More

    ಕಾಶಿ ಜಗದ್ಗುರುಗಳ ಸಾನಿಧ್ಯದಲ್ಲಿ ವೀರಶೈವ ಮಠಾಧೀಶರ ನಿಯೋಗ ಅಯೋಧ್ಯೆಗೆ

    ವಾರಾಣಸಿ : ಬಹುನಿರೀಕ್ಷಿತ ಅಯೋಧ್ಯೆ ಶ್ರೀರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕಾಗಿ ವೀರಶೈವ ಮಠಾಧೀಶರ ನಿಯೋಗವು ಇಂದು ಕಾಶೀ ಪೀಠದ ಜಂಗಮವಾಡಿ ಮಠದಿಂದ ಪ್ರಯಾಣ ಬೆಳೆಸಿದೆ.

    ಕಾಶಿ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಅವರ ನೇತೃತ್ವದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಆಂದ್ರಪ್ರದೇಶದ, ತೆಲಂಗಾಣ ರಾಜ್ಯಗಳಿಂದ ವಿವಿಧ ಮಠಾಧೀಶರು ಕಾಶಿಗೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಕಾಶಿ ಜಗದ್ಗುರುಗಳು, ಉತ್ತರಪ್ರದೇಶದ ಧಾರ್ಮಿಕ ಕ್ಷೇತ್ರಗಳಲ್ಲಿ ಕಾಶೀ, ಪ್ರಯಾಗ ಮತ್ತು ಅಯೋಧ್ಯೆ ಪ್ರಮುಖವಾದವು. ಸಾಮಾನ್ಯವಾಗಿ ಕಾಶಿಗೆ ಬಂದ ಯಾತ್ರಿಕರು ಪ್ರಯಾಗಕ್ಕಷ್ಟೆ ಹೋಗುತ್ತಿದ್ದರು. ಇನ್ನು ಮುಂದೆ ಅಯೋಧ್ಯೆಗೆ ಅವಶ್ಯವಾಗಿ ಹೋಗುವಂತಾಗಿದೆ. ದೇಶದ ವಿವಿಧ ಪ್ರಾಂತ್ಯದ ವೀರಶೈವ ಮಠಾಧೀಶರು ಅಯೋಧ್ಯೆಗೆ ಹೋಗುವುದಕ್ಕಾಗಿ ಇಂದು ಕಾಶಿಗೆ ಆಗಮಿಸಿದ್ದಾರೆ. 22ರಂದು ಶ್ರೀರಾಮನ ಬಾಲ ಮೂರ್ತಿ ಪ್ರತಿಷ್ಠಾಪನೆಯಲ್ಲಿ ಎಲ್ಲರೂ ಒಟ್ಟಿಗೆ ಭಾಗಿಯಾಗಲಿದ್ದೇವೆ ಎಂದರು.

    ಕೊಟ್ಟೂರು ಚಾನುಕೋಟಿ ಮಠದ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬೆಂಗಳೂರು ವಿಭೂತಿಪುರಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಚನ್ನಗಿರಿ ವಿರಕ್ತಮಠದ ಡಾ. ಜಯಚಂದ್ರ ಸ್ವಾಮೀಜಿ, ಗುಬ್ಬಿ ವಿಭವ ವಿದ್ಯಾಶಂಕರ ದೇಶಿಕೇಂದ್ರ ಸ್ವಾಮೀಜಿ, ಮಹಾರಾಷ್ಟ್ರದ ನಾಗಣಸೂರ ಮಠದ ಶ್ರೀಕಂಠ ಶಿವಾಚಾರ್ಯ ಸ್ವಾಮೀಜಿ, ಶಹಾಪುರ ಮಠದ ಶ್ರೀ ಸೂಗೂರೇಶ್ವರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಸುಮಾರು 25ಕ್ಕೂ ಹೆಚ್ಚಿನ ಮಠಾಧೀಶರು ನಿಯೋಗದಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts