More

    ಸಂಸದ ವಿ.ಶ್ರೀನಿವಾಸಪ್ರಸಾದ್ ಅವರ ನಿಧನದಿಂದ ಒಬ್ಬ ಸ್ನೇಹಿತನನ್ನು ಕಳೆದುಕೊಂಡು ದುಃಖವಾಗಿದೆ: ಸಿದ್ದರಾಮಯ್ಯ

    ಮೈಸೂರು: ಸಂಸದ ವಿ.ಶ್ರೀನಿವಾಸಪ್ರಸಾದ್ ಅವರ ನಿಧನದಿಂದ ಒಬ್ಬ ಸ್ನೇಹಿತನನ್ನು ಕಳೆದುಕೊಂಡು ದುಃಖವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಬನಿ ಮಿಡಿದರು.

    ಶ್ರೀನಿವಾಸಪ್ರಸಾದ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಾದ್ ಅವರು ರಾಜಕೀಯದಲ್ಲಿ ನೇರ ನುಡಿಗೆ ಹೆಸರಾಗಿದ್ದವರು, ಸಮಾಜದ ಅಸಮಾನತೆ ಹೋಗಲಾಡಿಸಲು ಹೋರಾಟ ಮಾಡಿದವರು. ಬಾಬಾ ಸಾಹೇಬ್ ಅಂಬೇಡ್ಕರ್ ತತ್ವ ಸಿದ್ದಾಂತ ಅನುಸರಿಸಿದರು. ಅವರು ಕೇಂದ್ರ ಮಂತ್ರಿಯಾಗಿ, ರಾಜ್ಯದ ಮಂತ್ರಿಯಾಗಿದ್ದರು. ರಾಜಕೀಯದಲ್ಲಿ ಸೋಲು-ಗೆಲುವು ಸಾಮಾನ್ಯ. 50 ವರ್ಷಗಳ ಕಾಲ ಸಕ್ರಿಯ ರಾಜಕಾರಣ ಮಾಡಿದ್ದ ಅವರು, ಇತ್ತೀಚೆಗೆ ರಾಜಕೀಯದಿಂದ ನಿವೃತ್ತಿ ಹೊಂದಿದ್ದರು. ಅಲ್ಲದೇ ಲೋಕಸಭಾ ಚುನಾವಣೆಯಲ್ಲಿ ಯಾರಿಗೂ ಕ್ಯಾಂಪೇನ್ ಮಾಡಲ್ಲ ಎಂದಿದ್ದರು. ಪ್ರಸಾದ್ ಅವರದ್ದು ಹೋರಾಟದ ಬದುಕಾಗಿತ್ತು, ಅವರ ಸಾವಿನಿಂದ ರಾಜ್ಯಕ್ಕೆ ನಷ್ಟವಾಗಿದೆ.

    ಶ್ರೀನಿವಾಸಪ್ರಸಾದ್ ಅವರಿಗೆ ಜ್ಞಾಪನ ಶಕ್ತಿ ಚೆನ್ನಾಗಿತ್ತು. ಮೊನ್ನೆ ನಾನು ಆಸ್ಪತ್ರೆಗೆ ಭೇಟಿ ನೀಡಿದ್ದಾಗ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಆರೋಗ್ಯ ಸುಧಾರಿಸುವ ವಿಶ್ವಾಸವಿತ್ತು. ಅವರ ಕುಟುಂಬದವರ ಜೊತೆಗೂ ಮಾತನಾಡಿದ್ದೆ, ಕಿಡ್ನಿ ಫೇಲ್ ಆಗಿದ್ದರು ಅವರ ವಿಲ್ ಪವರ್ ಚೆನ್ನಾಗಿ ಇತ್ತು. ನಾನು ಅವರು ಒಂದೇ ವಯಸ್ಸಿನವರು. ಬಹಳ ವರ್ಷಗಳ ನಂತರ ನನ್ನ ಅವರ ಭೇಟಿ ಸಂತಸ ತಂದಿತ್ತು. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದ ಅವರು, ಈಗಾಗಲೇ ಮೈಸೂರು ಚಾಮರಾಜನಗರ ಜಿಲ್ಲೆಗೆ ಮಂಗಳವಾರ ರಜೆ ಘೋಷಣೆ ಮಾಡಿದ್ದೇವೆ. ರಾಜ್ಯ ಸರ್ಕಾರದ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸುತ್ತೇವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts