More

    ‘ಕಾಂತಾರ’ಕ್ಕೆ ಮತ್ತೊಂದು ಸಂಭ್ರಮ: ವಿವಾದದ ನಡುವೆಯೂ ನಂ.1 ಸ್ಥಾನ; ಏನದು?

    ಬೆಂಗಳೂರು: ದೇಶಾದ್ಯಂತ ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿರುವ ‘ಕಾಂತಾರ’ ಸಿನಿಮಾದ ಕುರಿತು ಕೆಲವರು ಟೀಕೆ ಮಾಡಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರೂ ಚಿತ್ರದ ಯಶಸ್ಸಿನ ಓಟಕ್ಕೆ ಅದ್ಯಾವುದೂ ಅಡ್ಡಿ ಮಾಡಿದಂತೆ ಕಾಣುತ್ತಿಲ್ಲ. ಏಕೆಂದರೆ ಅವುಗಳ ನಡುವೆಯೇ ‘ಕಾಂತಾರ’ ಇನ್ನೊಂದು ಸಂಭ್ರಮಕ್ಕೆ ಪಾತ್ರವಾಗಿದೆ.

    ‘ಕಾಂತಾರ’ದಲ್ಲಿನ ಕಥಾವಿಷಯಕ್ಕೆ ಸಂಬಂಧಿಸಿದಂತೆ ಹಿಂದೂ ಸಂಸ್ಕೃತಿಯ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ನೀಡಿರುವ ನಟ ಚೇತನ್ ವಿರುದ್ಧ ಬಹಳಷ್ಟು ಆಕ್ಷೇಪ ವ್ಯಕ್ತವಾಗಿದ್ದಲ್ಲದೆ, ರಾಜ್ಯದ ಕೆಲವೆಡೆ ದೂರುಗಳು ಕೂಡ ದಾಖಲಾಗಿವೆ. ಜತೆಗೆ, ‘ಕಾಂತಾರ’ದಲ್ಲಿನ ಹಾಡೊಂದರ ಪಲ್ಲವಿಯಲ್ಲಿ ‘ವರಾಹರೂಪಂ’ ಎಂಬ ಪದ ಬಳಸಿದ್ದಕ್ಕೆ ಚೇತನ್ ಹಾಗೂ ಇನ್ನಿತರರು ತಕರಾರು ತೆಗೆದಿದ್ದರು.

    ಇದೆಲ್ಲದರ ಮಧ್ಯೆ ನಿರ್ಮಾಣ ಸಂಸ್ಥೆಯಾಗಿರುವ ಹೊಂಬಾಳೆ ಫಿಲ್ಮ್ಸ್ ತನ್ನ ಅಧಿಕೃತ ಯೂಟ್ಯೂಬ್​ ಚಾನೆಲ್​ನಲ್ಲಿ ನಿನ್ನೆಯಷ್ಟೇ ‘ವರಾಹರೂಪಂ’ ಗೀತೆ ಬಿಡುಗಡೆ ಮಾಡಿದ್ದು, ಒಂದೇ ದಿನದಲ್ಲಿ ಅದು 39 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಮಾತ್ರವಲ್ಲ, ಯೂಟ್ಯೂಬ್​ ಟ್ರೆಂಡಿಂಗ್​ನಲ್ಲಿ ನಂ. 1 ಸ್ಥಾನದಲ್ಲಿದೆ. ಶಶಿರಾಜ್ ಕಾವೂರು ಈ ಗೀತೆಯ ಸಾಹಿತ್ಯ ರಚಿಸಿದ್ದು, ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯಲ್ಲಿ ಸಾಯಿ ವಿಘ್ನೇಶ್ ಹಾಡಿದ್ದಾರೆ.

    ಇದಕ್ಕೂ ಮೊದಲು ‘ಕಾಂತಾರ’ ಐಎಂಡಿಬಿಯಲ್ಲಿ ಅತ್ಯಧಿಕ ರೇಟಿಂಗ್ ಪಾಯಿಂಟ್ (9.6) ಪಡೆದುಕೊಂಡ ಭಾರತೀಯ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಅಲ್ಲದೆ ಮುಂಬೈನ ಮರಾಠ ಮಂದಿರದಲ್ಲಿ ಡಬ್ಬಿಂಗ್ ಇಲ್ಲದೆ ಕನ್ನಡದಲ್ಲೇ ಬಿಡುಗಡೆಯಾದ ಪ್ರಪ್ರಥಮ ದಕ್ಷಿಣಭಾರತೀಯ ಸಿನಿಮಾ ಎಂಬ ಖ್ಯಾತಿಗೂ ‘ಕಾಂತಾರ’ ಪಾತ್ರವಾಗಿದೆ. ಮುಂಬೈನಲ್ಲಿ ಅತ್ಯಧಿಕ ಶೋಗಳನ್ನು ಪಡೆದ ಪ್ರಪ್ರಥಮ ಕನ್ನಡ ಸಿನಿಮಾ ಎಂಬ ಪ್ರಸಿದ್ಧಿಗೂ ‘ಕಾಂತಾರ’ ಭಾಜನವಾಗಿದೆ.

    'ಕಾಂತಾರ'ಕ್ಕೆ ಮತ್ತೊಂದು ಸಂಭ್ರಮ: ವಿವಾದದ ನಡುವೆಯೂ ನಂ.1 ಸ್ಥಾನ; ಏನದು?

    ಚೇತನ್​ಗೆ ಯಾಕೆ ಉರಿ? ಎಂದು ಕಿಡಿಕಾರಿದ ಮುತಾಲಿಕ್​; ಹೇಳಿಕೆ ವಾಪಸ್ ಪಡೆಯಲು ಆಗ್ರಹ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts