More

    ವರವಿ ಮೌನೇಶ್ವರ ಜಾತ್ರೋತ್ಸವ ಸೆ. 11ರಿಂದ

    ಶಿರಹಟ್ಟಿ: ತಾಲೂಕಿನ ಸುಕ್ಷೇತ್ರ ವರವಿ ಶ್ರೀ ಮೌನೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಸೆ. 11ರಿಂದ 15ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಂಗೀತಪರ ಕಾರ್ಯಕ್ರಮಗಳೊಂದಿಗೆ ವಿಶ್ವಕರ್ಮ ಮಠಾಧಿಪತಿಗಳು, ಪೀಠಾಧಿಪತಿಗಳು ಹಾಗೂ ಹರ ಗುರು ಚರಮೂರ್ತಿಗಳ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ಜರುಗಲಿದೆ.

    ಸೆ. 11ರಂದು ಬೆಳಗ್ಗೆ 9ಗಂಟೆಗೆ ಶಂಕರಾಚಾರ್ಯ ಕಡ್ಲಾಸ್ಕರ, ಮುಕುಂದಾಚಾರ್ಯ ಗುರುವಿಮ ಪೌರೋಹಿತ್ಯದಲ್ಲಿ ಮಹಾಯಜ್ಞ ನಡೆಯಲಿದೆ. ಮಧ್ಯಾಹ್ನ 12.15 ಕ್ಕೆ ಶಿವಲಿಂಗೇಶ್ವರ ಸ್ವಾಮೀಜಿ, ಮೌನೇಶ್ವರ ಸ್ವಾಮೀಜಿ, ಫಕೀರದಿಂಗಾಲೇಶ್ವರ ಸ್ವಾಮೀಜಿ, ಶಿವಕುಮಾರ ಸ್ವಾಮಿಗಳು, ಅಭಿನವ ನಾಗಲಿಂಗ ಸ್ವಾಮಿಗಳು, ಗದಗಯ್ಯಸ್ವಾಮಿಗಳ ಸಾನ್ನಿಧ್ಯ ಹಾಗೂ ಮಠದ ವಿಕಾಸ ಟ್ರಸ್ಟ್ ಕಮಿಟಿ ಅಧ್ಯಕ್ಷ ಸೋಮನಾಥ ಕುಂದಣ್ಣಗಾರ ಅಧ್ಯಕ್ಷತೆಯಲ್ಲಿ ಜಾತ್ರಾ ಮಹೋತ್ಸವದ ಉದ್ಘಾಟನೆ ನಡೆಯಲಿದೆ. ಸಚಿವ ಎಚ್.ಕೆ. ಪಾಟೀಲ, ಶಾಸಕ ಡಾ. ಚಂದ್ರು ಲಮಾಣಿ, ತಹಸೀಲ್ದಾರ್ ಅನಿಲ ಬಡಿಗೇರ, ಈರಣ್ಣ ರಿತ್ತಿ, ವಿ.ವಿ. ಕಪ್ಪತ್ತನವರ, ಬಸವರಾಜ ಹತ್ತಿಕಾಳ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಂಜೆ 5ಕ್ಕೆ ಮಹಾರಥೋತ್ಸವ ನಡೆಯಲಿದೆ.

    ಸೆ. 12ರಂದು ಸಂಜೆ 5ಕ್ಕೆ ಕಡುಬಿನ ಕಾಳಗ ನಡೆಯಲಿದೆ. ಸೆ. 15ರವರೆಗೆ ನಿತ್ಯ ಮಠದಲ್ಲಿ ಶ್ರೀ ಮೌನೇಶ್ವರ ಲೀಲಾ ವಿಲಾಸ ಪ್ರವಚನ ಹಾಗೂ ಧಾರ್ಮಿಕ ಸಭೆ, ಸಾಂಸ್ಕೃತಿಕ, ಸಂಗೀತ ಕಾರ್ಯಗಳು ನಡೆಯಲಿವೆ ಎಂದು ಜ. ಮೌನೇಶ್ವರ ದೇವಸ್ಥಾನ ಹಾಗೂ ಮಠದ ವಿಕಾಸ ಟ್ರಸ್ಟ್ ಕಮಿಟಿ ಪ್ರಕಟಣೆ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts