More

    ವೀರಾಪುರದಲ್ಲಿ ದಾಸೋಹ ಭವನ: ಸಂಗೀತ ನಿರ್ದೇಶಕ ಹಂಸಲೇಖ ಹೇಳಿಕೆ ಶಿವಕುಮಾರ ಸ್ವಾಮೀಜಿ ಪ್ರತಿಮೆ ನಿರ್ಮಾಣ ಸ್ಥಳಕ್ಕೆ ಭೇಟಿ

    ಮಾಗಡಿ : ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಹುಟ್ಟೂರು ವೀರಾಪುರದಲ್ಲಿ ವೈಯಕ್ತಿಕವಾಗಿ ದಾಸೋಹ ಭವನ ಅಥವಾ ಯಾತ್ರಿ ನಿವಾಸ ನಿರ್ಮಿಸಿಕೊಡುವುದಾಗಿ ಖ್ಯಾತ ಸಂಗೀತ ನಿರ್ದೇಶಕ ಡಾ. ಹಂಸಲೇಖ ತಿಳಿಸಿದರು.
    ವೀರಾಪುರಕ್ಕೆ ಮಂಗಳವಾರ ಕುಟುಂಬ ಸಮೇತ ಭೇಟಿ ನೀಡಿ ಶ್ರೀಗಳ ಮನೆ, ಪ್ರತಿಮೆ ನಿರ್ಮಾಣ ಸ್ಥಳ ವೀಕ್ಷಿಸಿ ಮಾತನಾಡಿದರು.

    ಶ್ರೀಗಳ 111 ಅಡಿ ಎತ್ತರದ ಪ್ರತಿಮೆ ಸೇರಿದಂತೆ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಮುಂದಾಗಿರುವುದು ಉತ್ತಮ ಕಾರ್ಯವಾಗಿದೆ. ಇಂತಹ ಮಹನೀಯರ ಗ್ರಾಮದ ಅಭಿವೃದ್ಧಿ ಸೇರಿದಂತೆ ಪ್ರತಿಮೆ ನಿರ್ಮಾಣದಿಂದ ಜನರಲ್ಲಿ ಸಂಸ್ಕಾರ, ಅದರ್ಶ ಮೈಗೂಡಿಸಿಕೊಳ್ಳುವಂತಾಗುತ್ತದೆ. ಶ್ರೀಗಳು ಹುಟ್ಟಿನಿಂದ ಲಿಂಗೈಕ್ಯರಾಗುವವರೆಗೂ ನಾಡಿಗೇ ಅಲ್ಲದೆ ವಿಶ್ವಕ್ಕೆ ನೀಡಿದ ಸಾಧನೆ ಕುರಿತು ಗೀತೆಯನ್ನು ರಚಿಸಿ ಲೋಕಾರ್ಪಣೆ ಮಾಡಲಾಗುವುದು. ಇದರಿಂದ ಮತ್ತಷ್ಟು ಮಂದಿ ಇಂತಹ ಮಹನೀಯರಂತಾಗಲಿ ಎಂಬುದು ನನ್ನ ಆಶಯವಾಗಿದೆ. ಇದಕ್ಕೆ ಪೂರಕವಾಗಿ ಕೆಆರ್‌ಐಡಿಎಲ್ ನಿಗಮದ ಅಧ್ಯಕ್ಷ ಎಂ.ರುದ್ರೇಶ್ ಹೆಚ್ಚು ಗಮನಹರಿಸಿ ಶ್ರೀಗಳ ಪುತ್ಥಳಿ ನಿರ್ಮಾಣಕ್ಕೆ ಕೈಜೋಡಿಸಿರುವುದು ಶ್ಲಾಘನೀಯ ಎಂದರು.

    ಈ ವೇಳೆ ಮಾತನಾಡಿದ ಎಂ.ರುದ್ರೇಶ್, ವೀರಾಪುರಕ್ಕೆ ಭೇಟಿ ನೀಡುವಂತೆ ಡಾ.ಹಂಸಲೇಖ ಅವರನ್ನು ಕಳೆದ ಎರಡು ದಿನಗಳ ಹಿಂದೆ ಮನವಿ ಮಾಡಿದ್ದೆ. ಹಂಸಲೇಖ ಅವರು ಶ್ರೀಗಳ ಮೇಲೆ ಇಟ್ಟಿದ್ದ ಪ್ರೀತಿಯಿಂದ ಗ್ರಾಮದಲ್ಲಿ ದಾಸೋಹ ಭವನ ಅಥವಾ ಯಾತ್ರಿ ನಿವಾಸ ನಿರ್ಮಿಸಿಕೊಡಲು ಮುಂದಾಗಿರುವುದು ಸಂತೋಷವಾಗಿದೆ ಎಂದರು.
    ಲತಾ ಹಂಸಲೇಖ, ಉದ್ಯಮಿ ಓಂಕಾರಮೂರ್ತಿ, ಸೂಲಿಕೆರೆ ಮೋಹನ್, ದರ್ಶನ್, ಶಿಕ್ಷಕ ಉಮೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts