More

    ವೇದ ದರ್ಶನ: ಜೀವನವೇ ಒಂದು ದಿವ್ಯಯೋಗ

    ಶ್ರೀ ಶಂಕರಾಚಾರ್ಯರೂ ತಾವು ಬೋಧಿಸಿದ ಜ್ಞಾನಮಾರ್ಗಕ್ಕೆ ಎಲ್ಲರೂ ಏಕಕಾಲಕ್ಕೆ ಅಧಿಕಾರಿಗಳಲ್ಲವೆಂದು ಅನೇಕ ಕಡೆಗಳಲ್ಲಿ ಬರೆದಿರುವುದಲ್ಲದೆ, ಸಾಧಕನ ಯೋಗ್ಯತೆಗನುಸಾರವಾದ ಅನೇಕ ಅನುಷ್ಠಾನ ಪ್ರಕಾರಗಳನ್ನು ವಿವರಿಸಿ, ಯೋಗವೈವಿಧ್ಯವನ್ನು ಎತ್ತಿ ಹಿಡಿದಿರುತ್ತಾರೆ. ಈ ಸಾಂಪ್ರದಾಯಿಕ ಯತಿಗಳು ಇಂದಿಗೂ ಇದನ್ನೇ ಸಾರಿ ಹೇಳುತ್ತಿರುತ್ತಾರೆ. ಇವರ ಆಚರಣೆಯೇ ಸಾಕ್ಷಿ ಇದಕ್ಕೆ.

    ವೇದ ದರ್ಶನ: ಜೀವನವೇ ಒಂದು ದಿವ್ಯಯೋಗಸ್ವಯಂ ಭಗವಂತನೇ ಗೀತೆಯಲ್ಲಿ ‘‘ಅನೇಕ ಜನ್ಮಸಂಸಿದ್ಧಃ ತತೋ ಯಾತಿ ಪರಾಂ ಗತಿಂ |’’ ಎಂದು ಹೇಳಿ, ‘‘ಬಹೂನಾಂ ಜನ್ಮನಾಂ ಅಂತೇ ಜ್ಞಾನವಾನ್ ಮಾಂ ಪ್ರಪದ್ಯತೇ |’’ ಎಂದು ತಿಳಿಸಿ ಮುಕ್ತಿಯು ಅನೇಕ ಜನ್ಮಗಳ ಸಾಧನೆಯ ಫಲವೆಂಬುದನ್ನು ಪ್ರಪತ್ತಿ ಮಾರ್ಗಕ್ಕೂ ಅನ್ವಯಿಸಿದ್ದಾನೆ. ಶ್ರೀ ರಾಮಾನುಜಸಂಪ್ರದಾಯದಲ್ಲೂ ಶ್ರೀ ಮಾಧ್ವ ಸಂಪ್ರದಾಯದಲ್ಲೂ ಸಾರ್ವಜನಿಕ ‘‘ಯೋಗ’’ವು ಗ್ರಂಥಕಾಲಕ್ಷೇಪ, ಪ್ರವಚನ, ಹರಿಕೀರ್ತನೆ, ಭಜನೆ, ಗಾನರೂಪದಲ್ಲಿಯೇ ಹೊರತು ‘‘ಪಾತಂಜಲ’’ ರೂಪದಲ್ಲಿ ಅಲ್ಲ. ಎಲ್ಲರೂ ದೇವಾಲಯಗಳಲ್ಲಿ ಸಾಮೂಹಿಕವಾಗಿ ಸೇರಿ ವಂದನ, ಸ್ತುತಿ, ಅರ್ಚನ, ಶ್ರವಣ ಮುಂತಾಗಿ ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯವೆಂಬ ಈ ರೂಪದ ‘‘ಯೋಗ’’ವು ಏಕೋ ಕೆಲವರಿಗೆ ‘‘ಯೋಗ’’ವಲ್ಲವೆಂಬ ಭ್ರಾಂತಿಯೂ, ‘‘ಯೋಗ’’ವೆಂದರೆ ‘‘ಪತಂಜಲ ಯೋಗ’’ವೊಂದೇ ಎಂಬ ಹಠಮಾರಿತನದ ಸಂಕುಚಿತ ಭಾವವೂ ಇರುವುದೇ ಇದಕ್ಕೆ ಕಾರಣ. ಭಗವದ್ಗೀತೆಯಲ್ಲಿ ಹೇಳಿರುವ ಯೋಗವು ಇದಲ್ಲವೆಂದೂ, ಇಡೀ ಜೀವನವನ್ನೇ ಬಹು ವಿಶಾಲಾರ್ಥದಲ್ಲಿ ಯೋಗವನ್ನಾಗಿಸುವ ‘‘ದಿವ್ಯಯೋಗ’’ವನ್ನು ಭಗವಂತನು ಉಪದೇಶಿಸಿರುವನೆಂದೂ ಮನಗಂಡರೆ ಮಾತ್ರ ಒಳಿತಾದೀತು. ಅಲ್ಲದೆ ಜ್ಞಾನಿಗಳಾದ ವಿಶ್ವದ ಎಲ್ಲ ಮಹಾನುಭಾವರೂ ಈ ಅಭಿಪ್ರಾಯವನ್ನೇ ಹೊಂದಿರುವುದಕ್ಕೆ ಇನ್ನೂ ಒಂದೆರಡು ಪಾಶ್ಚಾತ್ಯ ಉದಾಹರಣೆಗಳನ್ನೇ ನೋಡೋಣ. ಷೇಕ್ಸ್​ಪಿಯರ್ ಎಂಬ ಮಹಾಕವಿಯು ಮ್ಯಾಕ್​ಬೆತ್ ಎಂಬ ತನ್ನ ನಾಟಕದಲ್ಲಿ ಒಂದು ರಸಮಯ ಸನ್ನಿವೇಶದಲ್ಲಿ ಇದನ್ನು ಸೂಚಿಸಿದ್ದಾನೆ.

    ಇದನ್ನೂ ಓದಿ  4 ಸಾವಿರ ತಬ್ಲಿಘಿಗಳ ಬಿಡುಗಡೆಗೆ ದೆಹಲಿ ಸರ್ಕಾರದ ಆದೇಶ

    ಮ್ಯಾಕ್​ಬೆತ್ ದಂಪತಿ ಒಳಸಂಚು ಮಾಡಿ ತಮ್ಮ ಅತಿಥಿಯಾಗಿದ್ದ ದೊರೆ ಡಂಕನ್ ಎಂಬುವವನನ್ನು ಕೊಲೆ ಮಾಡಿದ ನಂತರ ಲೇಡಿ ಮ್ಯಾಕ್​ಬೆತ್ತಳಿಗೆ ಹುಚ್ಚುಹಿಡಿಯುತ್ತದೆ. ಇದನ್ನು ಗುಣಪಡಿಸಲು ನೇಮಿತನಾದ ವೈದ್ಯನು, ಅವಳನ್ನನುಸರಿಸುತ್ತ, ಅವಳ ಬಾಯಿಂದ ಹೊರಬಿದ್ದ ಶಬ್ದಗಳಲ್ಲಿ ಅವಳು ರಾಜನ ಕೊಲೆಯಲ್ಲಿ ವಹಿಸಿದ್ದ ಪಾತ್ರವನ್ನೂ, ಅದರಿಂದಾದ ಅವಳ ನೈತಿಕ, ಧಾರ್ವಿುಕ ಅಧಃಪಾತ ಪ್ರಮಾಣವನ್ನೂ ಕಂಡು ಬೆದರುತ್ತಾನೆ; ಕಣ್ಣು ತೆರೆದಿದ್ದರೂಒಳಗಣ್ಣು ಮುಚ್ಚಿದ ಅವಳು ಕೈಯಲ್ಲಿ ಬೆಳಕಿಗಾಗಿ ಮೇಣದ ಬತ್ತಿಯನ್ನು ಹಗಲಲ್ಲೂ ಹಿಡಿದು ನಡೆಯುವುದನ್ನು ಕಂಡು; “This disease is beyond my practice” ‘ ಎಂದುಕೊಳ್ಳುತ್ತಾನೆ.

    (ಈ ರೋಗವು ನನ್ನ ವೃತ್ತಿಗೆ ಮೀರಿದ್ದು.) 

    “Unnatural deeds do breed unnatural troubles” ಎನ್ನುತ್ತಾನೆ.

    (‘‘ಸ್ವಭಾವವಿರುದ್ಧ ಕೃತ್ಯಗಳು ಸ್ವಭಾವ ವಿರೋಧಕಾರಕಗಳಾದ ಕಷ್ಟಗಳನ್ನೇ ನಿರ್ವಿುಸುತ್ತವೆ.’’)

    ಅವಳ ರೋಗವೃದ್ಧಿಯನ್ನು ದಿನೇದಿನೆ ಕಂಡು ಚಿಂತಿಸಿದ ಮ್ಯಾಕ್​ಬೆತ್ತನು (ಆ ವೇಳೆಗೆ ಅವನೇ ಅಲ್ಲಿ ದೊರೆ.) ವೈದ್ಯನನ್ನು ಕರೆಸಿ ಕೇಳುತ್ತಾನೆ:

    “How goes your patient, doctor?”

    (‘‘ವೈದ್ಯರೇ, ನಿಮ್ಮ ರೋಗಿ ಹೇಗಿದ್ದಾಳೆ?’’)

    ವೈದ್ಯನು ‘‘ಅಂಥದೇನೂ ಕಾಯಿಲೆ ಇಲ್ಲ; ಆದರೆ ಒಂದರ ಮೇಲೊಂದು ಒತ್ತಿ ಬರುತ್ತಿರುವ ಕೆಲವು ಭಯಾನಕ ನೆನಪುಗಳಿಂದ ಅವಳು ಕ್ಷುಬ್ಧಳಾಗಿ ಅಶಾಂತಮನಸ್ಕಳಾಗಿದ್ದಾಳೆ’’ ಎನ್ನುತ್ತಾನೆ. (ಇದೇ ಅಲ್ಲವೆ ಇಂದಿನ ಪಾಶ್ಚಾತ್ಯರನೇಕರ ಪಾಡು?) ತನ್ನ ದಾರಿಯನ್ನು ತಾನೇ ಕಾಣಬೇಕು.

    ಇದನ್ನೂ ಓದಿ ಕುಡಿದ ಮತ್ತಿನಲ್ಲಿ ಹಾವನ್ನೇ ಕಚ್ಚಿ ಕೊಂದವ ಏನಾದ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts