More

    ಎಸ್‌ಎಮ್‌ಎಸ್ ವಿದ್ಯಾಸಂಸ್ಥೆಯಲ್ಲಿ ವಿಹಾ ಬೇಸಿಗೆ ಶಿಬಿರ

    ಮಡಿಕೇರಿ: ಆರಮೇರಿಯ ಎಸ್‌ಎಂಎಸ್ ವಿದ್ಯಾ ಸಂಸ್ಥೆಯಲ್ಲಿ ೧೦ ದಿನಗಳ ಕಾಲ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿತ್ತು.


    ಶಿಬಿರದಲ್ಲಿ ಪಾಲ್ಗೊಂಡಿದ್ದ ೧೪೫ ಶಿಬಿರಾರ್ಥಿಗಳಿಗೆ ಕಸದಿಂದ ರಸ, ಕಲೆ, ಕರಕುಶಲ, ಕ್ರೀಡೆ, ಅಡುಗೆ, ಇನ್ನಿತರ ಚಟುವಟಿಕೆಗಳ ಜತೆಗೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಕಾಂತ್ ರಾವ್‌ರವರು ಬೇಟೋಳಿ ಮತ್ತು ದೇವರ ಕಾಡುಗಳಲ್ಲಿ ಪಕ್ಷಿಗಳ ಚಲನವಲನಗಳ ಕುರಿತು ಮಾರ್ಗದರ್ಶನ ನೀಡಿದರು.


    ಭಾಗವಹಿಸಿದ್ದ ಶಿಬಿರಾರ್ಥಿಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ ವಿದ್ಯಾರ್ಥಿಗಳು ಇದರಿಂದ ಹಲವಾರು ಬ್ಯಾಡ್ಜ್ ಗಳನ್ನು ಸಂಪಾದಿಸಿಕೊಂಡರು. ಶಿಬಿರದಲ್ಲಿ ಕೊಡಗು ರೆಡ್ ಕ್ರಾಸ್ ಸೊಸೈಟಿಯ ಡಾ.ರವೀಂದ್ರಕಾಮತ್, ಮುರಳಿಧರ್‌ರವರು ಪ್ರಥಮ ಚಿಕಿತ್ಸೆಯ ಕಾರ್ಯಗಾರ ಹಮ್ಮಿಕೊಂಡಿದ್ದರು. ದಂತ ವೈದ್ಯರಾದ ಡಾಕ್ಟರ್ ಸುಪ್ರೀತಾ ದೀಪಕ್‌ರವರು ಮಕ್ಕಳ ಹಲ್ಲುಗಳ ಶುಚಿತ್ವ ಕಾಪಾಡುವ ಬಗೆಗೆ ಮಾಹಿತಿ ನೀಡಿದರು.


    ಜನರಲ್ ತಿಮ್ಮಯ್ಯ ಜನ್ಮದಿನದ ಪ್ರಯುಕ್ತ ಮಡಿಕೇರಿಯ ತಿಮ್ಮಯ್ಯ ವೃತ್ತದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಮುಖ್ಯ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯೂರವರು ತಿಮ್ಮಯ್ಯ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಶಿಬಿರಾರ್ಥಿಗಳೊಡನೆ ರಾಜಸೀಟ್‌ವರೆಗೆ ಸ್ವಚ್ಛತಾ ಆಂದೋಲನದಲ್ಲಿ ಪಾಲ್ಗೊಂಡರು. ಬಳಿಕ ಸನ್ನಿ ಸೈಡ್, ಸಾಲುಮರದ ತಿಮ್ಮಕ್ಕ ಉದ್ಯಾನವನಗಳಿಗೆ ಭೇಟಿ ನೀಡಲಾಯಿತು.


    ಶಿಬಿರದ ಮುಕ್ತಾಯದ ದಿನದ ಪ್ರಯುಕ್ತ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಎಸ್‌ಎಂಎಸ್ ವಿದ್ಯಾಸಂಸ್ಥೆಯಲ್ಲಿ ಅಧ್ಯಕ್ಷ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಜಿಲ್ಲಾ ಕಾರ್ಯದರ್ಶಿ ಎಂ.ಎಂ.ವಸಂತಿ, ಜಂಟಿ ಕಾರ್ಯದರ್ಶಿ ಬೊಳ್ಳಾಜಿರ ಅಯ್ಯಪ್ಪ, ಜಿಲ್ಲಾ ತರಬೇತಿ ಆಯುಕ್ತರಾದ ಮೈಥಿಲಿ ರಾವ್, ಸಂಸ್ಥೆಯ ಪ್ರಾಂಶುಪಾಲರದ ಕುಸುಂ ಟಿಟೋ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts