More

    ಶಿಕ್ಷಣ ಸಂಸ್ಥೆ ಸ್ಥಾಪನೆ ನಮ್ಮ ಮೊದಲ ಆದ್ಯತೆ: ಬಸವಸೇನೆ ಮುಖಂಡ ಎಸ್.ಪಿ.ದಿನೇಶ್ ಹೇಳಿಕೆ

    ಶಿವಮೊಗ್ಗ: ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಆಡಳಿತ ಮಂಡಳಿಯ ಮೂರು ವರ್ಷದ ಅವಧಿಗೆ ಆ.21ರಂದು ಚುನಾವಣೆ ನಡೆಯಲಿದ್ದು, 15 ಮಂದಿ ತಂಡ ರಚನೆ ಮಾಡಿಕೊಂಡು ಕಣಕ್ಕೆ ಇಳಿದಿದ್ದೇವೆ, ಶಿಕ್ಷಣ ಸಂಸ್ಥೆ ಸ್ಥಾಪನೆ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಬಸವಸೇನೆ ಮುಖಂಡ ಎಸ್.ಪಿ.ದಿನೇಶ್ ಹೇಳಿದರು.
    ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಐಎಎಸ್, ಕೆಎಎಸ್, ಯುಪಿಎಸ್‌ಸಿ, ಸಿಎ(ಲೆಕ್ಕ ಪರಿಶೋಧಕ) ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ತರಬೇತಿ ಕೇಂದ್ರ ಸ್ಥಾಪಿಸುವುದು, ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಲಿಕಾ ಸಂಪನ್ಮೂಲಗಳನ್ನು ನೀಡುವುದು, ಪ್ರತಿ ಮೂರು ವರ್ಷಕ್ಕೊಮ್ಮೆ ಬೈಲಾ ರೀತಿ ಚುನಾವಣೆ ನಡೆಸುವುದು, ಮಠಾಧಿಪತಿಗಳು ನಗರಕ್ಕೆ ಆಗಮಿಸಿದಾಗ ವಾಸ್ತವ್ಯಕ್ಕೆ ಸಂಘದ ಕಟ್ಟಡದಲ್ಲಿ ಒಂದು ಸುಸಜ್ಜಿತ ಕುಟೀರ ನಿರ್ಮಿಸುವುದು, ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಒಕ್ಕೂಟ ರಚನೆ ಮಾಡುವುದು, ಬಡವರ ವೃತ್ತಿಗನುಗುಣವಾಗಿ ಧನಸಹಾಯ ನೀಡುವುದು ನಮ್ಮ ಯೋಜನೆಗಳಾಗಿವೆ. ನಮ್ಮ ತಂಡ ಅಧಿಕಾರಕ್ಕೆ ಬಂದರೆ ಮೂರು ವರ್ಷದಲ್ಲಿ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    10 ವರ್ಷಗಳ ನಂತರ ಸಂಘಕ್ಕೆ ಚುನಾವಣೆ ನಡೆಯುತ್ತಿದೆ. 6,723 ಮತದಾರರಿದ್ದು 21ರಂದು ಶ್ರೀ ಬಸವೇಶ್ವರ ವಿದ್ಯಾಸಂಸ್ಥೆಯಲ್ಲಿ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. 50ಕ್ಕೂ ಹೆಚ್ಚು ಜನರು ಸ್ಪರ್ಧೆ ಮಾಡಿದ್ದು 15 ಜನರ ಮೂರು ತಂಡಗಳಿವೆ. ಐವರು ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಕಳೆದ 10 ವರ್ಷದಿಂದ ಆಡಳಿತ ಮಂಡಳಿಯಲ್ಲಿ 13 ಸದಸ್ಯರಿದ್ದು ಅವರೇ ಆಡಳಿತ ನಡೆಸುತ್ತಿದ್ದಾರೆ. ಹಳಬರೇ ಇರುವ ಮಂಡಳಿಯಲ್ಲಿ ಹೊಸ ಬದಲಾವಣೆ ತರಲು ಹೊಸ ತಂಡ ರಚಿಸಿಕೊಂಡಿದ್ದೇವೆ. ಸ್ಪರ್ಧಿಗಳಾದ ಅನಿತಾ ರವಿಶಂಕರ್, ಎನ್.ಎಸ್.ಕುಮಾರ್, ಬಿ.ಆರ್.ಜಯದೇವಪ್ಪ, ಎಂ.ಆರ್.ಪ್ರಕಾಶ್(ಡಿಚ್ಚಿ), ಟಿ.ವಿ.ಬಿಂದುಕುಮಾರ್, ಸಿ.ಮಹೇಶ್‌ಮೂರ್ತಿ, ರತ್ನಾ ಜೆ.ಆರ್.ಮಂಜುನಾಥ್, ಪಿ.ಎಂ.ರುದ್ರಮುನಿ, ಪಿ.ರುದ್ರೇಶ್, ಡಾ. ಸಿ.ರೇಣುಕಾರಾಧ್ಯ, ಎಸ್.ಪಿ.ಶಶಿಧರ್, ಬಿ.ಎಸ್.ಶಿವಕುಮಾರ್, ಎಂ.ಎಸ್.ಸುರೇಶ್, ಎನ್.ಎಂ.ಸೋಮಶೇಖರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts