More

    ವಶಿಷ್ಠ ಬ್ಯಾಂಕ್ ಸಿಇಒ ಕೆ.ಎನ್. ವೆಂಕಟನಾರಾಯಣ ಮತ್ತು ಅವರ ಪುತ್ರನ ಬಂಧನ!

    ಬೆಂಗಳೂರು: ಶ್ರೀ ವಶಿಷ್ಠ ಕ್ರೆಡಿಟ್ ಸೌಹಾರ್ದ ಸಹಕಾರಿ ಲಿ. ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕೆ.ಎನ್. ವೆಂಕಟನಾರಾಯಣ ಹಾಗೂ ಅವರ ಪುತ್ರ ಕೃಷ್ಣಪ್ರಸಾದ್‌ನನ್ನು ಹನುಮಂತನಗರ ಪೊಲೀಸರು ಬಂಧಿಸಿದ್ದಾರೆ.

    ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ನಿ. (ಶಾಸನ ಬದ್ದ ಸಹಕಾರಿ ಸಂಸ್ಥೆ) ಡೆಪ್ಯೂಟಿ ಜನರಲ್ ಮ್ಯಾನೇಜರ್ ನಾರಾಯಣ್ ಹೆಗ್ಡೆ ಹನುಮಂತನಗರ ಪೊಲೀಸ್ ಠಾಣೆಗೆ ಕೊಟ್ಟ ದೂರಿನ ಆಧಾರದ ಮೇಲೆ ಕೆ.ಎನ್. ವೆಂಕಟನಾರಾಯಣ್ ಸೇರಿ ಶ್ರೀ ವಶಿಷ್ಠ ಕೋ-ಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿಗೆ ಸಂಬಂಧಿಸಿದ 56 ಮಂದಿ ವಿರುದ್ಧ ಎಫ್​ಐಆರ್ ದಾಖಲಾಗಿದೆ.

    ಇದರ ಬೆನ್ನಲ್ಲೇ ಕೆ.ಎನ್.ವೆಂಕಟನಾರಾಯಣ್ ಹಾಗೂ ಅವರ ಪುತ್ರ ಕೃಷ್ಣಪ್ರಸಾದ್ ನ್ಯಾಯಾಲಯಕ್ಕೆ ಗುರುವಾರ ಹಾಜರಾಗಿ ಶರಣಾಗಿದ್ದಾರೆ. ನ್ಯಾಯಾಲಯವು ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಸದ್ಯ ಇಬ್ಬರೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಜೈಲು ಸೇರಿದ್ದಾರೆ ಎಂದು ತಿಳಿದು ಬಂದಿದೆ.

    ಎಫ್​ಐಆರ್‌ನಲ್ಲಿ ಏನಿದೆ?

    ಶ್ರೀ ವಶಿಷ್ಠ ಪತ್ತಿನ ಸೌಹಾರ್ದ ಸಹಕಾರಿ ನಿ. ಠೇವಣಿದಾರರು ನಿಶ್ಚಿತ ಠೇವಣಿ ಹೂಡಿಕೆ ಮಾಡಿರುವುದನ್ನು ಬ್ಯಾಂಕ್ ಮರುಪಾವತಿ ಮಾಡುತ್ತಿಲ್ಲವೆಂದು ರಾಜ್ಯ ಸೌಹಾರ್ದ ಸಂಯುಕ್ತ ನಿ.ಗೆ ಠೇವಣಿದಾರರು ದೂರು ನೀಡಿದ್ದರು. ವಶಿಷ್ಠ ಕೋ-ಆಪರೇಟಿವ್ ಬ್ಯಾಂಕ್‌ನವರು ಪ್ರತಿ ವರ್ಷ ನೈಜವಾಗಿ ಸ್ವೀಕಾರವಾಗಿಲ್ಲದ ಸಾಲದ ಮೇಲಿನ ಬಡ್ಡಿಯನ್ನೂ ಲೆಕ್ಕಾಚಾರ ಮಾಡಿ ಆದಾಯಕ್ಕೆ ಪರಿಗಣಿಸಿ ನವ್ವಳ ಲಾಭ ಘೋಷಿಸುತ್ತ ಬಂದಿದ್ದಾರೆ. 2021 ಮಾ.31ಕ್ಕೆ ಬ್ಯಾಂಕ್ 39,82,21,728ರಷ್ಟು ನಷ್ಟದಲ್ಲಿರುವುದಾಗಿ ತಪ್ಪು ಲೆಕ್ಕಚಾರದ ಮೂಲಕ ತೋರಿಕೆ ಲಾಭ ಹೊಂದಿರುತ್ತಾರೆ. ದೊಡ್ಡ ಪ್ರಮಾಣದ ಸಾಲಗಳಿಗೆ ಯಾವುದೇ ಭದ್ರತೆ ಪಡೆದಿಲ್ಲ. ಬ್ಯಾಂಕ್‌ನಲ್ಲಿ ಪ್ರಸ್ತುತ ಇರುವ ಆಡಳಿತ ಮಂಡಳಿ ಹಾಗೂ ಮುಖ್ಯ ಕಾರ್ಯನಿರ್ವಾಹಕರು ಠೇವಣಿದಾರರಿಗೆ ವಂಚನೆ ಎಸಗಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ.

    ತನ್ನ ಬ್ಯಾಂಕ್ ಹೆಸರನ್ನು ಹೊರತುಪಡಿಸಿ ವಶಿಷ್ಠ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ. ಹಾಗೂ ವಶಿಷ್ಠ ಇನ್‌ವೆಸ್ಟ್‌ಮೆಂಟ್ ಹೆಸರಿಲ್ಲಿಯೂ ಠೇವಣಿ ಹೊಂದಿದೆ. ಆದರೆ, ಈ ಹೆಸರಿನ ಸಂಸ್ಥೆಗಳು ನೋಂದಣಿಯಾಗಿರುವ ಕುರಿತು ಯಾವುದೇ ದಾಖಲೆಗಳಿಲ್ಲ. ಈ ಸಂಸ್ಥೆಗಳು ಹೊಂದಿರುವ ಠೇವಣಿಗಳಲ್ಲೂ ವಶಿಷ್ಠ ಕೋ-ಆಪರೇಟಿವ್ ಬ್ಯಾಂಕ್‌ನ ವಿಳಾಸವನ್ನೇ ನಮೂದಿಸಲಾಗಿದೆ. ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಕರು 34 ವ್ಯಕ್ತಿಗಳ ಹೆಸರಿನಲ್ಲಿ ಸುಳ್ಳು ಸಾಲದ ಖಾತೆಯನ್ನು ಸೃಜಿಸಿರುವುದಾಗಿ ಲಿಖಿತ ರೂಪದಲ್ಲಿ ತಿಳಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    21 ಕೋಟಿ ರೂ. ಠೇವಣಿ: ಡಾ.ಎ.ವಿ.ಎನ್.ಆಚಾರ್ಯ ಎಂಬುವವರು 21 ಕೋಟಿ ರೂ. ಠೇವಣಿಯನ್ನು ವಶಿಷ್ಠ ಬ್ಯಾಂಕ್‌ಗೆ ಚೆಕ್ ಮೂಲಕ ನೀಡಿದ್ದು, ಇದಕ್ಕೆ ಬ್ಯಾಂಕ್ ಠೇವಣಿ ರಸೀದಿಯನ್ನೂ ನೀಡಿದೆ. ಮರು ಪಾವತಿ ಕುರಿತು ಪ್ರಶ್ನಿಸಿದಾಗ ಕೆ.ಎನ್.ಶಂಕರ್ ಎಂಬುವವರ ಸಾಲಕ್ಕೆ ಭದ್ರತೆಯಾಗಿ ನೀಡಿದ ಆಸ್ತಿ ಪತ್ರವನ್ನು ಬ್ಯಾಂಕ್ ಮುಖ್ಯಸ್ಥರು ನೀಡಿದ್ದಾರೆ. ಬ್ಯಾಂಕ್ ಹೆಸರಿಗೆ ಇರುವ ಡಿಟಿಡಿಯನ್ನು ರದ್ದುಪಡಿಸಿ ತಮ್ಮ ಹೆಸರಿಗೆ ಡಿಟಿಡಿ ಮಾಡಿಕೊಡುವುದಾಗಿ ಒಪ್ಪಿಕೊಂಡು ಈಗ ಮಾಡಿಕೊಡದೇ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಆಚಾರ್ಯ ಅವರು ರಾಜ್ಯ ಸೌಹಾರ್ದ ಸಂಯುಕ್ತ ನಿ.ಗೆ ದೂರು ನೀಡಿದ್ದಾರೆ ಎಂದು ಎಫ್​ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

    ರಾಮ್​ಗೋಪಾಲ್ ವರ್ಮಾ ಜತೆ ಅಂಡರ್​ವರ್ಲ್ಡ್​​ನಲ್ಲಿ ಉಪೇಂದ್ರ; ಯಾರದು ‘R’?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts