More

    ತನ್ನ ದಾರಿಯನ್ನು ತಾನೇ ನಡೆಯಬೇಕು

    ತನ್ನ ದಾರಿಯನ್ನು ತಾನೇ ನಡೆಯಬೇಕುವೈದ್ಯ ‘‘ಒಂದರ ಮೇಲೊಂದು ಒತ್ತಿ ಬರುತ್ತಿರುವ ಕೆಲವು ಭಯಾನಕ ನೆನಪುಗಳಿಂದ ಲೇಡಿ ಮ್ಯಾಕ್​ಬೆತ್ ಕ್ಷುಬ್ಧಳಾಗಿ ಅಶಾಂತ ಮನಸ್ಕಳಾಗಿದ್ದಾಳೆ’’ ಎಂದಾಗ ಮ್ಯಾಕ್​ಬೆತ್ತನು ಕೇಳುತ್ತಾನೆ:

    “….. Cure her of that.
    Canst thou not minister to a mind diseased?
    Pluck from memory a rooted sorrow.
    Raze out the written troubles of the brain,
    And with some sweet Oblivious antidote
    Cleanse the stuffed bosom of that perilous stuff
    Which weighs upon her heart (V-iii-35 to 45)

    (‘‘ಇದನ್ನು ಗುಣಪಡಿಸಿ; ಸಾಯುತ್ತಿರುವ ಒಂದು ಮನಸ್ಸಿಗೆ ಚಿಕಿತ್ಸೆ ಮಾಡಲು ನಿಮಗೆ ಆಗದೆ? ನೆನಪಿನಲ್ಲಿ ಬೇರುಬಿಟ್ಟ ದುಃಖವನ್ನು ಬುಡಸಮೇತ ಕಿತ್ತು, ಮಿದುಳಿನಲ್ಲಿ ಕೊರೆದು ಬರೆದಿಟ್ಟ ಸಂಕಷ್ಟಗಳನ್ನು ಅಳಿಸಿಹಾಕಿ, ಯಾವುದಾದರೊಂದು ರೀತಿಯಲ್ಲಿ ಮರೆವನ್ನು ಉಂಟುಮಾಡುವ ಪ್ರತಿ-ಮದ್ದಿನಿಂದ ಆ ವಿನಾಶಕಾರೀ ಭಾರೀ ವಸ್ತುವನ್ನು ಹೊರತೆಗೆದು ಅದನ್ನು ಚೊಕ್ಕಟ ಮಾಡಲಾರಿರಾ?’’)

    ಇದನ್ನೂ ಓದಿ: ಒಂದು ಹಾವು ಕಚ್ಚಿದ್ರೂ ಬಚಾವ್​, ಆದ್ರೆ ಮತ್ತೊಂದು ಬೆಡ್​ರೂಮ್​ಗೇ ನುಗ್ಗಿತ್ತು..

    ಇದಕ್ಕೆ ಆ ವೈದ್ಯ ಕೊಟ್ಟ ಉತ್ತರವೇ ನಮಗೆ ಪ್ರಕೃತ ಉಪದೇಶ ಸೂಕ್ತಿ: “Therein the patient must minister to himself”  (‘‘ಈ ವಿಷಯದಲ್ಲಿ ರೋಗಿ ತನಗೆ ತಾನೇ ವೈದ್ಯನಾಗಬೇಕು’’)

    ಸಾಮೂಹಿಕವಾಗಿ ಗುಣವಾಗದ ರೋಗ ಇಂಥದು! ಪ್ರತಿಯೊಬ್ಬನೂ ತನ್ನ ದಾರಿಯನ್ನು ತಾನೇ ಕಾಣಬೇಕು. ಆದರೆ ಈ ಮಾತನ್ನು ಕೇಳಿ ಮ್ಯಾಕ್​ಬೆತ್ತನು ಹೇಗೆ ಸಿಡಿದೆದ್ದನೋ, ಈಗಿನ ಇಂಥ ‘‘ರೋಗಿ’’ಗಳೂ ಹಾಗೆಯೇ ತಾಳ್ಮೆಗೆಟ್ಟಿದ್ದಾರೆ: “Throw physic to the dogs, I’l none of it.” (‘‘ನಿನ್ನ ವೈದ್ಯವಿದ್ಯೆಯನ್ನು ನಾಯಿಗಳಿಗೆ ಎಸೆ!! ಅದು ನನಗೆ ಇನ್ನು ಬೇಡ!!!’’) ನಮ್ಮದು “Instantaneous cure” (‘‘ಕ್ಷಣದಲ್ಲಿ ಗುಣ’’) ಬಯಸುವ ಕಾಲ ಅಲ್ಲವೆ? ರೋಗಿಯು (Patient), ತಾಳ್ಮೆಗೆಟ್ಟರೆ (Impatient ಆದರೆ) ಹೇಗೆ? ಎಷ್ಟೇ ಕಠಿಣವಾದರೂ ತನ್ನ ದಾರಿಯನ್ನು ತಾನೇ ನಡೆಯಬೇಕು-ಇಲ್ಲವಾದರೆ ಸಾಯುವುದು ಖಂಡಿತ; ಯಾವ ‘‘ಯೋಗ’’ವೂ ಕಾಪಾಡಲಾರದು. ರೋಗವು ಬೆಳೆಯುವುದು ಸುಲಭ; ಗುಣ ಹೇಗೆ ಕ್ಷಣದಲ್ಲಿ ಸಾಧ್ಯ? ಅರ್ಧಮರ್ಧ ತಿಳಿದ ‘‘ವೈದ್ಯ’’ನು (Quack) ಮೋಸವಲ್ಲದೆ ಬೇರೇನು ಮಾಡಿಯಾನು?

    ಇದನ್ನೂ ಓದಿ: ದೇವಸ್ಥಾನದಲ್ಲಿ ಮದುವೆ ಮುಗಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿತು ಆ ಜೋಡಿ!

    ಪ್ರಸಿದ್ಧ ಆಂಗ್ಲಕವಿ ಟಿ. ಎಸ್. ಎಲಿಯೆಟ್ ಇದನ್ನೇ ಹೇಳುತ್ತಾನೆ: ‘‘ಮಾನವನ ಕುತೂಹಲ ಪ್ರವೃತ್ತಿಯು ಭೂತ ಭವ್ಯಗಳನ್ನು ಅರಸಿ, ಅದಕ್ಕೆ ಗಂಟುಬೀಳುತ್ತದೆ; ಕಾಲವು ಕಾಲಾತೀತದ ಕೂಡ ಪರಸ್ಪರ ಭೇದಿಸುವ (ವರ್ತಮಾನ) ಬಿಂದುವನ್ನು ಕಾಣುವುದು ಯೋಗಿಯ ಕಸಬು; ಕಸಬೇನು! ಒಂದು ಆಯುಷ್ಯವಿಡೀ ಪ್ರೇಮಕ್ಕೆ ಪ್ರಾಣ ತೆರುವುದು, ನಿಷ್ಠೆ, ನಿಃಸ್ವಾರ್ಥತೆ, ಶರಣಾಗತಿಗಳಿಂದ ಒಂದು ತೆರನಾದ ಕೊಡ-ಕೊಳ್ಳಾಟ ಅದು. ಉಳಿದದ್ದು ಪ್ರಾರ್ಥನೆ, ತಪಸ್ಸು, ಶಿಸ್ತು, ಚಿಂತನ, ಕಾರ್ಯೋನ್ಮುಖತೆ’’ (The Dry Salvages, lines 199-214)
    [Men’s curiosity searches past and future
    And clings to that dimension. But to apprehend
    The point of intersection of the timeless
    With time, is an occupation for the saint,
    No occupation either, but something given
    And taken, in a lifetime’s death in love,
    Ardour and selflessness and self-surrender
    ……… and the rest is
    prayer, observance, discipline, thought and action

    (ಲೇಖಕರು- ಬಹುಶ್ರುತ ವಿದ್ವಾಂಸರು, ಪ್ರವಚನಕಾರರು)

    PHOTOS: ಕರೊನಾ ವೈರಸ್ ಇದ್ರೆ ಕೂಡ್ಲೇ ತಿಳಿಸುತ್ತಂತೆ ಈ ಸ್ಮೆಲ್ ಕ್ಯಾಮೆರಾ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts