More

    ಸತ್ತವನಂತೆ ನಟಿಸಿ ತಪ್ಪಿಸಿಕೊಂಡೆ ; ವರ್ತೂರು ಪ್ರಕಾಶ್ ಕಾರು ಚಾಲಕನ ವಿವರಣೆ

    ಕೋಲಾರ : ಹಲ್ಲೆಯಿಂದ ಗಾಯಗೊಂಡು ಸತ್ತವನಂತೆ ನಟಿಸಿ ಅಪಹರಣಕಾರರಿಂದ ತಪ್ಪಿಸಿಕೊಂಡಿದ್ದಾಗಿ ಮಾಜಿ ಸಚಿವ ವರ್ತೂರು ಪ್ರಕಾಶ್ ಕಾರು ಚಾಲಕ ಸುನೀಲ್ ತಿಳಿಸಿದ್ದಾನೆ. ಅಪಹರಣಕಾರರ ತೀವ್ರ ಹಲ್ಲೆಯಿಂದ ಗಾಯಗೊಂಡು ಬೆಗ್ಲಿಹೊಸಳ್ಳಿ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸುನೀಲ್ ಶುಕ್ರವಾರ ಸುದ್ದಿಗಾರರಿಗೆ ಘಟನೆಯ ವಿವರ ನೀಡಿದ್ದಾನೆ.

    ನ.25ರಂದು ರಾತ್ರಿ ಯಜಮಾನರು (ವರ್ತೂರು ಪ್ರಕಾಶ್) ತೋಟದ ಮನೆಯಿಂದ ಮದುವೆ ಕಾರ್ಯಕ್ರಮಕ್ಕೆ ಹೊರಟಿದ್ದರು. ಮಾರ್ಗಮಧ್ಯೆ ಅಪರಿಚಿತರು ಕಾರಿನಲ್ಲಿ ನಮ್ಮನ್ನು ಅಡ್ಡಗಟ್ಟಿದರು. ಗನ್ ತೋರಿಸಿ ನಮ್ಮಿಬ್ಬರಿಗೂ ಜೀವ ಬೆದರಿಕೆ ಹಾಕಿದರು, ಕಾರಿನ ಗಾಜುಗಳನ್ನು ಒಡೆದು, ಹೊರಗಡೆಗೆ ಎಳೆದರು. ನಮ್ಮಿಬ್ಬರ ಮೇಲೆ ಹಲ್ಲೆ ನಡೆಸಿದರಲ್ಲದೆ ಮುಖಕ್ಕೆ ಮಂಕಿ ಕ್ಯಾಪ್ ಹಾಕಿ ಎಲ್ಲಿಗೋ ಕರೆದೊಯ್ದು 30 ಕೋಟಿ ರೂ. ನೀಡುವಂತೆ ಒತ್ತಾಯಿಸಿದರು. ನಾನು ಪ್ರತಿದಾಳಿಗೆ ಯತ್ನಿಸಿದಾಗ ಮಾರಕಾಸ್ತŠಗಳಿಂದ ಹೊಡೆದು ಮತ್ತೊಂದು ವಾಹನದಲ್ಲಿ ಹತ್ತಿಸಿಕೊಂಡು ಸಾಗಿದರು. ತಪ್ಪಿಸಿಕೊಳ್ಳಲು ಯತ್ನಿಸಿದಾಗ ಮತ್ತೆ ಹಲ್ಲೆ ಮಾಡಿದರು. ಆಗ ನಾನು ಸತ್ತವನಂತೆ ನಟಿಸಿದೆ. ನಂತರ ರಸ್ತೆ ಪಕ್ಕದ ತೊಗರಿ ಹೊಲದೊಳಗೆ ನುಸುಳಿದೆ. ಕಾಲಿಗೆ ಬಿದ್ದ ಏಟಿನಿಂದ ನಡೆಯಲು ಕಷ್ಟವಾಯಿತು. ಹಳ್ಳಿಯೊಂದಕ್ಕೆ ಬಂದು ಗ್ರಾಮಸ್ಥರಿಂದ 200 ರೂ. ಪಡೆದು ಶ್ರೀನಿವಾಸಪುರ ಬಸ್ ಹತ್ತಿ ಊರಿಗೆ ಬಂದೆ ಎಂದು ಹೇಳಿದ್ದಾನೆ.ಗಾಯ ವಾಸಿಯಾದ ಮೇಲೆ ವರ್ತರ್ ಪ್ರಕಾಶ್ ಅವರನ್ನು ಭೇಟಿಯಾಗುವೆ. ನನಗೆ ತಿಳಿದ ಮಾಹಿತಿಯನ್ನು ಪೊಲೀಸರಿಗೂ ತಿಳಿಸಿರುವೆ. ಅವರು ಕರೆದಾಗ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿದ್ದಾನೆ.

    ಒತ್ತೆ ಹಣಕ್ಕಾಗಿಯೇ ಕಿಡ್ನ್ಯಾಪ್ ‘ಮಕ್ಕಳ ಮೇಲಾಣೆ’ ; ಇನ್ನೊಮ್ಮೆ ಎಂಎಲ್​ಎ ಆಗಬೇಕೆಂಬ ಆಸೆ ನನಗಿದೆ. ದಯವಿಟ್ಟು ತೇಜೋವಧೆ ಮಾಡಬೇಡಿ, ನನ್ನ ಮಕ್ಕಳ ಮೇಲೆ ಆಣೆ ಮಾಡುವೆ, ಹಸು, ಹೆಣ್ಣು, ಜಮೀನಿನ ವಿಚಾರಕ್ಕಾಗಿ ನನ್ನ ಅಪಹರಣ ನಡೆದಿಲ್ಲ. ಒತ್ತೆ ಹಣಕ್ಕಾಗಿಯೇ ದುಷ್ಕರ್ವಿುಗಳು ಅಪಹರಿಸಿದ್ದರು ಎಂದು ಮಾಜಿ ಸಚಿವ ವರ್ತರ್ ಪ್ರಕಾಶ್ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಎಸ್​ಪಿ ಕಾರ್ತಿಕ್​ರೆಡ್ಡಿ ಅವರನ್ನು ಶುಕ್ರವಾರ ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಎಸ್ಪಿ ಅವರಿಗೆ ತನಿಖೆ ಚುರುಕುಗೊಳಿಸುವಂತೆ ಮನವಿ ಮಾಡಿರುವೆ, ಶೀಘ್ರವೇ ಆರೋಪಿಗಳನ್ನು ಬಂಧಿಸುವ ನಂಬಿಕೆ ಇದೆ ಎಂದರು.

    ರಾಜ್ಯದವರಿಂದ ಅಪಹರಣ ನಡೆದಿದೆ : ವರ್ತೂರು ಪ್ರಕಾಶ್ ಅಪಹರಣಕ್ಕೆ ಸಂಬಂಧಿಸಿದಂತೆ ಈವರೆಗೆ 13 ಜನರ ವಿಚಾರಣೆ ನಡೆಸಿದ್ದು, ಆರೋಪಿಗಳ ಬಗ್ಗೆ ಮಹತ್ವದ ಸಾಕ್ಷ್ಯ ಸಿಕ್ಕಿದೆ ಎಂದು ಎಸ್ಪಿ ಕಾರ್ತಿಕ್​ರೆಡ್ಡಿ ತಿಳಿಸಿದ್ದಾರೆ. ಪ್ರಕರಣದ ವಿಚಾರವಾಗಿ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ. ವರ್ತರು ಪ್ರಕಾಶ್ ಅವರನ್ನು ನಮ್ಮ ರಾಜ್ಯದವರೇ ಅಪಹರಣ ಮಾಡಿರುವ ಬಗ್ಗೆ ಸುಳಿವು ಸಿಕ್ಕಿದೆ, ಆರೋಪಿಗಳನ್ನು ಸೆರೆ ಹಿಡಿಯಲು 4 ತಂಡ ರಚಿಸಲಾಗಿದ್ದು, ಅದಷ್ಟು ಬೇಗ ಬಂಧಿಸಲಾಗುವುದು ಎಂದು ಎಸ್​ಪಿ ಕಾರ್ತಿಕ್​ರೆಡ್ಡಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts