪೈಕಿ ಇದು ಅತ್ಯಂತ ಶ್ರೇಷ್ಠ: ವಿಜಯವಾಣಿ ಕ್ಲಬ್​ನಲ್ಲಿ ಇದೀಗ ಡಾ.ವೀರೇಂದ್ರ ಹೆಗ್ಗಡೆ

    ಬೆಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಇದೇ ಮೊದಲ ಸಲ ವಿಜಯವಾಣಿ ಕ್ಲಬ್​ನಲ್ಲಿ ಮಾತನಾಡುತ್ತಿದ್ದು, ಕ್ಷೇತ್ರ ಹಾಗೂ ವಿವಿಧ ವಿಚಾರಗಳ ಕುರಿತು ಹತ್ತು ಹಲವು ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದಾರೆ.

    ಹೆಗ್ಗೆಡೆಯವರು ಇಲ್ಲಿ ಧರ್ಮದೇವತೆಗಳ ಮಾಧ್ಯಮ ಎಂಬುದಾಗಿ ತಮ್ಮ ಬಗ್ಗೆ ಹೇಳಿಕೊಂಡಿರುವ ಧರ್ಮಾಧಿಕಾರಿಯವರು, ಕ್ಷೇತ್ರದಲ್ಲಿನ ನಾಲ್ಕು ದಾನಗಳ ಕುರಿತು ಹೆಗ್ಗಡೆಯವರು ಧರ್ಮದೇವತೆಗಳಿಗೆ ಪ್ರತಿ ತಿಂಗಳು ವರದಿಯನ್ನೂ ಒಪ್ಪಿಸುವ ಪದ್ಧತಿ ಇಲ್ಲಿದೆ ಎನ್ನುತ್ತ ಕ್ಷೇತ್ರದಲ್ಲಿನ ನಾಲ್ಕು ವಿಧದ ದಾನಗಳ ಕುರಿತು ವಿವರಿಸಿದರು.

    ಶ್ರೀಕ್ಷೇತ್ರದಲ್ಲಿ ನಾಲ್ಕು ದಾನಗಳು ಪ್ರಮುಖವಾದದ್ದು. ಅದರಲ್ಲಿ ಮೊದಲನೆಯದ್ದು ಅನ್ನದಾನ. ಅನ್ನದಾನ ಎಂದರೆ ಅದು ಬಡವರಿಗೆ ದಾಸೋಹವಲ್ಲ, ಭಕ್ತರಿಗೆ ದಾಸೋಹ. ಎರಡನೆಯದ್ದು ವಿದ್ಯಾದಾನ, ಇದೊಂಥರ ಜ್ಞಾನದಾಹ. ಇದರಲ್ಲಿ ಯಕ್ಷಗಾನ ಹಾಗೂ ಸಾಂಸ್ಕೃತಿಕ ಸೇರಿ ಎಲ್ಲವೂ ಬರುತ್ತವೆ. ಮೂರನೆಯದ್ದು ಔಷಧ ದಾನ. ಮಂಜುನಾಥ ಸ್ವಾಮಿಯೇ ಸ್ವತಃ ನಂಜುಂಡ. ಇದರಲ್ಲಿ ಪೂರ್ವಜರ ಶಾಪದೋಷ ಪರಿಹಾರ, ದೈಹಿಕ-ಮಾನಸಿಕ ತೊಂದರೆ ನಿವಾರಣೆ, ಭೂತಪ್ರೇತಗಳ ಉಚ್ಚಾಟನೆ ಮುಂತಾದವು ಬರುತ್ತವೆ. ಅದರ ಜತೆಗೆ ವೈದ್ಯಕೀಯ, ಆಯುರ್ವೇದ, ಪ್ರಕೃತಿ ಚಿಕಿತ್ಸೆ ಕೂಡ ಬರುತ್ತವೆ. ಇನ್ನು ನಾಲ್ಕನೆಯದ್ದು ಅಭಯದಾನ, ಇದು ತುಂಬಾ ಶ್ರೇಷ್ಠವಾದದ್ದು. ಇದರಲ್ಲಿ ಪರಿಹಾರ-ಮಾರ್ಗದರ್ಶನ ಬರುತ್ತವೆ. ಜನರಿಗೆ ನಾನಾ ಸಮಸ್ಯೆಗಳಿಗೆ ಪರಿಹಾರ ಸಾಂತ್ವನ ನೀಡಲಾಗುತ್ತದೆ. ಇದರ ಅಂಗವಾಗಿಯೇ ಗ್ರಾಮಾಭಿವೃದ್ಧಿ ಇತ್ಯಾದಿ ಬರುತ್ತವೆ. ಇದು ಕ್ಷೇತ್ರದ ವಿಶೇಷ, ಇದು ನಿತ್ಯದ ಕರ್ತವ್ಯ ಎಂದು ಹೆಗ್ಗಡೆಯವರು ಹೇಳಿದರು.

    ಅವರ ಮಾತನ್ನು ಇದೀಗ ನೀವು ಕೇಳಬಹುದು, ಅವರೊಂದಿಗೆ ಮಾತನಾಡಬಹುದು. ಸಂವಾದಕ್ಕೆ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್​ ಮಾಡಿ..

    https://www.clubhouse.com/join/vijayavani/4xrpXxLt/PbykVWDV

    ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿನ ನಾಲ್ಕು ದಾನಗಳ ಪೈಕಿ ಇದು ಅತ್ಯಂತ ಶ್ರೇಷ್ಠ: ವಿಜಯವಾಣಿ ಕ್ಲಬ್​ನಲ್ಲಿ ಇದೀಗ ಡಾ.ವೀರೇಂದ್ರ ಹೆಗ್ಗಡೆ

    ಬಿಬಿಎಂಪಿ ಬೇಜವಾಬ್ದಾರಿಗೆ ಬಾಲಕ ಬಲಿ; ಪಾಲಿಕೆ ಉದ್ಯಾನದ ಹೊಂಡಕ್ಕೆ ಬಿದ್ದು 9 ವರ್ಷದ ಹುಡುಗ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts